ಕಲ್ಪ ಮೀಡಿಯಾ ಹೌಸ್ | ಶ್ರೀಹರಿಕೋಟಾ |
ಭಾರತದ ಬಾಹುಬಲಿ ರಾಕೆಟ್ ಮಾರ್ಕ್-3 (LVM3)-M6 #Bahubali Rocket Mark-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ #Sriharikota – Andhra Pradesh ಅಮೆರಿಕಾದ ಬ್ಲೂಬರ್ಡ್-6 ಉಪಗ್ರಹವನ್ನು #America’s Bluebird-6 satellite ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದು, ಈ ಮೂಲಕ ಇಸ್ರೋ #ISRO ಮತ್ತೊಂದು ಇತಿಹಾಸ ಸೃಷ್ಠಿಸಿದೆ.
`ಬ್ಲೂಬರ್ಡ್ ಬ್ಲಾಕ್-2′ ಉಪಗ್ರಹವನ್ನು #`Bluebird Block-2′ ಇಂದು ಬೆಳಿಗ್ಗೆ 8.55ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್’ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಉಡಾವಣೆಯಾದ ಸುಮಾರು 15 ನಿಮಿಷಗಳ ನಂತರ ಕೆಳ ಭೂಮಿಯ ಕಕ್ಷೆಗೆ ಸೇರಿಸಿತು.
ಈ ಕುರಿತಂತೆ ಮಾತನಾಡಿರುವ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್’ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ. ಉಪಗ್ರಹ ಉಡಾವಣೆ ಯಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ #PM Narendra Modi ಇಸ್ರೋವನ್ನು ಅಭಿನಂದಿಸಿದ್ದಾರೆ. ಯಶಸ್ವಿಯಾಗಿ ಮತ್ತು ನಿಖರವಾಗಿ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ ಎಂದು ತಿಳಿಸಿದ್ದಾರೆ.
ಈ ಸಂವಹನ ಉಪಗ್ರಹವನ್ನು ಅಮೆರಿಕದ ಎಎಸ್ಟಿ ಸ್ಪೇಸ್ಮೊಬೈಲ್ ಅಭಿವೃದ್ಧಿಪಡಿಸಿದೆ. ಇದು ಮುಂದಿನ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹದ ಭಾಗವಾಗಿದ್ದು, ಪ್ರಮಾಣಿತ ಮೊಬೈಲ್ ಸ್ಮಾರ್ಟ್ ಫೋನ್’ನಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್ ಬ್ಯಾಡ್ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಬ್ಲೂಬರ್ಡ್ ಬ್ಲಾಕ್-2 ಮಿಷನ್ ಜಾಗತಿಕ LEO ಸಮೂಹದ ಭಾಗವಾಗಿದ್ದು, ಇದು ಉಪಗ್ರಹದ ಮೂಲಕ ನೇರ-ಮೊಬೈಲ್ ಸಂಪರ್ಕವನ್ನು ಒದಗಿಸುತ್ತದೆ. ಈ ಸಮೂಹವು 4G ಮತ್ತು 5G ಧ್ವನಿ ಮತ್ತು ವೀಡಿಯೊ ಕರೆಗಳು, ಪಠ್ಯಗಳು, ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಎಲ್ಲರಿಗೂ, ಎಲ್ಲೆಡೆ, ಎಲ್ಲಾ ಸಮಯದಲ್ಲೂ ಸಕ್ರಿಯಗೊಳಿಸುತ್ತದೆ.
ಇದು 223m ಹಂತದ ಶ್ರೇಣಿಯನ್ನು ಹೊಂದಿದೆ, ಇದು ಭೂಮಿಯ ಕೆಳ ಕಕ್ಷೆಗೆ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಬ್ಲೂಬರ್ಡ್-6 ಉಪಗ್ರಹ ಇಲ್ಲಿಯ ತನಕ ಭಾರತೀಯ ರಾಕೆಟ್ ಬಾಹ್ಯಾಕಾಶಕ್ಕೆ ಒಯ್ದಿರುವ ಅತ್ಯಂತ ತೂಕದ ಉಪಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ. ಎಲ್‌ವಿಎಂ3 ರಾಕೆಟ್ ಒಟ್ಟು ಎಂಟು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಸ್ತುತ ಉಡಾವಣಾ ಯೋಜನೆ ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮತ್ತು ಅಮೆರಿಕಾ ಮೂಲದ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆಗಳ ನಡುವೆ ನಡೆದಿರುವ ವಾಣಿಜ್ಯಿಕ ಒಪ್ಪಂದದ ಭಾಗವಾಗಿದೆ. ಒಂದು ಉಡಾವಣಾ ಸೇವೆ ಒದಗಿಸುವ ಸಂಸ್ಥೆಯಾಗಿ ಇಸ್ರೋ ವಿದೇಶೀ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ ಆದಾಯ ಸಂಪಾದಿಸುತ್ತದೆ.
ಎನ್‌ಎಸ್‌ಐಎಲ್ ಮೂಲಕ ನಿರ್ವಹಿಸಲ್ಪಡುವ ಈ ವಾಣಿಜ್ಯಿಕ ಉಡಾವಣೆಗಳು ಒಂದು ರೀತಿ ಟ್ಯಾಕ್ಸಿ ಸೇವೆಯಂತೆ ಕಾರ್ಯಾಚರಿಸುತ್ತವೆ. ಇಲ್ಲಿ ಅಮೆರಿಕದ ಕಂಪನಿ ಪ್ರಯಾಣಿಕನಾಗಿದ್ದು, ಉಡಾವಣೆ ನಡೆಸಿಕೊಟ್ಟದ್ದಕ್ಕೆ ಭಾರತ ಸರ್ಕಾರಕ್ಕೆ ಹಣ ಪಾವತಿಸುತ್ತದೆ.
ಇದು 223M ಹಂತದ ಶ್ರೇಣಿಯನ್ನು ಹೊಂದಿದೆ, ಇದು ಭೂಮಿಯ ಕೆಳ ಕಕ್ಷೆಗೆ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















