ಕಲ್ಪ ಮೀಡಿಯಾ ಹೌಸ್ | ಸಿರುಗುಪ್ಪ |
ಒಂದೇ ಶಾಲೆಯಲ್ಲಿ ಕಲಿಯುತ್ತಾ, ಜೊತೆಯಲ್ಲಿ ಆಟವಾಡಿಕೊಂಡಿದ್ದ ಇಬ್ಬರು ಬಾಲಕಿಯರು ಒಟ್ಟಾಗಿಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ತಾಲೂಕಿನ ಶ್ರೀಧರಗಡ್ಡೆಯಲ್ಲಿ ಘಟನೆ ನಡೆದಿದ್ದು, ಬಟ್ಟೆ ಸ್ವಚ್ಛಗೊಳಿಸಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕಿಯರು ಮುಳುಗಿ ಮೃತಪಟ್ಟಿದ್ದು, ಇಡಿಯ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಕುಡಿಯುವ ನೀರು ಸರಬರಾಜಿಗಾಗಿ ನಿರ್ಮಾಣಗೊಂಡಿರುವ ಕೆರೆ ಇದಾಗಿದೆ ಎಂದು ಹೇಳಲಾಗಿದೆ.
Also read: ಭದ್ರಾವತಿ ಗಾಯತ್ರಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಮಂಜುನಾಥ್ ಅವಿರೋಧ ಆಯ್ಕೆ
ಮೃತ ಬಾಲಕಿಯರನ್ನು ಶ್ರೀದೇವಿ (12) ಹಾಗೂ ಮಹೇಶ್ವರಿ (13) ಎಂದು ಗುರುತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post