ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಕೊಂಚ ಕಡಿಮೆಯಾದಂತಿದ್ದ ಕೊರೋನಾ ಪಾಸಿಟಿವ್ ನಿನ್ನೆಯಿಂದ ಮತ್ತೆ ಹೆಚ್ಚಳವಾಗಿದ್ದು, ಇಂದು ಬರೋಬ್ಬರಿ 35 ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶ್ವೇಶ್ವರ ನಗರದ 38 ವರ್ಷದ ಮಹಿಳೆ ಮತ್ತು 1 ವರ್ಷದ ಬಾಲಕಿ, ಕಡದಕಟ್ಟೆಯ 25 ವರ್ಷದ ಮಹಿಳೆ, ಭಂಡಾರಹಳ್ಳಿಯ 44 ವರ್ಷದ ಪುರುಷ, ಹೊಸಸಿದ್ದಾಪುರದ 41 ವರ್ಷದ ಪುರುಷ, 11ವಷದ ಬಾಲಕಿ, 31 ವರ್ಷ ಮತ್ತು 28 ವರ್ಷದ ಮಹಿಳೆ, ಹುಡ್ಕೋ ಕಾಲೋನಿಯ 41 ವರ್ಷದ ಪುರುಷ, ಜನ್ನಾಪುರ ಲಿಂಗಾಯಿತರ ಬೀದಿಯ 42, 17 ಮತ್ತು 64, 54 ಮತ್ತು 40 ವರ್ಷದ ಐವರು ಪುರುಷರು ಹಾಗೂ 56 ವರ್ಷದ ಮಹಿಳೆ, ಜೇಡಿಕಟ್ಟೆಯ 48 ವರ್ಷದ ಮಹಿಳೆ, ದೊಡ್ಡಗೊಪ್ಪೇನ ಹಳ್ಳಿಯ 40 ವರ್ಷದ ಪುರುಷ, ಹಳೇನಗರ ಮರಾಠಬೀದಿಯ 32 ವರ್ಷದ ಪುರುಷ ಮತ್ತು 73 ವರ್ಷದ ವೃದ್ಧೆ, ಬಿಎಚ್ ರಸ್ತೆಯ 10ನೆಯ ಕ್ರಾಸ್’ನ 40 ವರ್ಷದ ಪುರುಷ, ಕನಕನಗರದ 65 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಸೋಂಕಿತರ ನಿವಾಸದ ಪ್ರದೇಶಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಸಿಬ್ಬಂದಿ ನೀಲೇಶ್ ರಾಜ್, ನಗರಸಭೆ ಪೌರಾಯುಕ್ತ ಮನೋಹರ್, ನಗರಸಭೆ ಆರೋಗ್ಯಾಧಿಕಾರಿ ಲತಾ, ಪರಿಸರ ಇಂಜನಿಯರ್ ರುದ್ರೇಗೌಡ, ಅವರುಗಳು ಭೇಟಿ ನೀಡಿ ಸೋಂಕಿತರನ್ನು ಕೋಡ್ ಆಸ್ಪತ್ರೆಗೆ ಕಳುಹಿಸಿ ಅವರ ನಿವಾಸದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿದರು.
ಹೊಳೆಹೊನ್ನೂರು
62, 34 ಮತ್ತು 38 ವರ್ಷದ ಮೂವರು ಪುರುಷರು, 6 ವರ್ಷದ ಮಗು, 24 ವರ್ಷದ ಮಹಿಳೆ, ಸಂಕ್ಲೀಪುರದ 27 ವರ್ಷದ ಹೆಣ್ಣು, ನಾಗತಿ ಬೆಳಗಲು 25 ಮತ್ತು 52 ವರ್ಷದ ಪುರುಷರು, ಶ್ರೀರಾಮನಗರದ 64 ವರ್ಷದ ಹೆಣ್ಣು, ದಡಂಘಟ್ಟೆದ 3 2ವರ್ಷದ ಪುರುಷ, ಕೂಡ್ಲಿಗೆರೆ ಮುಸ್ಲೀಂ ಕಾಲೋನಿಯ ಹಣ್ಣು ತರಕಾರಿ ಮಾರಾಟ ಮಾಡುವ ಸಂಚಾರಿ ವ್ಯಾಪಾರಿ 38 ವರ್ಷದ ಪುರುಷನಲ್ಲಿ ಪಾಸಿಟಿವ್ ಕಂಡುಬಂದಿದೆ.
ಅಲ್ಲಿನ ಆರೋಗ್ಯಾಧಿಕಾರಿ ಡಾ.ಜಗದೀಶ್ ಹಾಗೂ ಸಿಬ್ಬಂದಿಗಳು ತಾಪಂ, ಗ್ರಾಪಂ ಸಿಬ್ಬಂದಿಗಳು ಸೀಲ್ ಡೌನ್ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post