ಕಲ್ಪ ಮೀಡಿಯಾ ಹೌಸ್ | ಸೊರಬ |
ನಮ್ಮ ಪೂರ್ವಿಜರ ಕಲಾಸಂಪತ್ತನ್ನು ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರಿಗೆ ಸಲ್ಲಿಸಬೇಕಾದ ಸಮರ್ಪಕ ಗೌರವವು ಕೂಡ ಇಂತಹ ಪೋಷಣೆ ಆಗಿರುತ್ತದೆ ಎಂದು ಕಕ್ಕರಸಿ ಹಿರಿಯ ಪ್ರಮುಖರಾದ ಸದಾಶಿವಪ್ಪ ಗೌಡರು ಹೇಳಿದರು.
ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಕ್ಕರಸಿ ಗ್ರಾಮದಲ್ಲಿ ಹಮ್ಮಿಕೊಂಡ ಭೂಮಣ್ಣಿ ಬುಟ್ಟಿ ಸಂಭ್ರಮಾಚರಣೆಗೆ ಚಾಲನೆ ನೀಡಿ ನಮ್ಮ ಗ್ರಾಮದಲ್ಲಿ ಇಷ್ಟು ಚೆಂದದ ಜನಪದ ಚಿತ್ರ ಬರೆಯುವ ಕಲಾವಿದರಿದ್ದಾರೆ ಎಂಬುದರ ಅರಿವಿರಲಿಲ್ಲ. ಇಂದು ಈ ಪ್ರದರ್ಶನ ನಡೆಸುವ ಮೂಲಕ ಜನಪದ, ಸಂಸ್ಕೃತಿ ವೇದಿಕೆಯವರು ಪ್ರತ್ಯಕ್ಷ ದರ್ಶನಕ್ಕೆ ನೆರವು ನೀಡಿದ್ದು ಶ್ಲಾಘನೀಯ ಎಂದರು.
ಕರ್ನಾಟಕ ಜನಪದ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಉಭಯ ವೇದಿಕೆಗಳ ಮಹಿಳಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಹೆಚ್ಚು ಕಲಾತ್ಮಕ ಭೂಮಣ್ಣಿ ಬುಟ್ಟಿ ಗಳು ಪ್ರದರ್ಶನ ಗೊಂಡವು. ಇದೆ ವೇದಿಕೆಯಲ್ಲಿ ಗ್ರಾಮದ ಹಿರಿಯ ಕಲಾವಿದರಾದ ದೇವಮ್ಮ ಮತ್ತು ಗಂಗಮ್ಮ ಇವರುಗಳನ್ನು ಸನ್ಮಾನಿಸಲಾಯಿತು.
ಗ್ರಾಮದ ಹನುಮಮ್ಮ ಕೆರೆಯಪ್ಪ, ಹೊಸಬಾಳೆ ನಾಗಮ್ಮ, ಮಹಾದೇವಮ್ಮ, ಗೌರಮ್ಮ ಸೋಬಾನೆ ಪದಗಳ ಮೂಲಕ, ಗ್ರಾಮದ ಮಂಜಪ್ಪ, ಉಮೇಶ, ಶಿವಕುಮಾರ, ನಾಗರಾಜ ಸಾಸ್ಕೊಳಿ, ಈಶ್ವರ, ರಾಮಪ್ಪ ಗೋವಿನ ಹಾಡು ಮೂಲಕ ರಂಜಿಸಿದರು.
ಕಜಾ ಪರಿಷತ್ತಿನ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ, ಕಸಾಸಾಂವೇ ಅಧ್ಯಕ್ಷ ಷಣ್ಮುಖಾಚಾರ್ ದಿಕ್ಸೂಚಿ, ಅಧ್ಯಕ್ಷೆ ಸುಜಾತಾ ಜೋತಾಡಿ ಆಶಯ ಮಾತುಗಳನ್ನಾಡಿದರು.
ಸಂಯೋಜಕಿ ರೋಹಿಣಿ ಜಿ.ಬಡಿಗೇರ ಸ್ವಾಗತಿಸಿದರು. ಗುರುವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಬಡಿಗೇರ, ಜಗದೀಶ್ ಬಡಿಗೇರಾ, ರಾಮಪ್ಪ, ಜಗದೀಶ, ನಂದೀಶ್ ಗೌಡ, ಮಂಜಪ್ಪ, ಮಹಾಬಲೇಶ್ವರ ಇದ್ದರು.
ಕಜಾಪ ಉಪಾಧ್ಯಕ್ಷೆ ಗೌರಮ್ಮ ಭಂಡಾರಿ, ಜನಸಂಗ್ರಾಮದ ಅಧ್ಯಕ್ಷ ಶಂಕರ್ ಶೇಟ್, ರಾಘವೇಂದ್ರ, ಸುಬ್ರಹ್ಮಣ್ಯ ಗುಡಿಗಾರ, ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಎಲ್.ವೆಂಕಟೇಶ್ ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post