ಸಿಗಂಧೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂಧೂರು ಲಾಂಚ್’ಗಳು ಇಂದು ಮಧ್ಯಾಹ್ನ ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ಕಳಸವಳ್ಳಿಯಿಂದ ಹೊಳೆಬಾಗಿಲಿಗೆ, ಹೊಳೆಬಾಗಿಲಿನಿಂದ ಕಳಸವಳ್ಳಿಗೆ ಎರಡು ಲಾಂಚ್’ಗಳು ಪರಸ್ಪರ ಎದಿರು ಸಂಚರಿಸುತ್ತಿದ್ದವು. ಈ ವೇಳೆ ಚಾಲಕರ ನಿರ್ಲಕ್ಷದಿಂದ ಎರಡೂ ಲಾಂಚ್’ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಲಾಂಚ್ ಡಿಕ್ಕಿ ಹೊಡೆದ ವೇಳೆ ಅದರ ಅಧಿಕೃತ ಚಾಲಕರು ಚಲಾವಣೆ ಮಾಡುತ್ತಿರಲಿಲ್ಲ ಎಂದು ಹೇಳಲಾಗಿದೆ.
ಎರಡೂ ಲಾಂಚ್’ಗಳಲ್ಲಿ ಸುಮಾರು 450ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗಿದ್ದು, ಕೂದಲೆಳೆ ಅಂತರದಲ್ಲಿ ಇವರೆಲ್ಲಾ ಪಾರಾಗಿದ್ದಾರೆ.
ಇನ್ನು, ಘಟನೆ ಕುರಿತಂತೆ ತಪ್ಪಿತಸ್ಥರನ್ನು ಅಮಾನತು ಮಾಡಿ, ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
Discussion about this post