ಕಲ್ಪ ಮೀಡಿಯಾ ಹೌಸ್
ಸೊರಬ: ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತಹೆಗಡೆ ಅಶಿಸರ ಜೀವವೈವಿಧ್ಯ ಅಭಿಯಾನದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಗರ, ಹೊಸನಗರ ತಾಲ್ಲೂಕು ಸಂಚಾರ ಕೈಗೊಂಡು ಸಾಗರ ತಾಲೂಕು ಇಒ ಕಛೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ಗ್ರಾಪಂ ಪಿಡಿಒ ಜೊತೆ ಸಭೆ ನಡೆಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಬಳಿಕ ಇಒ, ತಾಲೂಕು ಪರಿಸರ ತಜ್ಞರ ಜೊತೆ ಸಮಾಲೋಚನೆ, ಹೊಸನಗರ ತಾಲ್ಲೂಕು ಬಾಣಿಗ ಗ್ರಾಮದಲ್ಲಿನ ಪವಿತ್ರವನದಲ್ಲಿ ಗ್ರಾಮ ಅರಣ್ಯ ಸಮಿತಿ, ಹರಿದ್ರಾವತಿ ಗ್ರಾಪಂ ಜೀವವೈವಿಧ್ಯ ಸಮಿತಿ ಸಹಯೋಗದೊಡನೆ ವೃಕ್ಷಾರೋಪಣ, ಹೊಸನಗರ ತಾಲ್ಲೂಕು ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ಸಾರ ಸಂಸ್ಥೆ ಹಾಗೂ ಸ್ವಗ್ರಾಮ ಸಮಿತಿಯೊಂದಿಗೆ ವೃಕ್ಷಾರೋಪಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮುತ್ತಲ ವೃಕ್ಷಾರೋಪಣದ ವೇಳೆ ಹುಂಚ ಗ್ರಾಮದ ಪರಿಸರ ರಕ್ಷಣೆಯಲ್ಲಿ ಕಾಳಜಿ ವಹಿಸಿರುವ ನಾಗೇಂದ್ರ ಸಂಗಡಿಗರನ್ನು ಗುರುತಿಸಿ ಗೌರವಿಸಲಾಯಿತು.
ಸಾಗರ ತಾಪಂ ಇಒ ಪುಷ್ಪಾ ಆರ್. ಕಮ್ಮಾರ್, ಹೊಸನಗರ ತಾಪಂ ಇಒ ಪ್ರವೀಣಕುಮಾರ್, ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಕವಲಕೋಡು ವೆಂಕಟೇಶ್, ಅನೆಗುಳಿ ಸುಬ್ಬರಾವ್, ಬಿ.ಎಚ್. ರಾಘವೇಂದ್ರ, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಸಾಗರ, ಹೊಸನಗರ ವಲಯದ ಅರಣ್ಯಾಧಿಕಾರಿಗಳು, ಬಾಣಿಗ ಗ್ರಾಅಸ ಅಧ್ಯಕ್ಷ ಸತೀಶ್, ಹರಿದ್ರಾವತಿ ಗ್ರಾಪಂ ಅಧ್ಯಕ್ಷ ಲೀಲಾವತಿ ಸುರೇಶ್, ಸದಸ್ಯ ವಾಟಗೋಡು ಸುರೇಶ್, ಗುರುಮೂರ್ತಿ, ಮಾರುತಿಪು ಗ್ರಾಪಂ ಅಧ್ಯಕ್ಷ ಚಿದಂಬರ್, ಗ್ರಾಮ ಪ್ರಮುಖ ಮಂಜುನಾಥಹೆಗಡೆ, ಪರಿಸರ ರಕ್ಷಣೆ ಸಾಧಕ ರವಿಹನಿಯ, ಸುಬ್ರಹ್ಮಣ್ಯ ಚಕ್ರವಾಕ, ಮುತ್ತಲ ಗ್ರಾಮದ ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಅರಣ್ಯ ಸಮಿತಿ ಅಧ್ಯಕ್ಷ ಚೌಡಪ್ಪ, ಕಿರು ಅರಣ್ಯ ಸಮಿತಿ ಅಧ್ಯಕ್ಷ ರಾಜಶೇಖರ್, ಕೆರೆ ಸಮಿತಿ ಅಧ್ಯಕ್ಷ ಗೋಪಾಲ್, ಕೃಷ್ಣಪ್ಪ, ಸ್ವಗ್ರಾಮ ಯೋಜನೆ ಸಂಚಾಲಕ ಯೇಸುಪ್ರಕಾಶ್, ಧನುಷ್, ಸಾರಾ ಸಂಸ್ಥೆಯ ಕುಮಾರ್, ಗ್ರಾಮಸ್ಥರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post