ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಗರ್ಲ್ ಫ್ರೆಂಡ್ #GirlFriend ಜೊತೆಯಲ್ಲಿ OYO ರೂಂಗೆ ಹೋಗುತ್ತಿದ್ದವರಿಗೆ ಬಿಗ್ ಶಾಕ್ ನೀಡಲಾಗಿದ್ದು, ರೂಂ ಬಾಡಿಗೆ ಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
ದೇಶದಾದ್ಯಂತ ಓಯೋ ಹೋಟೆಲ್ ಜನಪ್ರಿಯತೆ ಪಡೆದುಕೊಂಡಿದ್ದು, ಧಾರ್ಮಿಕ ಪ್ರದೇಶಗಳಲ್ಲಿ ಈ #OYO ರೂಂಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಇದೀಗ ರೂಂಗಳನ್ನು ಬಾಡಿಗೆಗೆ ಪಡೆಯುವ ನಿಯಮಗಳಲ್ಲಿ ಬದಲಾವಣೆ ತರಲಾಗಿದ್ದು, ಆರಂಭದಲ್ಲಿ ಮೀರತ್ ನಗರದಲ್ಲಿ ಇದು ಜಾರಿಯಾಗಿದೆ.
Also Read>> ಸಂಗೀತವನ್ನು ನಿತ್ಯದ ತಪಸ್ಸಿನಂತೆ ಅಭ್ಯಾಸ ಮಾಡಬೇಕು | ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಸಲಹೆ
ಮುಂದಿನ ದಿನಗಳಲ್ಲಿ ಶೀಘ್ರವೇ ಎಲ್ಲಾ ರಾಜ್ಯಗಳಲ್ಲಿಯೂ ಈ ನಿಯಮ ಜಾರಿಗೆ ತರಲು ಓಯೋ ಉದ್ದೇಶಿಸಿದೆ ಎಂದು ವರದಿಯಾಗಿದೆ.
ಹೊಸ ನಿಯಮಗಳು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ಸಮಯ ಕಳೆಯಲು ಓಯೋ ರೂಂ ಬುಕ್ ಮಾಡುತ್ತಿದ್ದ ಪ್ರೇಮಿಗಳಿಗೆ ಇದು ನಿರಾಸೆಯಾಗಿದೆ.
ಆದರೆ, ಧಾರ್ಮಿಕ ಕ್ಷೇತ್ರಗಳಲ್ಲಿ ಓಯೋ ರೂಂ ಬುಕ್ ಮಾಡುತ್ತಿದ್ದ ಭಕ್ತಾದಿಗಳು ಹೊಸ ನಿಯಮವನ್ನು ಸ್ವಾಗತಿಸಿದ್ದಾರೆ.
ಏನಿದು ಹೊಸ ನಿಯಮ?
ಇನ್ಮುಂದೆ ಓಯೋ ರೂಂ ಬುಕ್ ಮಾಡಲು ಹಲವು ನಿಯಮಗಳನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ.
- ಗ್ರಾಹಕರು ಚೆಕ್-ಇನ್ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿ ಮತ್ತು ಅವರೊಂದಿಗೆ ಆಗಮಿಸುವವರ ಪ್ರಮಾಣಪತ್ರವನ್ನು ನೀಡಬೇಕು
- ಆನ್’ಲೈನ್’ನಲ್ಲಿ ರೂಂ ಅಥವಾ ಆಫ್ ಲೈನ್ ಬುಕ್ಕಿಂಗ್ ಮಾಡಿದರೂ ಸಹ ಎಲ್ಲಾ ದಾಖಲೆಗಳನ್ನು ನೀಡುವುದು ಅನಿವಾರ್ಯ
- ಸ್ಥಳೀಯ ಸಾಮಾಜಿಕ ನಂಬಿಕೆಗಳ ಆಧಾರದಲ್ಲಿ ದಂಪತಿಗಳ ಬುಕ್ಕಿಂಗ್ ಅನ್ನು ತಿರಸ್ಕರಿಸಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post