ಕಲ್ಪ ಮೀಡಿಯಾ ಹೌಸ್ | ಸೊರಬ |
ಇಲ್ಲಿನ ಚಿಕ್ಕಪೇಟೆಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿರುವ ಪಾಳು ಬಿದ್ದಿದ್ದ ಬಾವಿ #Well ಇದೀಗ ಪುನಃ ಜೀವಂತಗೊಂಡಿದ್ದು, ಈ ಮೂಲಕ ಮಲೆನಾಡಿಗೆ ಮಾದರಿಯಾಗುವಂತಹ ಕಾರ್ಯ ಮಾಡಲಾಗಿದೆ.
ಪುರಸಭಾ ಕ್ರಿಯಾಶೀಲ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ #Prasannakumardodmane ಅವರ ನೇತೃತ್ವದಲ್ಲಿ ಪುರಸಭೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಈ ಬಾವಿಯ ಪುನರ್ ವಿಕಾಸ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನೀರಿನ #Water ಲಭ್ಯತೆ ದೊರೆತಿದೆ.
Also Read>> ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಯಾರು ಅದು ಅಪರಿಚಿತ ಟ್ರಕ್ ಚಾಲಕ?
ಗಂಗಾ ಪೂಜೆಯೊಂದಿಗೆ ಪುನಾರಂಭ
ಸನಾತನ ಧರ್ಮದಲ್ಲಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಕಾಲವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವೇದ ಬ್ರಹ್ಮಶ್ರೀ ನಾರಾಯಣ ಭಟ್ ಮರಾಟೆ ಅವರಿಂದ ಬಾವಿಗೆ ಗಂಗಾ ಪೂಜೆ ನೆರವೇರಿಸಲಾಯಿತು. ಮಹಿಳೆಯರು ಕುಂಭ ತುಂಬಿಸಿ ಬಾವಿಯ ಸಮರ್ಪಿತ ಪೂಜೆಯಲ್ಲಿ ಭಾಗವಹಿಸಿದರು.
ಉತ್ತಮ ಗುಣಮಟ್ಟದ ನೀರಿನ ಲಭ್ಯತೆ
ಬಾವಿಯ ನೀರು 70 ರಿಂದ 150 ಟಿಡಿಎಸ್ ನಡುವೆ ಗುಣಮಟ್ಟ ಹೊಂದಿದ್ದು, ಕುಡಿಯಲು ತಕ್ಕಮಟ್ಟಿಗೆ ಶುದ್ಧವಾಗಿದೆ. ಈ ಬಾವಿ ಈಗ ಸಮುದಾಯದ ಪ್ರಮುಖ ನೀರಿನ ಮೂಲವಾಗಿ ಪರಿಣಮಿಸಿದೆ.
ಪ್ರಸನ್ನ ಕುಮಾರ್ ದೊಡ್ಮನೆ ಶ್ಲಾಘನೀಯ ಕಾರ್ಯ
ಪಟ್ಟಣದ ಜನಪರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಕ್ರಿಯಾಶೀಲ ಪುರಸಭಾ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ಅವರೇ ಈ ಬಾವಿ ಪುನರ್ವಿಕಾಸ ಕಾರ್ಯದಲ್ಲೂ ಸಹ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
Also Read>> ಶಿವಮೊಗ್ಗ | ಕಠಿಣ ವ್ರತ ಆಚರಿಸಿ ಶಬರಿಮಲೆಗೆ ತೆರಳಿದ ಅಯ್ಯಪ್ಪ ಮಾಲಾಧಾರಿಗಳು
ಪುರಸಭೆಯಿಂದ ದೊರೆತಷ್ಟೇ ಅನುದಾನದಷ್ಟೇ ತಾವೂ ಸಹ ಹಣ ಹಾಕಿ, ಸಾರ್ವಜನಿಕರಿಂದ ಸಹಕಾರವನ್ನೂ ಸಹ ಪಡೆದು ಈ ಒಂದು ಕಾರ್ಯವನ್ನು ಯಶಸ್ವಿಯಾಗಿ ದೊಡ್ಮನೆ ಅವರು ನಡೆಸಿದ್ದಾರೆ.
ಪಟ್ಟಣದ ಹಲವು ಸತ್ಕಾರ್ಯಗಳಲ್ಲಿ ತಮ್ಮ ಕೊಡುಗೆಯನ್ನು ದಾಖಲಿಸುತ್ತಿರುವ ಪ್ರಸನ್ನ ಕುಮಾರ್ ದೊಡ್ಮನೆ ಅವರು ಬಾವಿ ಪುರ್ನವಿಕಾಸ ಕಾರ್ಯದಲ್ಲಿ ನಿರಂತರ ಶ್ರಮ ಮತ್ತು ಸಮರ್ಪಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಅವರ ಈ ಕಾರ್ಯವು ಸಮುದಾಯದ ಮೇಲೆ ಸದಭಿಪ್ರಾಯ ಮತ್ತು ವಿಶ್ವಾಸವನ್ನು ಮೂಡಿಸಿದೆ.
ಸಾರ್ವಜನಿಕರಿಂದ ಮೆಚ್ಚುಗೆ
ಈ ಬಾವಿಯ ಪುನರ್ ಸ್ಥಾಪನೆಯ ಮೂಲಕ ಸ್ಥಳೀಯರು ತಮ್ಮ ನೀರಿನ ಅಗತ್ಯವನ್ನು ಪೂರೈಸಲು ಅನುಕೂಲವಾಗಿದ್ದು, ಪ್ರಸನ್ನ ಕುಮಾರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಧನ್ಯವಾದ ವ್ಯಕ್ತಪಡಿಸಿದರು.
ಸಾರ್ವಜನಿಕ ಸೇವೆಗೆ ಹೊಸ ಆದರ್ಶ
ಈ ಬಾವಿಯ ಪುನರ್ ವೈಭವವು, ಸಮುದಾಯ ಸೇವೆಯ ಮಾದರಿಯಾಗಿ ಇತರರಿಗೆ ಪ್ರೇರಣೆಯಾಗಲಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಹಳೆಯ ಬಾವಿ ಹಾಗೂ ಜಲಮೂಲಗಳ #WaterSource ಅಭಿವೃದ್ಧಿ ಹಾಗೂ ಪುನರ್ ವಿಕಾಸಕ್ಕಾಗಿ ಪ್ರಸನ್ನ ಕುಮಾರ್ ದೊಡ್ಮನೆ ಅವರು ಮುಂದಿನ ದಿನಗಳಲ್ಲಿ ಅಭಿಯಾನವನ್ನೇ ಆರಂಭಿಸುವ ಯೋಚನೆ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್ ಟಿ.ಆರ್. ಸುರೇಶ್, ಮಹಾಬಲೇಶ್ವರ, ಪಂಡರಿನಾಥ್, ಮಾರುತಿ ಲಾ, ಅಶ್ವಿನ್ ಕುಮಾರ್, ರಾಜಶೇಖರ, ರಾಘವೇಂದ್ರ, ಶ್ರೀಮತಿ ಸುಬ್ರಹ್ಮಣ್ಯ ಬೆನ್ನೂರು, ಗೀತಾ ಸತೀಶ್, ಗೌರಿ ಮುಸಳೆ, ಶಿಲ್ಪಾ ಸತೀಶ್ ಬೆನ್ನೂರು, ಶೃತಿ ಶಾಲಿನಿ,ಸುಮನಾ, ದೀಪುಶ್ರೀ, ಸರೋಜಾ ರಾಕುಂಡೆ, ಗಾಯತ್ರಿ ರಾಕುಂಡೆ, ಲಕ್ಷ್ಮೀ, ಮೈನಾವತಿ ಬೊಂಗಾಳೆ, ರೇಖಾ ಮಾರುತಿ, ಚಿತ್ರ ಬಾಂಬೋರೆ, ಸುಮನಾ,ವನಿತಾ, ರೇಣುಕಮ್ಮ, ಶ್ರೀವತ್ಸ, ಶ್ರೀ ಹರಿ, ಶ್ರೀನಿತ, ಶ್ರೀ ದತ್ತ, ಶ್ರೀಧರ ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post