Read - 2 minutes
Also read: ಭದ್ರಾವತಿ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ಧೂರಿ ಚಾಲನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಕಲ್ಪ ಮೀಡಿಯಾ ಹೌಸ್ | ಶಿರಸಿ |
ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾಸಹಾಯ, ಆರ್ಥಸಹಾಯ ಮುಂತಾದ ಕಾರ್ಯಗಳ ಮೂಲಕ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ಲಾಘಿಸಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಚಾತುರ್ಮಾಸ್ಯಾಂಗ ಭಿಕ್ಷಾವಂದನೆ, ಪಾದುಕಾಪೂಜೆ ಸೇವೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಮಹಾಸಭೆಯ ಜೊತೆ ಸ್ವರ್ಣವಲ್ಲೀ ಮಠವಿರಲಿದ್ದು, ಎಲ್ಲಾ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಂಡ್ರಮನೆ ಗೋಪಾಲಕೃಷ್ಣ ಭಟ್ ದಂಪತಿಗಳು ಮಹಾಸಭೆಯ ಪರವಾಗಿ ಭಿಕ್ಷಾವಂದನೆ ಹಾಗೂ ಪಾದುಕಾಪೂಜೆ ಸಲ್ಲಿಸಿದರು. ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ ಮಲವಳ್ಳಿ, ನಿರ್ದೇಶಕರಾದ ಗಣೇಶ ಭಟ್ ಕಾಜಿನಮನೆ, ಪ್ರಶಾಂತ ಹೆಗಡೆ ಸಂಕಲ್ಪ, ಹು.ಬಾ. ಅಶೋಕ್ ಮುಂತಾದವರು ಉಪಸ್ಥಿತರಿದ್ದು ಆಶೀರ್ವಾದ ಮಂತ್ರಾಕ್ಷತೆ ಪಡೆದರು.
Also read: ಭದ್ರಾವತಿ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ಧೂರಿ ಚಾಲನೆ
Discussion about this post