ಫೈಜಾಬಾದ್: ಜಲಸಂಚಾರ ಕ್ಷೇತ್ರದಲ್ಲಿ ಹಲವು ಮಹತ್ವದ ಮೈಲುಗಲ್ಲನ್ನು ಇಟ್ಟಿರುವ ಮೋದಿ ಸರ್ಕಾರ ಈಗ ಆಸ್ಟ್ರೇಲಿಯಾದಲ್ಲಿ ಪ್ರಖ್ಯಾತವಾಗಿರುವ ಹಾರುವ ಡಬ್ಬಲ್ ಡೆಕ್ಕರ್, ಏರ್ ಬಸ್ಸನ್ನು ಭಾರತಕ್ಕೆ ತರಲು ಮುಂದಾಗಿದೆ.
ಈ ಕುರಿತಂತೆ ಪೂರ್ವ ಉತ್ತರ ಪ್ರದೇಶದಲ್ಲಿ 623 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಶೀಘ್ರವೇ ನಾನು ನೀರಿಗೆ ಇಳಿಯಬಲ್ಲ ಏರ್ ಬೋಟನ್ನು ಆಸ್ಟ್ರೇಲಿಯದಿಂದ ತರುತ್ತೇನೆ. ಮುಂದಿನ ಬಾರಿಗೆ ನಾನಿಲ್ಲಿಗೆ ಬರುವಾಗ ಏರ್ ಬೋಟ್’ನಲ್ಲೇ ಬರುತ್ತೇನೆ. ಆ ಏರ್ ಬೋಟನ್ನು ವಾರಾಣಸಿಯಿಂದ ಅಲಹಾಬಾದ್ಗೆ ಜಲಮಾರ್ಗವಾಗಿ ಹೋಗಲು ಬಳಸಬಹುದಾಗಿದೆ. ಹಾರಬಲ್ಲ ಡಬಲ್ ಡೆಕರ್ ಬಸ್ಸುಗಳನ್ನು ತರುವ ಯೋಜನೆಯೂ ನಮಗಿದೆ ಎಂದಿದ್ದಾರೆ.
ಸರಯೂ ನದೀ ಜಲಮಾರ್ಗವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದ ಸಚಿವರು, ಇದರಿಂದ ವಾರಾಣಸಿ ಮೂಲಕ ಬಾಂಗ್ಲಾದೇಶಕ್ಕೆ ಸುಲಭದ, ಸುಲಲಿತ ಮತ್ತು ಅಗ್ಗದ ಜಲ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ ಎಂದರು.
ಇನ್ನು, ನೀರಿಗೆ ಇಳಿಯಬಲ್ಲ ಏರ್ ಬೋಟ್, ಗಾಳಿಯಲ್ಲಿ ಹಾರಬಲ್ಲ ಡಬಲ್ ಡೆಕರ್’ನಂತಹ ಅತ್ಯಾಧುನಿಕ ಸಾರಿಗೆ ಸೌಕರ್ಯಗಳನ್ನು ತರುವ ರೋಮಾಂಚಕ ಸಂಗತಿಗಳನ್ನು ಅವರು ತಿಳಿಸಿದರು.
Discussion about this post