Read - < 1 minute
ದಲ್ಲಾಸ್: ಎರಡು ಎಂಜಿನ್ ಹೊಂದಿರುವ ಮಿನಿ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ 10 ಮಂದಿ ದುರ್ಮರಣವನ್ನಪ್ಪಿದ ಘಟನೆ ಅಮೆರಿಕಾದ ದಲ್ಲಾಸ್’ನಲ್ಲಿ ನಡೆದಿದೆ.
ಸ್ಥಳೀಯ ಕಾಲಮಾನದ ಅನ್ವಯ ನಿನ್ನೆ ಈ ಘಟನೆ ನಡೆದಿದ್ದು, ಬಿಇ-350 ಕಿಂಗ್ ಏರ್’ಕ್ರಾಫ್ಟ್’ಗೆ ಸೇರಿದ ಈ ಮಿನಿ ವಿಮಾನ ಭೂಮಿಯಿಂದ ಹಾರುವ ವೇಳೆ ನಿಯಂತ್ರಣ ಕಳೆದುಕೊಂಡು ಹ್ಯಾಂಗರ್’ಗೆ(ವಿಮಾನಾಶ್ರಯ) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಿಮಾನ ಹೊತ್ತಿ ಉರಿದಿದ್ದು, 10 ಮಂದಿ ಸುಟ್ಟು ಕರಕಲಾಗಿದ್ದಾರೆ.
Discussion about this post