ಕಲ್ಪ ಮೀಡಿಯಾ ಹೌಸ್ | ಸೊರಬ |
ಬಡಾವಣೆಗಳಲ್ಲಿರಬಹುದಾದ ಸಮಸ್ಯೆಗಳನ್ನು ಎಲ್ಲರೂ ಸೇರಿ ಒಟ್ಟಾಗಿ ಆಡಳಿತದ ಗಮನಕ್ಕೆ ತಂದಾಗ ಮಾತ್ರ ಅದಕ್ಕೊಂದು ತಾರ್ಕಿಕ ಪರಿಹಾರ ದೊರೆಯುವಲ್ಲಿ ಸಫಲವಾಗುತ್ತದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಚಂದನ್ ಸಲಹೆ ನೀಡಿದರು.
ಹೊಸಪೇಟೆ ಬಡಾವಣೆಯ ಯುವರತ್ನ ಯುವಕ ಸಂಘದಿಂದ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಡಾವಣೆಯಲ್ಲಿ ಎಲ್ಲರೂ ಸೇರಿ ಒಂದು ಕುಟುಂಬದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತೀರಿ. ಇದು ಸ್ವಾಗತಾರ್ಹ ನಡೆಯಾಗಿದೆ. ಇದೇ ರೀತಿಯಲ್ಲಿ ನಿಮ್ಮ ಸಂಘಟನೆ ಇನ್ನೂ ಉತ್ತಮ ರೀತಿಯಲ್ಲಿ ಮುಂದುವರೆಯಲಿ ಎಂದು ಆಶಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಾಚಾರ್ಯ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದೆ. ಇತರೆ ಭಾಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿದ್ದು, ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು, ಈ ಭಾಷೆಯ ಬೆಳವಣಿಗೆಗೆ ರನ್ನ, ಪಂಪ, ಮುಂತಾದ ಕವಿವರಣ್ಯರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಹೊಸಪೇಟೆ ಬಡಾವಣೆಯ ಹಿತರಕ್ಷಣಾ ವೇದಿಕೆ, ಯುವ ರತ್ನ ಯುವಕ ಸಂಘ, ಸಂಜಯನಗರ ಇವರು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ಫಾರಾಜ್, ಉಪಾಧ್ಯಕ್ಷ ಗುಡ್ಡಪ್ಪ, ಕಾರ್ಯದರ್ಶಿ ಮಂಜು, ಖಜಾಂಚಿ ಕುಮಾರ್, ಸಂಚಾಲಕ ವಿನಯ್, ಸದಸ್ಯರು ಫಾರೂಕ್ ದಿವ್ಯ, ಅಂಗನವಾಡಿ ಟೀಚರ್ ರತ್ನಮ್ಮ, ಸುನಿಲ್, ಆಕಾಶ್, ರಾಹುಲ್, ವಿಜೀತ್, ಸತೀಶ್ ಕುಟ್ಟಿ ,ರಘು, ವಿನಾಯಕ, ಗಗನ ಸೇರಿದಂತೆ ಹಲವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post