ಕಲ್ಪ ಮೀಡಿಯಾ ಹೌಸ್
ಶ್ರೀನಗರ: ಮಾಜಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ಉಗ್ರರು ದಾಳಿ ಮಾಡಿ ಅಧಿಕಾರಿ ಮತ್ತು ಅವರ ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರಾತ್ರಿ 11 ಗಂಟೆ ಸುಮಾರಿಗೆ ಆವಂತಿಪೋರಾದ ಹರಿಪರಿಗಂ ನಿವಾಸಿಯಾದ ಫಯಾಜ್ ಅಹಮದ್ ಅವರ ಮನೆಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫಯಾಜ್ ಅಹಮದ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಫಯಾಜ್ ಅವರ ಪತ್ನಿ ರಜಾ ಬೇಗಮ್ ಹಾಗೂ ಅವರ ಪುತ್ರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆಂದು ಎನ್ನಲಾಗಿದೆ.
ಉಗ್ರನ ಹತ್ಯೆ
ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಇದೀಗ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆಂದು ಎಂದು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post