ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಧಾರ್ಮಿಕ ಹಾಗೂ ಪುರಾತನ ವಿಷಯಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಕಥೆ ಪುಸ್ತಕಗಳನ್ನು ಮಕ್ಕಳು ಓದುವುದರಿಂದ ಇತಿಹಾಸದ ಮಹತ್ವವನ್ನು ತಿಳಿಯಬಹುದು ಎಂದು ಸ್ಪೂರ್ತಿ ಸ್ನೇಹಿತರ ಬಳಗದ ಅಧ್ಯಕ್ಷೆ ವೀಣಾ ಶಶಿಧರ್ ಹೆಗಡೆ ಹೇಳಿದರು.
ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ, ಹಾಗೂ ಶಿವಪ್ಪ ಮಾಸ್ತರ್ ಅವರ ಸ್ಮರಣಾರ್ಥವಾಗಿ ಸ್ಪೂರ್ತಿ ಸ್ನೇಹಿತರ ಬಳಗದಿಂದ ವತಿಯಿಂದ ಡಾ.ಎಚ್.ಎಸ್. ಮೋಹನ್ ಅವರು ರಚಿಸಿದ ಚಂದ್ರಗುತ್ತಿ ಶ್ರೀ ರೇಣುಕಾಂಬಾದೇವಿ ಜಾತ್ರೆ ಎಂಬ ಸಾಂಸ್ಕೃತಿಕ ಓಲನೋಟಗಳನ್ನು ಒಳಗೊಂಡ ಕಥಾ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ರೇಣುಕಾಂಬ ದೇವಿಯ ಧಾರ್ಮಿಕ ಹಿನ್ನೆಲೆ ಕುರಿತು ಡಾಕ್ಟರ್ ಎಚ್.ಎಸ್ ಮೋಹನ್ ರಚಿಸಿರುವ ಪುಸ್ತಕದಲ್ಲಿ ರೇಣುಕಾಂಬೆಯ ಕಥೆಗಳು ತೀವ್ರ ವೈವಿಧ್ಯತೆ ಇದ್ದು. ವಿರೋಧಾಭಾಸಗಳು ಕೂಡ ಕಂಡುಬರುತ್ತವೆ. ಜನಪದ ಪುಸ್ತಕಗಳಲ್ಲಿ ಬೇರೆ ಬೇರೆ ರೀತಿಯ ಜಾನಪದ ಕಥೆಗಳು ಕೂಡ ಇವೆ. ಇವುಗಳನ್ನು ಮಕ್ಕಳು ಓದಬೇಕು ಮುಂದಿನ ಪೀಳಿಗೆಗೆ ತಿಳಿಸುವ ಸಂಕಲ್ಪ ನಮ್ಮದಾಗಬೇಕು ಎಂದರು.
ಜಾನಪದ ಹಾಗೂ ಇತಿಹಾಸದ ಕುರಿತು ನಮ್ಮ ಗುರುಗಳಾದ ಶಿವಪ್ಪ ಮಾಸ್ತರ್ ಅವರ ಮಗ ಡಾ. ಎಚ್. ಎಸ್.ಮೋಹನ್ ರಚಿಸಿರುವ ಪುಸ್ತಕದಲ್ಲಿ ಬಹಳಷ್ಟು ಇತಿಹಾಸ ಹೊಂದಿರುವ ರೇಣುಕಾದೇವಿ ಚರಿತ್ರೆ ಬಗ್ಗೆ ಮಹತ್ವವಿದೆ.
– ಶ್ರೀದೇವಿ ಸ್ಪೂರ್ತಿ ಸ್ನೇಹಿತರ ಬಳಗದ ಕಾರ್ಯದರ್ಶಿ
ಶಾಲೆಯ ಶಿಕ್ಷಕಿ ಸಾವಿತ್ರಮ್ಮ ಮಾತನಾಡಿ 1992 ಮತ್ತು 1993 ನೇ ಸಾಲಿನ ವಿದ್ಯಾರ್ಥಿಗಳಾದ ಸ್ಪೂರ್ತಿ ಸ್ನೇಹಿತರ ಬಳಗದವರು ಹಲವಾರು ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಶಿವಪ್ಪ ಮಾಸ್ತರ್ ಸವಿ ನೆನಪಿಗಾಗಿ ಅವರ ಮಗ ರಚಿಸಿರುವ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಿದ್ದಾರೆ ಎಂದರು.
ಸ್ಪೂರ್ತಿ ಬಳಗದ ಸ್ನೇಹಿತರಾದ ಕುಮಾರ್, ಪ್ರಶಾಂತ್ ನಾಯ್ಕ, ಗೋಪಿ, ಶರದ್ ನಾಯಕ್, ಶ್ರೀದೇವಿ, ಶಾಲೆಯ ಶಿಕ್ಷಕರದ ಮಮತಾ, ನಳಿನಾಕ್ಷಿ, ಫಾತಿಮಾ ಸೇರಿದಂತೆ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post