ಕಲ್ಪ ಮೀಡಿಯಾ ಹೌಸ್ | ಸೊರಬ |
ಮಳೆಯ ಮೋಡ, ಅಲ್ಲಲ್ಲಿ ಸಾಧಾರಣ, ಕೆಲವೆಡೆ ಜೋರು ಮಳೆಯ ನಡುವೆಯೂ ತಾಲ್ಲೂಕಿನಾದ್ಯಂತ ಸಂಭ್ರಮ ಸಡಗರದ ದೀಪಾವಳಿ ಆಚರಣೆ ನಡೆಯಿತು.


ಬೆಳಿಗ್ಗೆಯಿಂದಲೆ ವೈವಿಧ್ಯಮಯ, ವರ್ಣರಂಜಿತ ಅಲಂಕಾರ ನಡೆಸಿ ತಮ್ಮ ಎತ್ತು, ಹೋರಿ, ಆಕಳುಗಳನ್ನು ಮೆರವಣಿಗೆಗೆ ತಂದರು. ಹೋರಿಗೆ ಕಟ್ಟಿದ ಅಡಿಕೆ ಮಾಲೆ, ಕೊಬ್ಬರಿ ಹರಿಯುವ ಸಾಹಸವೂ ಕಂಡು ಬಂತು. ಮುಜರಾಯಿ ದೇವಸ್ಥಾನಗಳಲ್ಲಿ ಮುಜರಾಯಿ ಸಮಿತಿಯವರು ಗೋಪೂಜೆ ನಡೆಸಿದರೆ, ಇತ್ತ ಕೃಷಿಕರು ಗೋಪೂಜೆ ಸಲ್ಲಿಸಿದರು.


ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕೃಷಿ ಭೂಮಿಗೆ ದೊಂದಿ ಬೆಳಗಿಸುವುದು, ಬಲೀಂದ್ರನ ಪೂಜೆ, ಕೃಷಿ ಪರಿಕರಗಳಿಗೆ, ತಮ್ಮ ವೃತ್ತಿ ಪೂರಕ ಸಲಕರಣೆಗಳಿಗೆ, ವಾಹನಗಳಿಗೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಹೋರಿ ಎತ್ತುಗಳ ಮೆರವಣಿಗೆ ನಡೆಸಿದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















