ನವದೆಹಲಿ: ಭಾರತದ ಪರಿಧಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಿಗ್ ವಿಮಾನಗಳಲ್ಲಿ ಐದು ಮಾತ್ರ ಸುರಕ್ಷಿತವಾಗಿ ಹಿಂತಿರುಗಿದ್ದು, ಒಂದು ವಿಮಾನ ಕಾಣೆಯಾಗಿದೆ.
ಕಾಣೆಯಾಗಿರುವ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಕೇಂದ್ರ ಈಗಗಾಲೇ ಹೇಳಿದ್ದು, ಇದರಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಕಾಣೆಯಾಗಿದ್ದಾರೆ ಎನ್ನುವುದು ಖಚಿತವಾಗಿದೆ.
ಈ ವಿಚಾರದಲ್ಲಿ ಕೇಂದ್ರದ ಮಾಹಿತಿಯಂತೆ, ಪ್ರಕರಣದಲ್ಲಿ ನಮ್ಮ ಯೋಧರನ್ನು ಬಂಧಿಸುವ ವೇಳೆ ಪಾಕಿಸ್ತಾನ ವಿಶ್ವಸಂಸ್ಥೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದು, ಬಂಧನದ ವಿಚಾರವನ್ನು ಅಧಿಕೃತವಾಗಿ ಭಾರತ ಸರ್ಕಾರಕ್ಕೆ ತಿಳಿಸಬೇಕು. ಆದರೆ, ಎಲ್ಲವನ್ನೂ ಗಾಳಿಗೆ ತೂರಿರುವ ಪಾಕಿಸ್ಥಾನ ಅತ್ಯಂತ ಕ್ರೂರವಾಗಿ ಅಭಿನಂದನ್ ಅವರನ್ನು ಬಂಧಿಸಿ, ನಡೆಸಿಕೊಳ್ಳುತ್ತಿದೆ ಎಂಬುದು ಬಹಿರಂಗಗೊಂಡಿದೆ.
ಈ ಕುರಿತಂತೆ ಅಧಿಕೃತ ಮೂಲಗಳ ಮಾಹಿತಿಯಂತೆ, ಮಿಗ್ 21ರ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಕಾಣೆಯಾಗಿದ್ದಾರೆ. ಇವರನ್ನು ಪಾಕಿಸ್ಥಾನ ಬಂಧಿಸಿದೆ ಎಂದು ಹೇಳುತ್ತಿದೆ. ಆದರೆ, ಪಾಕ್ ಬಂಧಿಸಿರುವುದನ್ನು ಕೇಂದ್ರ ಸರ್ಕಾರ ಮಾತ್ರ ಅಧಿಕೃತವಾಗಿ ತಿಳಿಸಿಲ್ಲ.
ಈ ಕುರಿತಂತೆ ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರರು, ನಮಗೆ ದೊರೆತಿರುವ ಮಾಹಿತಿಯಂತೆ ಜೈಷ್ ಉಗ್ರ ಸಂಘಟನೆ ಶೀಘ್ರದಲ್ಲೆ ಭಾರತದಲ್ಲಿ ಮತ್ತೆ ದಾಳಿ ನಡೆಸಲು ಸಂಚು ರೂಪಿಸಿದೆ. ಹೀಗಾಗಿ, ನಾವು ಕಾರ್ಯಾಚರಣೆಯನ್ನು ಆರಂಭಿಸಿದ್ದೆವೆ ಎಂದಿದ್ದಾರೆ.
ಇದೇ ವೇಳೆ, ಅಭಿನಂದನ್ ಅವರು ನಮ್ಮ ವಶದಲ್ಲಿದ್ದಾರೆ ಎಂದು ಹೇಳಿರುವ ಪಾಕಿಸ್ತಾನ ಈ ಕುರಿತಂತೆ ಫೋಟೋ ಹಾಗೂ ವೀಡಿಯೋವನ್ನು ಬಿಡುಗಡೆ ಮಾಡಿದೆ. ಆದರೆ, ಈ ವಿಚಾರವನ್ನು ಭಾರತ ಸರ್ಕಾರ ಅಧಿಕೃತವಾಗಿ ಇನ್ನೂ ಹೇಳಬೇಕಿದೆ.
Discussion about this post