ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯವಿದ್ದರೂ #Forest ಸರ್ಕಾರಿ ಬಂಜರು ಜಾಗ ಎಂಬ ಕಾರಣದಿಂದ ಮಂಜೂರಾತಿಗೆ ಮುಂದಾಗಿರುವ ಪರಿಣಾಮ 8 ಎಕರೆಗೂ ಹೆಚ್ಚು ಮರಗಿಡಗಳ ಮಾರಣಹೋಮವಾಗಿರುವ ಘಟನೆ ತಾಲ್ಲೂಕಿನ ಹೊಳೆಮರೂರು ಗ್ರಾಮದಲ್ಲಿ ಜರುಗಿದೆ.
ಸರ್ಕಾರಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಪುಡಿ ರಾಜಕಾರಣಿಗಳಿಂದಾಗಿ ಮಲೆನಾಡು #Malnad ಶೀಘ್ರವಾಗಿ ಬಯಲು ನಾಡಾಗುವುದರಲ್ಲಿ ಸಂದೇಹವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿ ಮೇಲಿಂದಮೇಲೆ ಪರಿಸರದ ಮೇಲೆ ಪ್ರಹಾರ ನಡೆಯುತ್ತಿದ್ದು, ಕಳ್ಳ ದಂದೆಗಾಗಿ ಕಾಡುಪ್ರಾಣಿಗಳ ಹತ್ಯೆ, ಬಗರ್ ಹುಕುಂಗಾಗಿ ಇರುವ ಒಂದಿಷ್ಟು ಅರಣ್ಯ ನಾಶ ದಿನಬೆಳಗಾದರೆ ಕೇಳುವಂತಾಗಿದೆ. ಈಗ ಜನ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ ನೀರಿನ ಮೂಲದ ಬುಡಕ್ಕೆ ಕೊಡಲಿ ಹಾಕುತ್ತಿರುವುದು ಹೇಯಕರ ಸಂಗತಿ ಎಂದು ಅಸಹನೆ ವ್ಯಕ್ತಪಡಿಸಿರುವ ಗ್ರಾಮಸ್ಥರು ಇಲಾಖೆಯವರ ಕುಮ್ಮಕ್ಕಿಲ್ಲದೆ ಈ ಕೃತ್ಯ ನಡೆದಿಲ್ಲ. ದುರಾಸೆಗೆ ದೇಶವನ್ನೇ ಮಾರಿಕೊಳ್ಳುವಂತ ಕಾರ್ಯಕ್ಕೆ ಇಂತವರು ಮುಂದಾಗಿದ್ದಾರೆ ಎಂದು ಕಠಿಣವಾಗಿ ಆರೋಪಿಸಿದರು.
ನೆಪಕ್ಕೆ ಒಂದಿಷ್ಟು ಜಮೀನು ಖರೀದಿಸಿ ಅಥವಾ ಮಂಜೂರು ಮಾಡಿಸಿಕೊಂಡು. ಅಕ್ಕಪಕ್ಕದ ಜಾಗವನ್ನು ಕಬಳಿಸುವ ಕೆಲಸ ನಡೆಯುತ್ತಿದ್ದು ಸಮಗ್ರ ಪರಿಶೀಲನೆ ಆಗಬೇಕು.
-ಸುಬ್ರಹ್ಮಣ್ಯ ಗ್ರಾಮಸ್ಥ ಹೊಳೆಮರೂರು
ಕಂದಾಯ ಇಲಾಖೆಯವರ ಪಾತ್ರ ಇಲ್ಲಿ ಹಿರಿದಾಗಿದ್ದು ಮರಗಿಡಗಳನ್ನು ಕಡಿಯಲು ಅವರೆ ಪ್ರೇರಿಪಿಸುತ್ತಾರೆ. ಈ ನಾಶದ ಹಿನ್ನೆಲೆಯಲ್ಲಿ ಅನೇಕ ಕಾಣದ ಕೈಗಳಿವೆ ಸಮಗ್ರ ತನಿಖೆಯಾಗಲಿ.
-ಎ.ಕೆ.ಗಂಗಾಧರ್ ಗ್ರಾಮಸ್ಥರು ಹೊಳೆಮರೂರು
ಈ ಕೃತ್ಯದಿಂದಾಗಿ ಸಾವಿರಾರು ಮೌಲ್ಯಯುತ ಮುಂಪೀಳಿಗೆ ಕಾಡು ಗಿಡಗಳು, ನೂರಾರು ಮರಗಳು ಆಹುತಿಯಾಗಿವೆ. ಸಾಲದೆಂಬಂತೆ ಬೆಂಕಿ ಹಚ್ಚಲಾಗಿದೆ. ಪಕ್ಕದಲ್ಲಿ ಸನಂ 120ರಲ್ಲಿ ಧಟ್ಟ ಅರಣ್ಯ ಹಾಗೂ ಸನಂ 41 ರಲ್ಲಿ 430 ಎಕರೆ ಅರಣ್ಯವಿದೆ. ಈ ಎಲ್ಲಾ ಕಾಡುಗಳಿಗೂ ಈ ದುಷ್ಕೃತ್ಯದ ಪರಿಣಾಮ ಬೀರಲಿದೆ. ಈ ಅರಣ್ಯ ಕಡಿತಲೆ ಬಹಳ ದಿನಗಳಿಂದಲೇ ರಾತ್ರಿ ವೇಳೆ ನಡೆಯುತ್ತಿದ್ದು ಗ್ರಾಮದಿಂದ ಬಹಳಷ್ಟು ದೂರವಿರುವುದರಿಂದ ಗಮನಕ್ಕೆ ಬಂದಿಲ್ಲ. ಈ ಕೃತ್ಯವನ್ನು ಒಬ್ಬರೆ ಮಾಡಿಲ್ಲ. ಇದರ ಹಿಂದೆ ಅನೇಕರ ಕೈವಾಡವಿದೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮದ ಸನಂ 121 ರ 12 ಎಕರೆ ವಿಸ್ತೀರ್ಣದ ಸರ್ಕಾರಿ ಬಂಜರು ಜಾಗದಲ್ಲಿ ಯಥೇಚ್ಛ ಮರಗಿಡಗಳಿದ್ದೂ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಸ್ತಾವನೆಗೆ ಮುಂದಾಗಿದೆ. ಅರಣ್ಯ ಇಲಾಖೆ ಎನ್ಓಸಿ ಕೊಟ್ಟಿಲ್ಲ ಎಂದು ಸ್ಥಳಕ್ಕೆ ಬಂದಿದ್ದ ಆರ್ಎಫ್ಒ ಜಾವಿದ್ ಸ್ಪಷ್ಟನೆ ನೀಡಿದ್ದಾರೆ.
ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ ರಮೇಶ್ ಸ್ಥಳದಲ್ಲಿದ್ದು ಈ ಜಾಗ ಮಂಜೂರು ಮಾಡಿಲ್ಲ, ಮರಕಡಿತಲೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಯಾವುದೇ ಕಾರಣಕ್ಕೂ ಈ ಕೃತ್ಯವನ್ನು ನಾವು ಸಹಿಸುವುದಿಲ್ಲ. ಈ ಜಾಗ ಅರಣ್ಯವಾಗಿಯೆ ಉಳಿಯಬೇಕು. ಪುನಃ ಅರಣ್ಯೀಕರಣವಾಗಬೇಕು.
-ಚಂದ್ರಶೇಖರ ಗೌಡ್ರು ಗ್ರಾಮಸ್ಥರು ಹೊಳೆಮರೂರು
ಯಾವುದೇ ಕಾರಣಕ್ಕೂ ಇಲ್ಲಿ ಮಂಜೂರಾತಿ ಮಾಡಬಾರದು. ಇದು ಗ್ರಾಮದ ಸ್ವತ್ತಾಗಿ ಉಳಿಯಬೇಕು. ಮರು ಅರಣ್ಯೀಕರಣವಾಗಬೇಕು. ಮಂಜೂರಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ನೆಪಕ್ಕೆ ಒಂದಿಷ್ಟು ಜಮೀನು ಖರೀದಿಸಿ ಅಥವಾ ಮಂಜೂರು ಮಾಡಿಸಿಕೊಂಡು. ಅಕ್ಕಪಕ್ಕದ ಜಾಗವನ್ನು ಕಬಳಿಸುವ ಕೆಲಸ ನಡೆಯುತ್ತಿದ್ದು ಸಮಗ್ರ ಪರಿಶೀಲನೆ ಆಗಬೇಕು.
-ಸುಬ್ರಹ್ಮಣ್ಯ ಗ್ರಾಮಸ್ಥ ಹೊಳೆಮರೂರು
ಈ ಕೃತ್ಯದಿಂದಾಗಿ ಸಾವಿರಾರು ಮೌಲ್ಯಯುತ ಮುಂಪೀಳಿಗೆ ಕಾಡು ಗಿಡಗಳು, ನೂರಾರು ಮರಗಳು ಆಹುತಿಯಾಗಿವೆ. ಸಾಲದೆಂಬಂತೆ ಬೆಂಕಿ ಹಚ್ಚಲಾಗಿದೆ. ಪಕ್ಕದಲ್ಲಿ ಸನಂ 120ರಲ್ಲಿ ಧಟ್ಟ ಅರಣ್ಯ ಹಾಗೂ ಸನಂ 41 ರಲ್ಲಿ 430 ಎಕರೆ ಅರಣ್ಯವಿದೆ. ಈ ಎಲ್ಲಾ ಕಾಡುಗಳಿಗೂ ಈ ದುಷ್ಕೃತ್ಯದ ಪರಿಣಾಮ ಬೀರಲಿದೆ. ಈ ಅರಣ್ಯ ಕಡಿತಲೆ ಬಹಳ ದಿನಗಳಿಂದಲೇ ರಾತ್ರಿ ವೇಳೆ ನಡೆಯುತ್ತಿದ್ದು ಗ್ರಾಮದಿಂದ ಬಹಳಷ್ಟು ದೂರವಿರುವುದರಿಂದ ಗಮನಕ್ಕೆ ಬಂದಿಲ್ಲ. ಈ ಕೃತ್ಯವನ್ನು ಒಬ್ಬರೆ ಮಾಡಿಲ್ಲ. ಇದರ ಹಿಂದೆ ಅನೇಕರ ಕೈವಾಡವಿದೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮದ ಸನಂ 121 ರ 12 ಎಕರೆ ವಿಸ್ತೀರ್ಣದ ಸರ್ಕಾರಿ ಬಂಜರು ಜಾಗದಲ್ಲಿ ಯಥೇಚ್ಛ ಮರಗಿಡಗಳಿದ್ದೂ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಸ್ತಾವನೆಗೆ ಮುಂದಾಗಿದೆ. ಅರಣ್ಯ ಇಲಾಖೆ ಎನ್ಓಸಿ ಕೊಟ್ಟಿಲ್ಲ ಎಂದು ಸ್ಥಳಕ್ಕೆ ಬಂದಿದ್ದ ಆರ್ಎಫ್ಒ ಜಾವಿದ್ ಸ್ಪಷ್ಟನೆ ನೀಡಿದ್ದಾರೆ.
ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ ರಮೇಶ್ ಸ್ಥಳದಲ್ಲಿದ್ದು ಈ ಜಾಗ ಮಂಜೂರು ಮಾಡಿಲ್ಲ, ಮರಕಡಿತಲೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಯಾವುದೇ ಕಾರಣಕ್ಕೂ ಇಲ್ಲಿ ಮಂಜೂರಾತಿ ಮಾಡಬಾರದು. ಇದು ಗ್ರಾಮದ ಸ್ವತ್ತಾಗಿ ಉಳಿಯಬೇಕು. ಮರು ಅರಣ್ಯೀಕರಣವಾಗಬೇಕು. ಮಂಜೂರಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post