ಕಲ್ಪ ಮೀಡಿಯಾ ಹೌಸ್ | ಅಮರಾವತಿ |
ಕಲಿಯುಗದ ಭೂವೈಕುಂಠ ಎಂದೇ ಕೋಟ್ಯಾಂತರ ಭಕ್ತರು ನಂಬುವ ತಿರುಪತಿ #Tirupati ತಿಮ್ಮಪ್ಪನ ಲಡ್ಡು ಪ್ರಸಾದವನ್ನು ಕಳೆದ ನಾಲ್ಕು ವರ್ಷದಲ್ಲಿ ಸೇವಿಸದವರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ತಿರುಪತಿ ದೇವಾಲಯದ ಲಡ್ಡು #Laddu ಪ್ರಸಾದವನ್ನು ಇಷ್ಟ ಪಡದವರೇ ಇಲ್ಲ. ಆದರೆ, ಈ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು #AnimalFat ಬಳಲಾಗುತ್ತಿರುವ ಕುರಿತಾಗಿ ಕೇಳಿಬಂದಿದ್ದ ಆರೋಪ ಈಗ ದೃಢಪಟ್ಟಿದೆ.
ಹೌದು… ತಿರುಪತಿ ದೇವಸ್ಥಾನದಲ್ಲಿ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ದನದ ಕೊಬ್ಬು, #BeefFat ಹಂದಿ ಕೊಬ್ಬು, ಮೀನಿನ ಎಣ್ಣೆಯನ್ನು #Fishoil ಬಳಸಲಾಗಿದೆ ಎಂದು ಪರೀಕ್ಷಾ ವರದಿ ದೃಢಪಡಿಸಿದೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್’ಆರ್ ಕಾಂಗ್ರೆಸ್ #YSRCongress ಪಕ್ಷ ಅಧಿಕಾರದಲ್ಲಿದ್ದ ವೇಳೆ ತಿರುಪತಿ ದೇವಾಲಯದಲ್ಲಿ ಬಹಳಷ್ಟು ವಿವಾದದ ಸುದ್ದಿಗಳು ಹೊರಬಿದ್ದಿದ್ದವು.
ಇದೇ ರೀತಿ ಈಗ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬ ಬಳಕೆ ಕುರಿತಾಗಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಹಾಲಿ ಸಿಎಂ ಚಂದ್ರಬಾಬು ನಾಯ್ಡು ನೇರ ಆರೋಪ ಮಾಡಿದ್ದರು.
ಇದೀಗ ಲಡ್ಡು ತಯಾರಿಕೆಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಬಳಸುತ್ತಿದ್ದ ತುಪ್ಪವನ್ನು ಲ್ಯಾಬ್’ಗೆ ಕಳುಹಿಸಿದ್ದು, ವರದಿ ಹೊರಬಿದ್ದಿದೆ.
ಇದರಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎಂದು ಪರೀಕ್ಷಾ ವರದಿ ದೃಢಪಡಿಸಿದೆ.
ಇನ್ನು, ಇದೇ ವೇಳೆ ಕಳೆದ ನಾಲ್ಕು ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಅವರಿಂದ ತುಪ್ಪವನ್ನು ಖರೀದಿಸಿಲ್ಲ ಎಂದು ಕರ್ನಾಟಕ ಹಾಲು ಒಕ್ಕೂಟ ಹೇಳಿದೆ.
ಆಂಧ್ರಪ್ರದೇಶದಲ್ಲಿ ಎನ್’ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅದು ನಂದಿನಿ ತುಪ್ಪವನ್ನು ಪೂರೈಸುತ್ತಿದೆ. ಇದಕ್ಕೂ ಮುನ್ನ ಅಂದರೆ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನಂದಿನಿ ತುಪ್ಪದ ಬದಲಾಗಿ ಬೇರೆ ಕಡೆಗಳಿಂದ ತರಿಸಲಾದ ತುಪ್ಪವನ್ನು ಬಳಸಲಾಗುತ್ತಿತ್ತು.
ಈ ಕುರಿತಂತೆ ಮಾತನಾಡಿರುವ ಸಿಎಂ ಚಂದ್ರಬಾಬು ನಾಯ್ಡು, ವೈಎಸ್’ಆರ್ ಆಳ್ವಿಕೆಯಲ್ಲಿ ತಿರುಪತಿ ಲಡ್ಡೂಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ದೃಢಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post