ಕಲ್ಪ ಮೀಡಿಯಾ ಹೌಸ್ | ಶ್ರೀನಗರ |
ಪೂಂಚ್‌ನ ಸುರನ್‌ಕೋಟ್ ಅರಣ್ಯದಲ್ಲಿ ಭಾರತೀಯ ಸೇನೆ #Indian Army ಮತ್ತು ಜಮ್ಮು ಮತ್ತು ಕಾಶ್ಮೀರ #Jammu and Kashmir ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಸೇನೆ ಭೇದಿಸಿದ್ದು, 5 ಜೀವಂತ ಬಾಂಬ್ ವಶಕ್ಕೆ ಪಡೆದಿದೆ.
ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕರು #Terrorist ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಸೇನೆ ಭೇದಿಸಿದ್ದು, 5 ಸ್ಫೋಟಕಗಳು, ಐಇಡಿಯಿದ್ದ 3 ಟಿಫನ್ ಬಾಕ್ಸ್, 2 ಸ್ಟೀಲ್ ಬಕೆಟ್ ಪತ್ತೆಯಾಗಿವೆ. ಈ ಮೂಲಕ ಭಾರತೀಯ ಸೇನೆಯು ಅತಿದೊಡ್ಡ ದುರಂತವನ್ನು ತಪ್ಪಿಸಿದೆ.
ಭದ್ರತಾ ಪಡೆಯು ಅಡಗುತಾಣದಲ್ಲಿ ಪತ್ತೆಯಾದ ಸಂಹವನ ಉಪಕರಣವನ್ನು ವಶಕ್ಕೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಭಯೋತ್ಪಾದಕ ಕೇಂದ್ರಬಿಂದುವಾಗಿದೆ. ಅಲ್ಲದೇ ಪಹಲ್ಗಾಮ್ ದಾಳಿಯ ಬಳಿಕ ಉಗ್ರರು ಜಮ್ಮು ಕಾಶ್ಮೀರದಲ್ಲಿ ಮತ್ತೆ ದಾಳಿಗೆ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post