ಕಲ್ಪ ಮೀಡಿಯಾ ಹೌಸ್ | ಸೊರಬ |
ಗಣಿಗಾರಿಕೆಯ ದುಷ್ಪರಿಣಾಮಗಳ ಬಗ್ಗೆ ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗಣಿಗಾರಿಕೆ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ವಿಜ್ಞಾನಿಗಳಾಗಮಿಸಿ ಇಲ್ಲಿನ ಪರಿಸ್ಥಿತಿ ವೀಕ್ಷಿಸಿ ಗಣಿ ಅವಧಿಯನಕ ಜನ ಜೀವಿಗಳಿಗೆ ಮಾರಕವಾಗದಂತೆ, ನಿಯಮಾನುಸಾರ ಸ್ಫೋಟಕಗಳನ್ನು ಬಳಸುವಂತೆ ಸೂಚಿಸಿದ್ದರು. ಅದರಂತೆ ಗ್ರಾಮವೂ ಒಪ್ಪಿ ಕೆಲವು ನಿಬಂಧನೆಗಳ ಮೇಲೆ ಗಣಿ ಕೆಲಸಕ್ಕೆ ಇಪ್ಪಿತ್ತು.
ಡೀಮ್ಡ್ ಅರಣ್ಯದ ನಾಶ, ಗಣಿಗಾರಿಕೆ ಸ್ಫೋಟಕಗಳು ಜನರ, ವನ್ಯಜೀವಿಗಳ ಪಾಲಿಗೆ ಕುತ್ತಾಗಿರುವುದನ್ನು ಮಾಧ್ಯಮ ಗಳು, ವಿಜ್ಞಾನಿಗಳು ಸಾವಿರ ಸಲ ಹೇಳಿದರೂ ಸ್ವಾರ್ಥ ಕ್ಕಾಗಿ ಅಭಿವೃದ್ಧಿ ಹೆಸರಲ್ಲಿ ಬಡವರ ಮೇಲೆ ಸಮಾದಿ ಕಟ್ಟುವ ಇಂತಹ ಕೆಲಸ ಹೇಯಕರ.ಶ್ರೀಪಾದ್ ಬಿಚ್ಚುಗತ್ತಿ ಪರಿಸರ ಅಧ್ಯಯನಕಾರ
ಮನುಷ್ಯನ ಜೀವ , ಅನೇಕ ಪ್ರಾಣಿ ಪಕ್ಷಿಗಳ ಜೀವಕ್ಕಿಂತ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗಣಿಗಾರಿಕೆಯ ಮುಖ್ಯವಾಗಿದೆ. ಮುಂದಿಬ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ, ಜಿಲ್ಲೆ, ತಾಲ್ಲೂಕು ಆಡಳಿತದ ಎದುರು ಪ್ರತಿಭಟಿಸುವ ಮೂಲಕ ನ್ಯಾಯಕ್ಕಾಗಿ ಹೋರಾಡಲು ಸಜ್ಜಾಗಿದ್ದೇವೆ.
ಗ್ರಾಮ ಪ್ರಮುಖ ನಾಗರಾಜ್ ,ಮಂಜು, ನೂರ್ ಅಹಮದ್, ರಘು, ಶಶಿ, ಪ್ರವೀಣ್, ಕಮಲಾಕರ್, ಬಸ್ತಿಕೊಪ್ಪ ಗ್ರಾಮಸ್ಥರು
ಮುಖ್ಯವಾಗಿ ಗಣಿ ದುಷ್ಪರಿಣಾಮಗಳಿಂದ ಇಲ್ಲಿನ ಜನರ ಆರೋಗ್ಯ ಕೆಟ್ಟಿದೆ. ಗಣಿ ಸಮೀಪವಿರುವ ಕಾಯ್ದಿಟ್ಟ ಅರಣ್ಯ ಹಾಳಾಗುತ್ತಿದೆ. ಗಣಿ ಸ್ಫೋಟಕ್ಕೆ ಭಯಬಿದ್ದ ಕಾಡು ಪ್ರಾಣಿಗಳು, ವಿಷಪೂರಿತ ಹಾವುಗಳು ಗ್ರಾಮಕ್ಕೆ ನುಗ್ಗುತ್ತಿವೆ. ನೀರು, ಗಾಳಿ, ವಾತಾವರಣ ಕಲುಷಿತಗೊಂಡಿದ್ದು ನಮ್ಮ ಸ್ಥಿತಿ ತೀರಾ ಹದಗೆಟ್ಟಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬರುವ ತನಕ ವಾಹನ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ವರದಿ: ಮಧುರಾಮ್, ಸೊರಬ
Discussion about this post