ಕಲ್ಪ ಮೀಡಿಯಾ ಹೌಸ್ | ಸೊರಬ |
ತುರ್ತು ಆರೋಗ್ಯ ಸಂದರ್ಭದಲ್ಲಿ ಅವಶ್ಯತೆ ಎದುರಾಗುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜೂನ್ 1ರ ಶನಿವಾರ ಬೃಹತ್ ರಕ್ತದಾನ ಶಿಬಿರ #BloodDonationCamp ಆಯೋಜಿಸಲಾಗಿದೆ.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದ್ದು, ಬೆಳಗ್ಗೆ 9 ರಿಂದ 3 ಗಂಟೆಯವರೆಗೂ ನಡೆಯಲಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ #BloodDonation ಮಾಡುವಂತೆ ಕರೆ ನೀಡಲಾಗಿದೆ.
ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳ ಕಚೇರಿ, ರಕ್ತನಿಧಿ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಸೊರಬ #Soraba ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಜ್ಯ ಸರ್ಕಾರಿ ನೌಕರರ ಸಂಘ ಸೊರಬ ತಾಲೂಕು ಶಾಖೆ, ಸೊರಬ ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ.
ರಕ್ತದಾನ ಮಾಡಿ ಜೀವ ಉಳಿಸುವ ಉದ್ದೇಶದಿಂದ ಬೃಹತ್ ರಕ್ತದಾನ ಶಿಬಿರವು ಏರ್ಪಡಿಸಿದ್ದು ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಹೆಚ್ಚು ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕೋರಿದ್ದಾರೆ.
ಯಾರೆಲ್ಲಾ ರಕ್ತದಾನ ಮಾಡಬಹುದು?
- ಕನಿಷ್ಠ 45 ಕೆಜಿ ದೇಹ ತೂಕ ಇರುವ ಆರೋಗ್ಯವಂತ ವ್ಯಕ್ತಿಗಳು
- 18 ರಿಂದ 60 ವರ್ಷದ ಒಳಗಿನ ಪುರುಷರು, ಮಹಿಳೆಯರು
- ಕನಿಷ್ಟ 12.5 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿರಬೇಕು
- ರಕ್ತದ ಒತ್ತಡ ಸಮವಾಗಿರಬೇಕು
ಯಾರು ರಕ್ತದಾನ ಮಾಡುವಂತಿಲ್ಲ?
ಒಂದು ವರ್ಷದಿಂದೀಚೆಗೆ ಮಲೇರಿಯಾ, ಟೈಫಾಯ್ಡ್, ಜಾಂಡೀಸ್ ಆದವರು, ಒಂದು ವರ್ಷದಿಂದೀಚೆಗೆ ಶಸ್ತçಚಿಕಿತ್ಸೆಗಳಿಗೆ ಒಳಪಟ್ಟವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಋತುಸ್ರಾವದಲ್ಲಿರುವ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post