ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮೀಣ ಭಾಗದಲ್ಲಿ ನೆಲೆ ನಿಲ್ಲುವವನಿಗೆ ಕೌಶಲ್ಯಗಳು ಅತ್ಯಗತ್ಯ, ಹಾಗಾಗಿ ಕೌಶಲ್ಯಗಳ ಸಂವೃದ್ಧಿಗೆ ಆತ ಸಕಾರಾತ್ಮಕವಾಗಿ ಮುಂದಾಗಬೇಕು ಎಂದು ಗೌತಮ ಬಿಚ್ಚುಗತ್ತಿ ಹೇಳಿದರು.
ತಾಲ್ಲೂಕು ಯಲಸಿ ಗ್ರಾಮದ ಸುವರ್ಣ ವನದಲ್ಲಿ ಪಟ್ಟಣದ ಅಮರಜ್ಯೋತಿ ಪಿಯೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ದಿ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೃಷಿ ಕೌಶಲಗಳ ಕುರಿತು ಮಾತನಾಡಿದ ಅವರು ಕೃಷಿಯಲ್ಲಿ ಜೇನಿನ ಪಾತ್ರ ಆತ್ಯಂತ ಅಗತ್ಯವಾಗಿದ್ದು ಸುಸ್ಥಿರ ಕೃಷಿಗೆ ಜೇನು ನೆರವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಏರು ಮುಡಿ ಪ್ರಾತ್ಯಕ್ಷಿಕೆ ಮೂಲಕ ಒಂದೆ ಮುಡಿಯಲ್ಲಿ ವಾರ್ಷಿಕ ತರಕಾರಿ ಬೆಳೆಯುವ ವಿಧಾನವನ್ನು ತೋರಿಸಿಕೊಡಲಾಯಿತು.
ಕಾಲೇಜು ಉಪನ್ಯಾಸಕ ಪ್ರಜ್ವಲ್ ಚಂದ್ರಗುತ್ತಿ ಮಾತನಾಡಿ, ಮಕ್ಕಳನ್ನು ನಾಲ್ಕು ಗೋಡೆಯ ಮದ್ಯದಿಂದ ಹೊರ ಜಗತ್ತಿಗೆ ತಂದು ಜೀವನೋಪಾಯದ ಜೊತೆಗೆ ಸ್ವಸ್ಥ ಜೀವನ ನಡೆಸುವ ಮಾರ್ಗವನ್ನು ತೋರಿಸಿಕೊಡುವ ಅಗತ್ಯವಿದೆ ಎಂದರು.
ಅಮರಜ್ಯೋತಿ ಕಾಲೇಜಿನ 50 ವಿದ್ಯಾರ್ಥಿಗಳು, ಸಿ. ಲೆನಿಟ, ಉಪನ್ಯಾಸಕ ಪುರುಷೋತ್ತಮ್, ಅನಿಲ್ ಕುಮಾರ್, ಅಶ್ವಿನಿ, ನೇಸರ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















