ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಮತಾಂಧ ಮುಸ್ಲೀಮರು ಮಾಡಿದ್ದು ಎಂಬುದು ತಿಳಿದಿದ್ದರೂ ಅದನ್ನು ನೇರವಾಗಿ ಖಂಡಿಸುವ ಒಂದೇ ಒಂದು ಮಾತನಾಡದ ಸಿದ್ದರಾಮಯ್ಯ ತಮ್ಮನ್ನು ಯಾರಿಗೆ ಮಾರಿಕೊಂಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗಲಭೆಯನ್ನು ಕೋಮುಗಲಭೆ ಎನ್ನುತ್ತೀರಿ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಕೋಮುಗಲಭೆ ಎಂದರೇನು ಎಂದು ತಿಳಿದಿಲ್ಲವಾ? ಎರಡು ಕೋಮಿನವರು ಒಬ್ಬರಿಗೊಬ್ಬರು ಹೊಡೆದಾಡಿದರೆ ಅದು ಕೋಮುಗಲಭೆಯಾಗುತ್ತದೆ. ಆದರೆ ಬೆಂಗಳೂರು ಗಲಭೆಯಲ್ಲಿ ಮತಾಂಧ ಮುಸ್ಲೀಮರು ಮಾತ್ರ ಬೆಂಕಿ ಹಚ್ಚಿದ್ದು. ಒಬ್ಬೇ ಒಬ್ಬ ಹಿಂದು ಅಲ್ಲಿ ಗಲಭೆ ಮಾಡಿದ್ದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಮತಾಂಧ ಮುಸ್ಲೀಮರ ಸಮಾಜಘಾತು ಕೃತ್ಯವನ್ನು ಖಂಡಿಸದ ಸಿದ್ದರಾಮಯ್ಯ, ಹಿಂದೂ ಹಾಗೂ ಮುಸ್ಲಿಂ ಮುಖಂಡರು ಕುಳಿತು ಶಾಂತಿ ಮಾತುಕತೆ ನಡೆಸಬೇಕು ಎನ್ನುತ್ತಾರೆ. ಬೆಂಗಳೂರು ಗಲಭೆಯಲ್ಲಿ ಒಬ್ಬನೇ ಒಬ್ಬ ಹಿಂದೂ ಭಾಗಿಯಾಗಿಲ್ಲ. ಅದು ಸಂಫೂರ್ಣ ಮುಸ್ಲಿಮರ ಕೃತ್ಯ. ಹೀಗಿರುವಾಗ ಹಿಂದೂ-ಮುಸ್ಲಿಂ ಶಾಂತಿ ಮಾತುಕತೆ ಯಾಕೆ ನಡೆಯಬೇಕು ಎಂದು ಕಿಡಿ ಕಾರಿದರು.
ಸಂತೋಷ್ ಅವರು ಬ್ರಹ್ಮಚಾರಿಯಾಗಿದ್ದುಕೊಂಡು ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ ಎಂದರು.
ಡಿ.ಕೆ. ಶಿವಕುಮಾರ್’ಗೂ ಜಾಡಿಸಿದ ಈಶ್ವರಪ್ಪ
ಬೆಂಗಳೂರು ಗಲಭೆಗೆ ಕಾರಣವಾದ ಪೋಸ್ಟ್ ಹಾಕಿದ್ದ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಬಿಜೆಪಿ ಬೆಂಬಲಿಗ ಎಂದು ಆರೋಪವನ್ನು ತಮ್ಮ ಪಕ್ಷಕ್ಕೆ ಕಟ್ಟಲು ನೋಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಈಶ್ವರಪ್ಪ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಚುನಾವಣೆ ಸಮಯದಲ್ಲಿ ಬಿಜೆಪಿ ಪರವಾಗಿ ಒಂದು ಪೋಸ್ಟ್ ಹಾಕಿದ್ದಾನೆ ಎಂದು ಅವನು ಬಿಜೆಪಿಗೆ ಸೇರಿದನು ಎಂದು ಇಡಿಯ ಗಲಭೆಯನ್ನು ನಮ್ಮ ಪಕ್ಷದ ತಲೆಗೆ ಕಟ್ಟಲು ನೋಡಿದ್ದಾರೆ ಶಿವಕುಮಾರ್ ಅವರು. ಆದರೆ, ನವೀನ್ ಈ ಹಿಂದೆ ಸ್ವತಃ ಡಿಕೆಶಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಹಾಕಿರುವ ಪೋಸ್ಟ್’ಗಳನ್ನು ನೋಡಿದರೆ ಅವನು ಯಾವ ಪಕ್ಷಕ್ಕೆ ಸೇರಿದವನು ಎಂದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ ಈಶ್ವರಪ್ಪ, ನವೀನ್ ಪೋಸ್ಟ್’ಗಳನ್ನು ಪ್ರದರ್ಶಿಸಿದರು.
Get In Touch With Us info@kalpa.news Whatsapp: 9481252093
Discussion about this post