ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ #Southwestern Graduate and Teachers Constituency ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಮತ್ತು ಡಾ.ಕೆ.ಕೆ. ಮಂಜುನಾಥ್ ಅವರನ್ನು ಗೆಲ್ಲಿಸಬೇಕು ಎಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ ಮತ್ತು ಡಾ.ಕೆ.ಕೆ. ಮಂಜುನಾಥ್ ಈ ಇಬ್ಬರು ಕೂಡ ಸಮರ್ಥ ಅಭ್ಯರ್ಥಿಗಳಾಗಿದ್ದಾರೆ. ಪದವೀಧರ ಮತ್ತು ಶಿಕ್ಷಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಅರಿತಿದ್ದಾರೆ. ಅವರೊಡನೆ ಬೆರೆತಿದ್ದಾರೆ. ಈಗಾಗಲೇ ಮತದಾರರನ್ನು ತಲುಪಿದ್ದಾರೆ. ಅವರ ಗೆಲುವು ಖಚಿತ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಹಾಗೂ ದಕ್ಷಿಣ ಬ್ಲಾಕ್ ಕಾರ್ಯಕರ್ತರು ಈಗಾಗಲೇ ಮನೆಮನೆಗೆ ತಲುಪಿ ಮತದಾರರನ್ನು ಭೇಟಿ ಮಾಡಿದ್ದಾರೆ. ಅದಲ್ಲದೆ ಬ್ಯಾಂಕ್‍ಗಳು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಪ್ರಚಾರ ಮಾಡಿದ್ದೇವೆ. ಪದವೀಧರರಾಗಿದ್ದು, ಉದ್ಯಮದಲ್ಲಿರುವವರನ್ನು ಭೇಟಿ ಮಾಡಿದ್ದೇವೆ. ವಕೀಲರ ಬಳಿ ಮತ ಯಾಚಿಸಿದ್ದೇವೆ. ಸಂಘಟಿತರಾಗಿ ಕೆಲಸ ಮಾಡಿದ್ದೇವೆ ಎಂದರು.
Also read: ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ
ಆಯನೂರು ಮಂಜುನಾಥ್ ಅವರ ಕ್ರಮ ಸಂಖ್ಯೆ 1 ಆಗಿದೆ. ಡಾ.ಕೆ.ಕೆ. ಮಂಜುನಾಥ್ ಕುಮಾರ್ ಅವರ ಕ್ರಮ ಸಂಖ್ಯೆ 2 ಆಗಿದೆ. ಈ ಇಬ್ಬರಿಗೂ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ತಾಂದಳೆ, ರಾಜಶೇಖರ್, ಇಮ್ರಾನ್, ಶಮೀನ ಬಾನು, ಇಕ್ಬಾಲ್ ನೇತಾಜಿ, ಹಸನ್‍ಆಲಿ ಆಫ್ರೀದಿ, ಮಂಜು, ಜಾಕೀರ್, ಸೇರಿದಂತೆ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post