Read - < 1 minute
ಕಲ್ಪ ಮೀಡಿಯಾ ಹೌಸ್ | ಶ್ರೀಹರಿಕೋಟಾ(ಆಂಧ್ರಪ್ರದೇಶ) |
ಭಾರತದ ಮೊತ್ತೊಂದು ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭವಾಗಿದ್ದು, ನಮ್ಮ ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಪಗ್ರಹ ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ ಕನಸಿನ ಚಂದ್ರಯಾನ-3ರ ಕುರಿತಾಗಿ ಪ್ರತಿ ಭಾರತೀಯನೂ ತಿಳಿದುಕೊಳ್ಳಬೇಕಾದ 12 ಅಂಶಗಳು ಇಲ್ಲಿವೆ:
- ಚಂದ್ರಯಾನ-3 ಬಾಹುಬಲಿ ರಾಕೇಟ್ ಎಂದೇ ಹೆಸರಾದ ಜಿಎಸ್’ಎಲ್’ವಿ ಮಾರ್ಕ್ 3 ರಾಕೇಟ್ ಇದನ್ನು ಹೊತ್ತೊಯ್ಯಲಿದೆ.
- ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿರುವ ಚಂದ್ರಯಾನ-3 40 ದಿನಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಿ, ಬಹುತೇಕ ಆಗಸ್ಟ್ 23-24ರಂದು ಚಂದ್ರನ ಮೇಲೆ ಲ್ಯಾಂಡ್ ಆಗುವ ಸಾಧ್ಯತೆಯಿದೆ.
- ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್ಎಲ್’ವಿ ಮಾರ್ಕ್ 3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ ಅನ್ನು ಅಳವಡಿಸಲಾಗಿದೆ. ಇದು 43.5 ಮೀ ಎತ್ತರವಿದ್ದು, ಕುತುಬ್ ಮಿನಾರ್ ಅರ್ಧಕ್ಕಿಂತಲೂ ಹೆಚ್ಚು ಎತ್ತರವಾಗಿದೆ.
- 3900 ಕೆಜಿ ತೂಕ ಹೊಂದಿರುವ ಈ ಉಪಗ್ರಹದ ಚಂದ್ರಯಾನ-3 ಯೋಜನೆಗೆ ಒಟ್ಟು 615 ಕೋಟಿ ರೂ. ವೆಚ್ಚ ಮಾಡಲಾಗಿದೆ.
- ಪ್ರಮುಖವಾಗಿ ಪುರುಷ ವಿಜ್ಞಾನಿಗಳೊಂದಿಗೆ 54 ಮಹಿಳಾ ವಿಜ್ಞಾನಿ ಹಾಗೂ ಸಿಬ್ಬಂದಿಗಳು ಇದರಲ್ಲಿ ಕೊಡುಗೆ ನೀಡುವುದು ವಿಶೇಷ.
6. ವಿಕ್ರಮ್ ಸುರಕ್ಷಿತ ಹಾಗೂ ನಾಜೂಕಿನಿಂದ ಚಂದ್ರನ ಮೇಲೆ ಇಳಿಯುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. - ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೆÊ ಸುತ್ತಲೂ ತಿರುಗಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸಲು ವಿಜ್ಞಾನಿಗಳು ವಾಹಕವನ್ನು ರೂಪಿಸಿದ್ದಾರೆ.
- ಚಂದ್ರಯಾನ-2ರ ಲ್ಯಾಂಡಿAಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತಿರುವ ವಿಜ್ಞಾನಿಗಳು, ಈ ಬಾರಿ ಲ್ಯಾಂಡರ್’ನಲ್ಲಿ ಎಂಜಿನ್’ಗಳ ಸಂಖ್ಯೆಯನ್ನು ಐದರಿಂದ ನಾಲ್ಕಕ್ಕೆ ಇಳಿಕೆ ಮಾಡಲಾಗಿದೆ. ಮಾತ್ರವಲ್ಲದೇ ಸಾಫ್ಟ್ ವೇರ್ ಅನ್ನೂ ಸಹ ಉನ್ನತೀಕರಿಸಲಾಗಿದೆ.
- 2008ರಲ್ಲಿ ಭಾರತದ ಮೊದಲ ಚಂದ್ರಯಾನ ಸಮಯದಲ್ಲಿ ಆದ ಸಂಶೋಧನೆಯೊAದು ಜಗತ್ತನ್ನೇ ವಿಸ್ಮಯಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಣುಗಳು ಕಂಡುಬAದಿದ್ದು, ಇದೀಗ ಚಂದ್ರಯಾನ-3 ಮೊದಲ ಬಾರಿಗೆ ಅದೇ ಸ್ಥಳದಲ್ಲಿ ಇಳಿಯಲಿದೆ.
- ಚಂದ್ರಯಾನ-3ರಲ್ಲಿ ಆರ್ಬಿಟರ್ ಬದಲಾಗಿ, ಕೇವಲ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಾಡ್ಯೂಲ್ ಮಾತ್ರ ಇವೆ. ಏಕೆಂದರೆ ಚಂದ್ರಯಾನ-2ರಲ್ಲಿ ಪ್ರಯೋಗಿಸಿದ್ದ ಆರ್ಬಿಟರ್ 3 ವರ್ಷಗಳಿಂದ ಚಂದ್ರನ ಸುತ್ತ ತಿರುಗುತ್ತಾ ತನ್ನ ಕೆಲಸವನ್ನು ಮಾಡುತ್ತಿದೆ.
- ಚಂದ್ರಯಾನ-1 ಚಂದ್ರನ ಕಾರ್ಯಾಚರಣೆಯ ಭಾರತದ ಮೊದಲ ಮಿಷನ್ ಆಗಿತ್ತು. ಅಕ್ಟೋಬರ್ 2008 ರಲ್ಲಿ ಪ್ರಾರಂಭವಾದ ಮಿಷನ್ 2009ರ ಆಗಸ್ಟ್ ವರೆಗೆ ಕಾರ್ಯನಿರ್ವಹಿಸಿತ್ತು.
- 1969ರಲ್ಲಿ ಅಮೆರಿಕಾದ ನಾಸಾ ಕಳಿಸಿದ ಅಪೋಲೋ 11 ಎಂಬ ಮಾನವಸಹಿತ ರಾಕೆಟ್ 4 ದಿನಗಳಲ್ಲಿ ಗಮ್ಯ ಸ್ಥಾನವನ್ನು ಸೇರಿತ್ತು. ಆದರೆ ಇಸ್ರೋ ಜುಲೈ 14 ರಂದು ಕಳಿಸುತ್ತಿರುವ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಸೇರಲು 40 ದಿನ ಹಿಡಿಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post