ಕಲ್ಪ ಮೀಡಿಯಾ ಹೌಸ್ | ಸೊರಬ |
ಮಹಿಳೆ ಕೇವಲ ವ್ಯಕ್ತಿಯಲ್ಲ, ಒಂದು ಅದ್ಭುತ ಶಕ್ತಿ ಮಹಿಳೆಯರನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಶ್ರೀ ಮ.ನಿ.ಪ್ರ. ಡಾ. ಮಹಾಂತ ಮಹಾಸ್ವಾಮಿಗಳು ತಿಳಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತಮಾಡಿ, ಪುರಾಣಗಳಲ್ಲಿ, ಸ್ವತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ಅನೇಕ ನಾರಿಯರ ದಿಟ್ಟತನವನ್ನು ಕಾಣಬಹುದಾಗಿದೆ. ಸ್ವತಂತ್ರ್ಯ ಹೋರಾಟದ ಮುನ್ನೆಲೆಗೆ ಮತ್ತು ಗುಪ್ತವಾಗಿದ್ದುಕೊಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನ ಮತ್ತು ಜೀವವನ್ನು ಮುಡಿಪಾಗಿಟ್ಟಿದ್ದನ್ನು ಓದಿದ್ದೇವೆ ಮತ್ತು ಕೇಳಿದ್ದೇವೆ. ಇಂದಿಗೂ ಅನೇಕ ಮಹಿಳೆಯರು ಸಮಾಜ, ದೇಶಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ ಹಾಗೂ ಕೊಡಲಿದ್ದಾರೆ. ಹೀಗೆ ಇತಿಹಾಸ ಪುಟಗಳಲ್ಲಿ ಹಲವು ಮಹಿಳೆಯರ ನಾರಿಶಕ್ತಿ ಅಜಾರಮ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜಯೋಗಿನಿ ಬ್ರಹ್ಮ ಕುಮಾರಿ ಚೇತನಕ್ಕೆ ಮಹಿಳೆ ಅಬಲೆಯಲ್ಲ, ಸಬಲೇ ನಾರಿ ಶಕ್ತಿ ಜಗತ್ತಿಗೆ ಪರಿಚಯಿಸಿದ ಅದ್ಭುತ ರಾಷ್ಟ್ರ ಭಾರತ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುವ ಮೂಲಕ ಕುಟುಂಬ ನಿರ್ವಹಣೆಯೊಂದಿಗೆ ಸಮಾಜ ಕಟ್ಟುವ ಮಹಿಳೆ ಗೆ ಎಲ್ಲಾ ಕ್ಷೇತ್ರದಲ್ಲಿ ಸವಾಲು, ಸಮಸ್ಯೆಗಳು ಜಾಸ್ತಿ. ಎಲ್ಲವನ್ನು ಎದುರಿಸಿ ಹಿಂದೆ ನೋಡದೇ ಮುನ್ನಡೆಯುವ ಶಕ್ತಿ ಮಹಿಳೆಗಿದೆ ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್ ಮಾತನಾಡಿ, ಮಹಿಳೆ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ. ಸಾಧಕಿಯರು ನಮ್ಮೊಳಗೆ ಇರುತ್ತಾರೆ ಅವರನ್ನು ಗುರುತಿಸಿ, ಬೆಳೆಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು.
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ ” ಎಲ್ಲಿ ಮಹಿಳೆಯರನ್ನ, ಸ್ತ್ರೀಯರನ್ನ, ಗೌರವದಿಂದ ಪೂಜ್ಯ ಭಾವನೆಯಿಂದ ಕಾಣುತ್ತಿವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತವೆ ಪ್ರಕೃತಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ತನ್ನದೇ ಆದ ಗೌರವ ಇದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹಿಳಾ ಸಾಧಕರಾದ ಡಾ. ಸುಪ್ರಿಯಾ (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಆನವಟ್ಟಿ), ಚರಿತಾ ಕಾರ್ತಿಕ್ (ಹೆಚ್.ಓ.ಡಿ. ಎವರಾನ್ ಸ್ಕೂಲ್, ಕೋಟಿಪುರ), ಡಾ. ಪವಿತ್ರ ರಾಯ್ಕರ್ ಗುಡವಿ (ದಂತ ವೈದ್ಯರು, ಶಿವಮೊಗ್ಗ), ಲಕ್ಷ್ಮೀ ಮುರಳೀಧರ (ಸಂಗೀತ ಕ್ಷೇತ್ರ, ಸೊರಬ), ಉಷಾ (ಪೊಲೀಸ್ ಹೆಡ್ ಕಾನ್ ಸ್ಟೆಬಲ್), ಕೆ.ಎಲ್.ಜ್ಯೋತಿರ್ಮಾಲ (2021-22ನೇ ಸಾಲಿನ ಜಿಲ್ಲಾ ಉತ್ತಮ ಅಂಗನವಾಡಿ ಕಾರ್ಯಕರ್ತೆ, ಚಂದ್ರಗುತ್ತಿ) ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ಸೌಭಾಗ್ಯ, ನಾಗರಾಜ, ಪಿ.ಎಸ್.ಐ, ಆರಕ್ಷಕ ಠಾಣೆ, ವಿಜಯ ಕುಮಾರ್ ದಟ್ಟರ್, ರಾಜು ಹಿರಿಯಾವಲಿ, ಸುಬ್ರಾಯ ನಾಯ್ಕ, ಮಂಜುನಾಥ.ಎಸ್, ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post