ಕಲ್ಪ ಮೀಡಿಯಾ ಹೌಸ್ | ಶೃಂಗೇರಿ |
ಮಹತ್ವದ ನಿರ್ಧಾರವೊಂದರಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಸಾಂಪ್ರದಾಯಿಕ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದ್ದು, ಇದು ಆಗಸ್ಟ್ 15ರಿಂದ ಜಾರಿಗೆ ಬರಲಿದೆ.
ಈ ಕುರಿತಂತೆ ಶ್ರೀಮಠದ ಆಡಳಿತಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಇದೇ ಆಗಸ್ಟ್ 15ರಿಂದ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು. ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶ ನೀಡುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನ ಪಡೆಯಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು, ಗುರುನಿವಾಸದಲ್ಲಿ ಪಾದಪೂಜೆ ಮತ್ತು ಜಗದ್ಗುರು ಮಹಾಸ್ವಾಮಿಗಳವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಬರಬೇಕು. ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಗುರುನಿವಾಸದ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.
Also read: ಬಾಲಕಿಯನ್ನು ಕಿಡ್ನಾಪ್ ಮಾಡಿ 12 ದಿನ ಸಾಮೂಹಿಕ ಅತ್ಯಾಚಾರ ನಡೆಸಿದ ಪಾಪಿಗಳು
ಪುರುಷರಿಗೆ ಯಾವ ವಸ್ತ್ರ?
ಶ್ರೀಮಠಕ್ಕೆ ಭೇಟಿ ನೀಡುವ ಎಲ್ಲ ಪುರುಷರು ಹಾಗೂ ಬಾಲಕರು ಪಂಚೆ(ಧೋತಿ), ಶಲ್ಯ ಮತ್ತು ಉತ್ತರೀಯ ವಸ್ತçದಲ್ಲಿ ಮಾತ್ರ ಇರಬೇಕು. ಇದರ ಹೊರತಾಗಿ ಯಾವುದೇ ರೀತಿಯ ಪಾಶ್ಚಾತ್ಯ ಅಥವಾ ಆಧುನಿಕ ವಸ್ತçಗಳನ್ನು ಧರಿಸಿದವರಿಗೆ ಪ್ರವೇಶ ಇರುವುದಿಲ್ಲ.
ಸ್ತ್ರೀಯರಿಗೆ ಯಾವ ವಸ್ತ್ರ?
ಶ್ರೀಮಠಕ್ಕೆ ಭೇಟಿ ನೀಡುವ ಮಹಿಳೆಯರು ಹಾಗೂ ಬಾಲಕಿಯರು ಸೀರೆ-ರವಿಕೆ, ದುಪ್ಪಟ್ಟ ಇರುವ ಸಲ್ವಾರ್ (ವೇಲ್ ಇರುವ ಚೂಡಿದಾರ್), ಲಂಗ ದಾವಣಿ ಧರಿಸಬರಬೇಕಿದೆ. ಇದರ ಹೊರತಾಗಿ ಯಾವುದೇ ರೀತಿಯ ಪಾಶ್ಚಾತ್ಯ ಅಥವಾ ಆಧುನಿಕ ವಸ್ತ್ರಗಳನ್ನು ಧರಿಸಿದವರಿಗೆ ಪ್ರವೇಶ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post