ಕಲ್ಪ ಮೀಡಿಯಾ ಹೌಸ್ | ಸೊರಬ |
ಬಾಲ್ಯದಿಂದಲೇ ಆರ್ ಎಸ್ಎಸ್ #RSS ಸ್ವಯಂಸೇವಕನಾದ ನನಗೆ ಸಂಘ ಪರಿವಾರದ ಪರಿಚಯವಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಡಾ. ಧನಂಜಯ ಸರ್ಜಿ #Dr. Dhananjaya Sarji ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಧನಂಜಯ ಸರ್ಜಿ, ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ತರುವಾಯ ಎಡಪಂಥೀಯರು ಮತ್ತು ಕಮ್ಯುನಿಷ್ಟರು ನಡೆಸಿದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ. ಬಾಲ್ಯದಿಂದಲೇ ಬಸವೇಶ್ವರ ನಗರದ ಶಾಖೆಯಿಂದ ಸಂಘದ ಆರ್‍ಎಸ್‍ಎಸ್ ಸ್ವಯಂಸೇವಕನಾಗಿದ್ದು, ನಂತರ ಪ್ರಾಥಮಿಕ ಶಿಕ್ಷಾವರ್ಗ, ಸಂಘ ಶಿಕ್ಷಾವರ್ಗವನ್ನು 30 ವರ್ಷದ ಹಿಂದೆಯೇ ಪೂರ್ಣ ಮಾಡಿದ್ದೇನೆ. ಜೊತೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸುವ ವೇಳೆ ಸಂಘ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದರು.
Also read: ಉಡುಪಿ | ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಡಾ. ಧನಂಜಯ ಸರ್ಜಿ
ಹರ್ಷ ಹತ್ಯೆಯ #Harsha Murder ನಂತರ ಶಿವಮೊಗ್ಗದಲ್ಲಿ ವ್ಯಾಪಾರ-ವಹಿವಾಟು ಹಿನ್ನೆಡೆಯಾಗಿತ್ತು. ಇದರಿಂದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದೆನು. ಆದರೆ, ಬಾಲ್ಯದಿಂದಲೇ ನನಗೆ ಸಂಘದ ಪರಿಚಯವಿದೆ. ಕೆಲವರು ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಿಂದ ಬಂದಿದ್ದೇನೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ವಿಕಾಸ ಟ್ರಸ್ಟ್ ನ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

























