ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಟಿಪ್ಪು ನಗರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರೌಡಿ ಶೀಟರ್ ದೀಪು ಯಾನೆ ಡಿಂಗಾನ ಮೇಲೆ ತುಂಗಾ ನಗರ ಠಾಣೆ ಪೊಲೀಸರ್ ಫೈರಿಂಗ್ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಪಿನಕಟ್ಟೆಯ ಬಳಿ ಆರೋಪಿಯನ್ನು ಕರೆ ತರುವಾಗಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತುಂಗಾ ನಗರ ಠಾಣೆ ಇನ್ಸ್’ಪೆಕ್ಟರ್ ದೀಪಕ್ ಅವರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿ ಎಡಗಾಲಿಗೆ ಗುಂಡಿನೇಟು ತಗುಲಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೆ.16 ರಂದು ಶಿವಮೊಗ್ಗದ ಟಿಪ್ಪುನಗರದ 7 ನೆಯ ತಿರುವಿನಲ್ಲಿದ್ದ ಡಬ್ಬಲ್ ಟು ಹಾಗೂ ಸಹೋದರ ಸಯ್ಯದ್ ಸಾದಿಕ್ ಮೇಲೆ ಹಫ್ತಾ ವಸೂಲಿ ನೀಡದಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಜ್ಜಾ ಯಾನೆ ಜುಬೇರ್ ನಿರ್ದೇಶನದ ನೇರೆಗೆ ದೀಪು ಹಫ್ತಾ ವಸೂಲಿಗೆ ಇಳಿದಿದ್ದ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post