ಕಲ್ಪ ಮೀಡಿಯಾ ಹೌಸ್ | ಸೊರಬ |
ನಮ್ಮ ಸಮಾಜದ ಪ್ರತಿಭಾನ್ವಿತರಲ್ಲಿ, ಉನ್ನತ ಹುದ್ದೆ ಏರಿದವರಲ್ಲಿ ಸಮಾಜದ ಹಿತದೃಷ್ಟಿಯ ಕಾಳಜಿ ಕಡಿಮೆಯಾಗಿರುವುದು ಖೇದಕರ ಸಂಗತಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.
ಪಟ್ಟಣದ ಶ್ರೀ ಗಿರಿಜಾಶಂಕರ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣ ಸಮಾಜ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಬ್ರಾಹ್ಮಣ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸಂಘಟನೆಯ ಉದ್ದೇಶಗಳನ್ನು, ಸಂಘಟನೆಯ ಔಚಿತ್ಯತೆಯ ಕುರಿತು ಪತ್ರಕರ್ತೆ ಶ್ರೀಲಕ್ಷ್ಮೀ ರಾಜಕುಮಾರ್ ದಿಕ್ಸೂಚಿ ಭಾಷಣ ಮಾಡಿದರು.

ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ದಿವಾಕರಭಟ್ ಭಾವೆ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸಮಾಜದ ಸಾಧಕರಾದ ಕೆ.ವಿ.ಲಕ್ಷ್ಮೀ ನಾರಾಯಣಸ್ವಾಮಿ, ಶಿವರಾಮ ಜೋಯ್ಸ್, ಸಂಜಯಡೋಂಗ್ರೆ, ಪ್ರಕಾಶರಾವ್ ಬಾಪಟ್, ಡಾ.ಅಜಿತ್ ಹೆಗಡೆ, ವಿಘ್ನೇಶ್ ತಲಕಾಲಕೊಪ್ಪ, ಪ್ರತಿಭಾ, ಸಚಿನ್, ಸುಧೀಂದ್ರ ಹೆಬ್ಬಾರ್ ಇನ್ನೂ ಅನೇಕ ಪ್ರತಿಭಾನ್ವಿತರಿಗೆ ಸನ್ಮಾನಿಸಲಾಯಿತು.

ಸಮಾಜ ಪ್ರಮುಖರಾದ ಹೆಚ್.ಎಸ್.ಮಂಜಪ್ಪ, ಕಟ್ಟಿನಕೆರೆ ಸೀತಾರಾಮಯ್ಯ, ಪ್ರಭಾಹೊಂಕಣ, ಸುರೇಶ್ ನಾಡಿಗೇರ್ ವೇದಿಕೆಯಲ್ಲಿದ್ದರು.
ತಾಲ್ಲೂಕು ಬ್ರಾಹ್ಮಣ ಸಮುದಾಯದವರು ಪಾಲ್ಗೊಂಡರು.











Discussion about this post