ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಯಾವುದೇ ರೀತಿಯ ಅಧಿಕೃತ ಪಾಸ್ ಇಲ್ಲದಿದ್ದರೂ, ಹಾವೇರಿಯಿಂದ ಶಿಕಾರಿಪುರಕ್ಕೆ ಪೊಲೀಸರ ಕಣ್ಣುತಪ್ಪಿಸಿ, ಅಡ್ಡರಸ್ತೆಯಲ್ಲಿ ಜಿಲ್ಲಾ ಗಡಿ ಪ್ರವೇಶಿಸುತ್ತಿದ್ದವರನ್ನು ಬಂಧಿಸಲಾಗಿದೆ.
ಇಂದು ಶಿಕಾರಿಪುರ ತಾಲೂಕಿಗೆ ನೆರೆ ಜಿಲ್ಲೆ ಹಾವೇರಿಯಿಂದ ಯಾವುದೇ ಅಧಿಕೃತ ಪಾಸ್ ಇಲ್ಲದೇ ಪೊಲೀಸರ ಕಣ್ಣು ತಪ್ಪಿಸಿ ಗುಳೇದಹಳ್ಳಿ ಮತ್ತು ಮಾರವಳ್ಳಿ ಗ್ರಾಮದ ಒಳ ರಸ್ತೆಗಳ ಮುಖಾಂತರ ದ್ವಿ ಚಕ್ರ ವಾಹನಗಳಲ್ಲಿ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ.
ಇದನ್ನು ಆದರಿಸಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ಹಾಗೂ ಸಿಬ್ಬಂಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಯಾವುದೇ ಅಧಿಕೃತ ಪಾಸ್ ಇಲ್ಲದೇ ಶಿವಮೊಗ್ಗ ಜಿಲ್ಲೆಗೆ ಬಂದಿರುವ ಒಟ್ಟು 3 ದ್ವಿಚಕ್ರ ವಾಹನಗಳನ್ನು ಮತ್ತು 6 ಜನರನ್ನು ವಶಕ್ಕೆ ಪಡೆದು ಕ್ರಮ ತೆಗೆದುಕೊಳ್ಳಲಾಗಿದೆ.
ಯಾವುದೇ ಜಿಲ್ಲೆಯವರು ಶಿವಮೊಗ್ಗ ಜಿಲ್ಲೆಗೆ ಒಳ ಪ್ರವೇಶಿಸುವಾಗ ಅಧಿಕೃತ ಪಾಸ್ ಹೊಂದಿರುವುದು ಕಡ್ಡಾಯ, ಪಾಸ್ ಇಲ್ಲದೇ ಸಂಚರಿಸುವ ವ್ಯಕ್ತಿಗಳನ್ನು ದಿಢೀರ್ ಆಗಿ ವಾಹನಗಳನ್ನು ತಡೆದು ಪರಿಶಿಲಿಸಿದಾಗ ಅವರುಗಳು ಬೇರೆ ಜಿಲ್ಲೆಯವರಾಗಿದ್ದು, ಅಧಿಕೃತ ಪಾಸ್ ಹೊಂದಿರದೇ ಇದ್ದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಮುಂದಿನ ಸೂಕ್ತ ಕ್ರಮ ವಹಿಸಲಾಗುತ್ತದೆ ಜಿಲ್ಲಾ ರಕ್ಷಣಾಧಿಕಾರಿಗಳು ಎಚ್ಚರಿಸಿದ್ದಾರೆ.
Get in Touch With Us info@kalpa.news Whatsapp: 9481252093













