Wednesday, September 3, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಮಲೆನಾಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ‘ಶ್ರೀಗಂಧ’ಕ್ಕೀಗ ರಜತ ಸಂಭ್ರಮ

May 24, 2019
in ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಸಂಸ್ಕøತಿ-ಸಂಸ್ಕಾರಗಳು ಮಾನವನ ಜೀವನ ಮೌಲ್ಯಗಳನ್ನು ಬಿಂಭಿಸುವ ಅವಿಭಾಜ್ಯ ಅಂಗಗಳು. ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯುವಲ್ಲಿ ಈ ಗುಣಗಳೇ ಸಿಂಹಪಾಲು ಪಾತ್ರವಹಿಸುತ್ತವೆ ಎಂದರೂ ತಪ್ಪಲ್ಲ. ಆದಿಕವಿ ಪಂಪನ ನಾಣ್ಣುಡಿಯಂತೆ ಮಾನವ ಜಾತಿ ತಾನೊಂದೇ ವಲಂ ಎಂಬುದನ್ನು ನಿರೂಪಿಸುವುದೂ ಕೂಡ ಈ ಸಂಸ್ಕಾರಗಳೇ. ಇಂತಹ ಸಂಸ್ಕಾರಯುತ ಕುಟುಂಬದಲ್ಲಿ ಹುಟ್ಟಿ ಬೆಳೆದು ಶಿಸ್ತು ಸೌಜನ್ಯ ಸಂಯಮವನ್ನು ರೂಢಿಸಿಕೊಂಡು, ತಮ್ಮ ಮುಂದಿನ ಪೀಳಿಗೆಯನ್ನೂ ಅಷ್ಟೇ ಜವಾಬ್ದಾರಿಯುತವಾಗಿ ಇವುಗಳ ಪರಿಧಿಯಲ್ಲೇ ಬೆಳೆಸುತ್ತಿರುವ ನಮ್ಮ ಶಾಸಕರಾದ ಕೆ. ಎಸ್. ಈಶ್ವರಪ್ಪನವರು ಶಿವಮೊಗ್ಗೆಯ ಸಾಂಸ್ಕøತಿಕ ರಾಯಭಾರಿಯೇ ಸರಿ.

ಕೇವಲ 4-5 ಮಂದಿ ಸಮಾನ ಮನಸ್ಕರು ಒಂದುಗೂಡಿ ಒಂದು ದಿನ ಶ್ರೀಗಂಧ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರಾಜ್ಯ ಹಾಗೂ ರಾಷ್ಟ್ರ ಕಂಡು ಕೇಳರಿಯದ ಉತ್ಕøಷ್ಟ ಕಾರ್ಯಕ್ರಮವನ್ನು ನಡೆಸೋಣ ಎಂದು ಮಾತನಾಡಿ, ಆಪ್ತವೆನಿಸುವ ಸತ್ಸಂಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರಾರಂಭಿಸಿದ ಶ್ರೀಗಂಧ ಸಂಸ್ಥೆಗೆ ಈ ಬಾರಿ 25ರ ಸಂಭ್ರಮ. ಈ ಸಂಸ್ಥೆಯ ಅಧ್ಯಕ್ಷರಾಗಿ, ಒಬ್ಬ ಉದಾತ್ತ ರಾಜಕಾರಣಿಯಾಗಿ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರೂಪಿಸುವ ನಡೆಸುವ ಅಪೂರ್ವ ಸಂಘಟಕರಾಗಿ ನಮ್ಮ ನಡುವೆ ನಲ್ಮೆಯ ಹಿತವಚನಗಳಾಡುತ್ತಾ ಬೆಳೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಒಂದು ಸಂಸ್ಥೆ 25 ವಸಂತಗಳನ್ನು ಸಾಗಿಬರುವುದು ಒಂದು ಸಾಧಾರಣ ಸಂಗತಿಯಲ್ಲ. ಸೃಷ್ಟಿಯ ಋತುಮಾನಸಕ್ಕೆ ತಕ್ಕಂತೆ ಹಲವು ಮಹತ್ತರ ಬದಲಾವಣೆ ತಳೆದು ಪುಷ್ಟಿಗೊಳ್ಳುವ ಪ್ರಕ್ರಿಯೆ ಸುಲಭವೂ ಅಲ್ಲ.

1995 ರಲ್ಲಿ ನಮ್ಮ ನಗರದ ಇದೇ ಕುವೆಂಪು ರಂಗಮಂದಿರದಲ್ಲಿ ಪೇಜಾವರ ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಂಡ ಶ್ರೀಗಂಧ, ಸಾಂಸ್ಕøತಿಕ ಕ್ಷೇತ್ರದಲ್ಲಿ ಆಡು ಮುಟ್ಟದ್ದ ಸೊಪ್ಪಿಲ್ಲ ಎಂಬಂತೆ ಮುನ್ನಡೆಯುತ್ತಿದೆ. ಕೇವಲ ಶಿವಮೊಗ್ಗ ನಗರವನ್ನು ಕೇಂದ್ರವಾಗಿರಿಸದೇ, ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಸದ್ಭಾವ, ಸದ್ವಿಚಾರ, ಸಧಭಿರುಚಿ ಹಾಗೂ ಸತ್ಕಾರ್ಯಾಧಾರಿತ ಕಾರ್ಯಕ್ರಮಗಳನ್ನು ನಡೆಸುತ್ತಾ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬುದನ್ನು ಶತಪ್ರತಿಶತ ಸತ್ಯವಾಗಿಸಿ ಯಾವುದೇ ಜಾತಿ ಪ್ರಭೇಧಕ್ಕೆ ಕಟ್ಟುಬೀಳದೆ ರಾಜ್ಯದ ಸರ್ವ ಮಠಾಧೀಶರನ್ನೂ ಮಠದಂಗಳದಿಂದ ಹೊರ ಆಹ್ವಾನಿಸಿ, ರಂಗಮಂದಿರಗಳಲ್ಲಿ ಉಪನ್ಯಾಸಗಳನ್ನು ಆಯೋಜಿಸಿ ಸಾಮಾನ್ಯ ಜನರೂ ಅವರ ಅನುಗ್ರಹವನ್ನು ಪಡೆಯುವಲ್ಲಿ ಅವಿರತ ಶ್ರಮಿಸಿದೆ.

ದಾಸ ಸಾಹಿತ್ಯದ ಹೂರಣವನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರೇಷ್ಟ ದಿಗ್ಗಜ ಸಂಗೀತಗಾರರ ಸತ್ಸಂಗವನ್ನು ಆಯೋಜಿಸಿ ಮಧುರ ಭಕ್ತಿಯ ರಸಾರ್ಣವವನ್ನು ನೀಡಿದೆ. ಆಚಾರ್ಯತ್ರಯ ಸಂಪನ್ನರು, ಅಷ್ಟಾವಧಾನಿಗಳು, ಶತಾವಧಾನಿಗಳು, ಪ್ರಸಿದ್ಧ ವಾಗ್ಮಿಗಳ ಉಪನ್ಯಾಸಗಳು, ಗಾಯನ – ವಿಚಾರ, ಸಂಕಿರಣ-ಸಂಗೀತ-ನಾಟ್ಯ- ದಾಸ ಸಾಹಿತ್ಯ ಮೊದಲಾದ ಧಾರ್ಮಿಕ- ಆಧ್ಯಾತ್ಮಿಕ – ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಜ್ಜನ ಮತ್ತು ಸತ್ಪಾತ್ರರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ಶಿಕ್ಷಣ ಯಾರೊಬ್ಬನ ಸ್ವತ್ತಲ್ಲ ಎಂಬುದಕ್ಕೆ ಬಡಮಕ್ಕಳಿಗಾಗಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆಂದೇ ಶಿವಮೊಗ್ಗೆಯ ಉತ್ಕøಷ್ಟ ಶಿಕ್ಷಕರುಗಳನ್ನು ಹೊಂದಿಸಿ ಖಾಸಗಿ ಪಾಠಗಳನ್ನು ನಡೆಸಿ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದೆ.

ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀನಿವಾಸ ಕಲ್ಯಾಣ, ರಮಣೀಯ ರಾಮಾಯಣ, ಮಹಾಭಾರತದ ಪಾತ್ರಗಳು, ದಶಾವತಾರ, ದಾಸ ವೈಭವ, ಪುರಂದರೋತ್ಸವ, ವ್ಯಂಗ್ಯಾವಧಾನ ಮುಂತಾದ ಶ್ರೇಷ್ಠತಮ ಕಾರ್ಯಕ್ರಮಗಳನ್ನು ಅವಿಚ್ಛಿನ್ನವಾಗಿ ನಡೆಸಿ ಭಕ್ತಿಭಾವ ಸಂಗಮವನ್ನು ಶಿವಮೊಗ್ಗೆಯ ಇಳೆಗೆ ಹರಿಸಿದೆ. ಬಡಮಕ್ಕಳ ದತ್ತು ಯೋಜನೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಅಶಕ್ತರಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸಾ ಸೌಲಭ್ಯ, ಕಣ್ಣಿನ ಶಸ್ತ್ರ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಬಡವರಿಗೂ ಬದುಕುವ ಹಕ್ಕಿದೆ – ಸೇವೆಯಲ್ಲೂ ಸತ್ಕಾರ್ಯದ ಭಾವವಿದೆ ಎಂಬುದನ್ನು ನಿರೂಪಿಸಿದೆ. ಬಾಲಮುರಳೀಕೃಷ್ಣ, ವಿದ್ಯಾಭೂಷಣ, ಹಂಸಲೇಖಾ, ಪುತ್ತೂರು ನರಸಿಂಹ ನಾಯಕ್, ಸಂಗೀತಾ ಕಟ್ಟಿ, ರಾಯಚೂರು ಶೇಷಗಿರಿದಾಸರು, ಪ್ರವೀಣ್ ಗೋಡ್ಕಿಂಡಿ, ಕದ್ರಿ ಗೋಪಾಲನಾಥ್, ಪದ್ಮಶ್ರೀ ಪುರಸ್ಕøತ ಪಂಡಿತ್ ವೆಂಕಟೇಶ್ ಕುಮಾರ್, ರವಿ ಮುರೂರು, ರಮೇಶ್ ಚಂದ್ರರಂಥಹ ಗಾಯಕರು ಶ್ರೀಗಂಧದ ವೇದಿಕೆಯಲ್ಲಿ ನಿರ್ಮಲ ಮನಸ್ಸುಗಳನ್ನು ತಮ್ಮ ಮಧುರ ದನಿಯಿಂದ ಅಮೃತತ್ವದೆಡೆಗೆ ಹರಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಅಗ್ರಜರಾದ ಎಸ್.ಎಲ್.ಭೈರಪ್ಪ, ಡಾ|| ಚಿದಾನಂದ ಮೂರ್ತಿ, ಸಾ.ಶಿ.ಮರುಳಯ್ಯ, ಜಿ.ವಿ. ಅಯ್ಯರ್, ಯು.ಆರ್. ಅನಂತಮೂರ್ತಿಯಂತಹ ಉದಾತ್ತ ವಿದ್ವಾಂಸರು ವಿಚಾರ ಮಂಥನ ನಡೆಸಿ ಜ್ಞಾನದ ನವನೀತವನ್ನು ಶಿವಮೊಗ್ಗೆಯ ಜನತೆಗೆ ಉಣಬಡಿಸಿದ್ದಾರೆ. ಜಗದ್ವಿಖ್ಯಾತ ಪ್ರಭಾತ್ ಕಲಾವಿದರು, ದತ್ತಾತ್ರೇಯ ಅರಳೀಕಟ್ಟೆಯವರ ಸೂತ್ರದ ಬೊಂಬೆಯಾಟ, ಉದಯ್ ಜಾದೂಗಾರ್ ಇವರು ನಡೆಸಿಕೊಟ್ಟ ಕಾರ್ಯಕ್ರಮ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಹೀಗೆ ಸಾಗಿಬಂದ ಶ್ರೀಗಂಧಕ್ಕೆ ಶಿವಮೊಗ್ಗೆಯ ನಾಗರೀಕರು ಅದ್ಭುತವಾಗಿ ಸ್ಪಂದಿಸಿದ್ದಾರೆ, ಬೆಂಬಲಿಸಿದ್ದಾರೆ. ಕರ್ನಾಟಕ ಸಂಘವಿರಲಿ, ಕುವೆಂಪು ರಂಗಮಂದಿರವಾಗಲಿ, ನ್ಯಾಷನಲ್ ಕಾಲೇಜು ಆವರಣವಾಗಲಿ, ಆದಿಚುಂಚನಗಿರಿ ಮೈದಾನವಿರಲಿ, ಶುಭಮಂಗಳದ ಅಂಗಳವಾಗಿರಲಿ ; ಆವರಣ ಮೀರಿದಂತೆ ಸೇರಿ ಕಾರ್ಯಕ್ರಮಗಳನ್ನು ಆಸ್ವಾದಿಸಿ, ಆನಂದಿಸಿ ಯಶಸ್ವಿಯಾಗಿಸಿದ್ದಾರೆ.

ಈಗ ಈ ಶ್ರೀಗಂಧಕ್ಕೆ 25ರ ಸಂಭ್ರಮ. ಅದರ ಮೂಲ ಸ್ಚರೂಪವೆಂಬಂತೆ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಆಶೀರ್ವಾದದೊಂದಿಗೆ ಅವರ ಶಿಷ್ಯರಾದ ಮುಂದಿನ ಪೀಠಾಧಿಪತಿಗಳಾಗಲಿರುವ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಮಹಾಸ್ವಾಮಿಗಳವರು ಸನ್ಮಾನ್ಯ ಶಾಸಕರಾದ ಕೆ. ಎಸ್. ಈಶ್ವರಪ್ಪನವರ ವಿನಮ್ರ ಕೋರಿಕೆಯ ಮೇರೆಗೆ ಇದೇ 24ರ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಸಂಜೆ 6:30ಕ್ಕೆ ಆಗಮಿಸಿ ತಮ್ಮ ಆಶೀರ್ವಚನವಿತ್ತು ನಮ್ಮೆಲ್ಲರನ್ನು ಅನುಗ್ರಹಿಸಲಿದ್ದಾರೆ. ಇದೇ ಸಂಧರ್ಭದಲ್ಲಿ ಕೊಂಚ ಮುಂಚಿತವಾಗಿ ಅಂದರೆ 5:30 ಕ್ಕೆ ಸರಿಯಾಗಿ ಭಕ್ತಿ ಸುಧಾ ಭಕ್ತಿಗೀತೆಗಳ ಗಾಯನವನ್ನು ಕು. ನಿಧಿ ಆರ್. ರಾವ್ ಮತ್ತು ಸಂಜನಾ ಎಸ್. ಕುಮಾರ್ ರವರು ತಮ್ಮ ಯುಗಳ ಗಾಯನದಲ್ಲಿ ನೆರವೇರಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಶ್ರೀಗಂಧ ಬಳಗ ಕೋರುತ್ತಿದೆ.

-ನೃತ್ಯಗುರು ಸಹನಾ ಚೇತನ್

Tags: K S EshwarappaKannada NewsMalnad NewsShivamoggaSrigandhaನೃತ್ಯಗುರು ಸಹನಾ ಚೇತನ್ಪೇಜಾವರ ಶ್ರೀಮಲೆನಾಡ ಸಂಸ್ಕೃತಿರಜತ ಸಂಭ್ರಮಶಿವಮೊಗ್ಗಶ್ರೀಗಂಧ
Previous Post

Big Breaking: ಹಾಸನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ: ಪ್ರಜ್ವಲ್

Next Post

ಚಿತ್ರದುರ್ಗ: ಹೊಸಮುಖ, ವಲಸಿಗರ ಕೈಹಿಡಿದ ಕೋಟೆ ಜನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಚಿತ್ರದುರ್ಗ: ಹೊಸಮುಖ, ವಲಸಿಗರ ಕೈಹಿಡಿದ ಕೋಟೆ ಜನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ | ಜಿಲ್ಲಾಮಟ್ಟದ ಶಿಕ್ಷಕರತ್ನ, ಕ್ರೀಡಾ ಶಿಕ್ಷಕಶ್ರೀ ಪ್ರಶಸ್ತಿ ಘೋಷಣೆ

September 3, 2025

ವಿದ್ಯಾರ್ಥಿ ಜೀವನ ಅತ್ಯಮೂಲ್ಯ, ಅಂಧತ್ವದ ಆಕರ್ಷಣೆಗೆ ಬಲಿಯಾಗದಿರಿ

September 3, 2025

ವಿಜಯ ಭಾರತಿ ವಿದ್ಯಾಲಯ | ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ

September 3, 2025

ಮೈಸೂರು | ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

September 3, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ | ಜಿಲ್ಲಾಮಟ್ಟದ ಶಿಕ್ಷಕರತ್ನ, ಕ್ರೀಡಾ ಶಿಕ್ಷಕಶ್ರೀ ಪ್ರಶಸ್ತಿ ಘೋಷಣೆ

September 3, 2025

ವಿದ್ಯಾರ್ಥಿ ಜೀವನ ಅತ್ಯಮೂಲ್ಯ, ಅಂಧತ್ವದ ಆಕರ್ಷಣೆಗೆ ಬಲಿಯಾಗದಿರಿ

September 3, 2025

ವಿಜಯ ಭಾರತಿ ವಿದ್ಯಾಲಯ | ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ

September 3, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!