No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Saturday, May 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಅರಣ್ಯ ವರ್ಕಿಂಗ್ ಪ್ಲಾನ್ ತಯಾರಿ ಮಾನದಂಡದಲ್ಲಿ ಬದಲಾವಣೆ ಅಗತ್ಯ: ಅನಂತ ಹೆಗಡೆ ಅಶೀಸರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 22, 2023
in ಸೊರಬ
0
ಅರಣ್ಯ ವರ್ಕಿಂಗ್ ಪ್ಲಾನ್ ತಯಾರಿ ಮಾನದಂಡದಲ್ಲಿ ಬದಲಾವಣೆ ಅಗತ್ಯ: ಅನಂತ ಹೆಗಡೆ ಅಶೀಸರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಸೊರಬ  |

ಅರಣ್ಯ ಪರಿಸರ ಮಂತ್ರಾಲಯ, ಭಾರತ ಸರ್ಕಾರ, ಅರಣ್ಯ ಇಲಾಖೆ ಕರ್ನಾಟಕ, ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಜಂಟಿ ಆಶ್ರಯದಲ್ಲಿ ವರ್ಕಿಂಗ್ ಪ್ಲಾನ್- 2023ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.

ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭಾಗವಹಿಸಿ, ಪಶ್ಚಿಮ ಘಟ್ಟದ ಸಂರಕ್ಷಣೆ ಹಿನ್ನೆಲೆಯಲ್ಲಿ ವರ್ಕಿಂಗ್ ಪ್ಲಾನ್‌ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ವಿವರ ಮಂಡನೆ ಮಾಡಿದರು.
ವಿಕೇಂದ್ರೀಕೃತ ಕ್ರಿಯಾ ಯೋಜನೆ: ಸ್ಥಳೀಯ ಮಟ್ಟದಲ್ಲಿ ಅರಣ್ಯ ವಿಭಾಗ ಮಟ್ಟದಲ್ಲಿ ಅರಣ್ಯ ನಿರ್ವಹಣೆಗೆ 10 ವರ್ಷದ ಕ್ರಿಯಾ ಯೋಜನೆ ರೂಪಿಸುವ ಪದ್ಧತಿ ನಮ್ಮ ದೇಶದ ಅರಣ್ಯ ಇಲಾಖೆಯ ಅನನ್ಯ ಪರಂಪರೆ, ವಿಕೇಂದ್ರಕೃತವಾಗಿ ಸಿದ್ಧವಾಗುವ ವರ್ಕಿಂಗ್ ಪ್ಲಾನ್ ತಾತ್ವಿಕವಾಗಿ ಜಗತ್ತಿಗೇ ಮಾದರಿ ಆಗಿದೆ ಎಂದು ಅಶೀಸರ ಅವರು ಶ್ಲಾಘನೆ ಮಾಡಿದರು. ಆದರೆ ಅರಣ್ಯ ವರ್ಕಿಂಗ್ ಪ್ಲಾನ್ ಅದೇ ಹಳೆಯ ವಿಧಾನ, ಸ್ವರೂಪ, ಮಾದರಿಗಳನ್ನು ಮುಂದುವರೆಸಬೇಕೆ ಎಂಬುದು ಚರ್ಚಿಸಬೇಕಾದ ಸಂಗತಿ. 75 ವರ್ಷಗಳ ಹಿಂದಿನ ಅರಣ್ಯ ಮತ್ತು ನಿಸರ್ಗ ಸಮೃದ್ಧಿ ಈಗಿಲ್ಲ. ಹವಾಮಾನ ಬದಲಾವಣೆ, ಬರಗಾಲ, ಅರಣ್ಯನಾಶ, ಉಷ್ಣತಾ ತಾಪಮಾನ, ಭೂಕುಸಿತ ಮುತಾದ ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ವರ್ಕಿಂಗ್ ಪ್ಲಾನ್ ತಯಾರಿ ಮಾನದಂಡಗಳು ಬದಲಾಗಬೇಕು ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರತಿಪಾದಿಸಿದರು.

ಸುಧಾರಣೆಗೆ ಹಲವು ವರ್ಷಗಳಿಂದ ಒತ್ತಾಯ: ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರದ ಭೂಕುಸಿತ ಅಧ್ಯಯನ ಸಮಿತಿ ವಿವಿಧ ತಜ್ಞರು, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ವರದಿಗಳೂ ಅರಣ್ಯ ವರ್ಕಿಂಗ್ ಪ್ಲಾನ್‌ಗೆ ಹಲವು ಸುಧಾರಣೆಗಳನ್ನು ಸೂಚಿಸಿವೆ ಎಂದು ರಾಷ್ಟ್ರೀಯ ಕಾರ್ಯಾಗಾರದ ಗಮನ ಸೆಳೆದರು.
ಹಲವು ಕಾನೂನುಗಳು ಸಮಗ್ರ ದೃಷ್ಠಿಕೋನ ಬೇಕು: ಅರಣ್ಯ, ಜೀವವೈವಿಧ್ಯ ಕಾಯಿದೆ, ಪರಿಸರ ಕಾಯಿದೆ, ಸುಪ್ರೀಂ ಕೋರ್ಟ ಗೋದಾವರಂ ಪ್ರಕರಣ, ಸಿಇಸಿ, ಹೀಗೆ ಹಲವು ಕಾನೂನುಗಳ ಸೇರ್ಪಡೆ, ಆದೇಶಗಳ ಹಿನ್ನೆಲೆಯಲ್ಲಿಯೂ ವರ್ಕಿಂಗ್ ಪ್ಲಾನ್‌ನ ಮಾನದಂಡಗಳು ಬದಲಾಗಬೇಕು. ಸಮಗ್ರ ದೃಷ್ಟಿಕೋನ ಹೊಂದಬೇಕು ಎಂದು ಶ್ರೀ ಅಶೀಸರ ಒತ್ತಾಯ ಮಾಡಿದ್ದಾರೆ.

ವರ್ಕಿಂಗ್ ಪ್ಲಾನ್ ಕನ್ನಡದಲ್ಲಿ: ಕರ್ನಾಟಕದಲ್ಲಿ ವರ್ಕಿಂಗ್ ಪ್ಲಾನ್ ಕನ್ನಡ ಭಾಷೆಯಲ್ಲಿ ಇರಬೇಕು ಎಂಬ ಅಂಶವನ್ನು ಹತ್ತು ವರ್ಷಗಳಿಂದ ಹೇಳುತ್ತಿದ್ದೇವೆ. ಸ್ಥಳೀಯ ಜನರು, ರೈತರು, ಗ್ರಾಮ ಅರಣ್ಯ ಸಮಿತಿ, ಪಂಚಾಯತ, ಜೀವವೈವಿಧ್ಯ ಸಮಿತಿ, ವನವಾಸಿಗಳಿಗೆ ಓದಲು, ಅರ್ಥೈಸಲು ಸಾಧ್ಯವಾಗಬೇಕು. ಗುಜರಾತಿ ಭಾಷೆಯಲ್ಲಿ ವರ್ಕಿಂಗ್ ಪ್ಲಾನ್ ತಯಾರಾಗುತ್ತಿದೆ ಎಂದು ಅವರು ಉದಾಹರಣೆ ನೀಡಿದರು.
ಘಟ್ಟದಲ್ಲಿ ಮರ ಕಡಿತ ನಿಲ್ಲಿಸಿ: ಭೂಕುಸಿತ ಕಳೆದ 7-8 ವರ್ಷಗಳಿಂದ ಸಾಮಾನ್ಯವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ 23 ತಾಲೂಕುಗಳನ್ನು ಸಂಭಾವ್ಯ ಭೂಕುಸಿತ ತಾಲೂಕುಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಘಟ್ಟ, ಗುಡ್ಡಗಳಲ್ಲಿ ನೆಡುತೋಪು ಬೆಳೆಸುವ, ಕಟಾವು ಮಾಡುವ ಪದ್ಧತಿ ಕೈಬಿಡಬೇಕು. ನೆರಿಯ, ಸುಬ್ರಮಣ್ಯ, ಗೇರುಸೊಪ್ಪ, ಜೋಯಿಡಾ, ತಲಕಾವೇರಿ, ಆಗುಂಬೆಗಳಲ್ಲಿ ನೂರಾರು ಎಕರೆ ನೆಡುತೋಪು ಕಟಾವು ಮಾಡಿದರೆ ಭೂಕುಸಿತಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಎಂದು ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರಾಗಿದ್ದ ಅಶೀಸರ ಅಭಿಪ್ರಾಯ ನೀಡಿದರು.

ಕೇಂದ್ರ ಸರ್ಕಾರದ ಅರಣ್ಯ-ಪರಿಸರ ಮಂತ್ರಾಲಯದ ಹಿರಿಯ ಅಧಿಕಾರಿಗಳಾದ ಡಾ.ಸುಬ್ರಹ್ಮಣ್ಯ, ಡಾ.ಎಂ.ಪಿ.ಸಿ0ಗ್, ಡಾ.ಮಹೇಶ್ ಶಂಭು, ಕರ್ನಾಟಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಾದ ಸುಭಾಷ್ ಮಾಳ್ಕೇಡ್, ಬಿಸ್ವಜಿತ್ ಮಿಶ್ರಾ, ಸೀಮಾ ಗರ್ಗ, ತಜ್ಞರಾದ ಡಾ.ವಾಮನ ಆಚಾರ್ಯ, ಪ್ರೋ. ಸುಹಾಸ್ ಮುಂತಾದವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಗುಜರಾತ, ಹರಿಯಾಣ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವರದಿ: ಮಧುರಾಮ್, ಸೊರಬ

http://kalpa.news/wp-content/uploads/2023/05/VID-20230516-WA0005.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: KannadaNewsKannadaNewsLiveKannadaNewsOnlineKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaShivamoggaNewsSorabaಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸೊರಬ
Share199Tweet123Send
Previous Post

ಖಲಿಸ್ತಾನಿಯರಿಂದ ಕೆನಡಾದಲ್ಲಿ ಹಿಂದೂಗಳಿಗೆ ಅಪಾಯವಿದೆಯೇ? ಅಲ್ಲಿನ ಎಂಪಿ ಚಂದ್ರ ಆರ್ಯ ಹೇಳಿದ್ದೇನು?

Next Post

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿ: ಹೆಚ್ಡಿಕೆ ಆಗ್ರಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕುಮಾರಸ್ವಾಮಿ ರಾಷ್ಟ್ರಪತಿಯಾಗುತ್ತಾರೆ ಎಂದಿದ್ದು ಯಾರು?

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿ: ಹೆಚ್ಡಿಕೆ ಆಗ್ರಹ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
SWR to run special trains for Good Friday, Easter rush

ಬೀರೂರು – ತಾಳಗುಪ್ಪ ರೈಲ್ವೆ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್ | ಇಲ್ಲಿದೆ ಡೀಟೇಲ್ಸ್

May 23, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

ಐಎಎಸ್ ಅಧಿಕಾರಿಗಳ ಮಕ್ಕಳಿಗೆ ಏಕೆ ಮೀಸಲು ಕೊಡಬೇಕು: ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ

May 23, 2026
ಹುಲಿ ದಾಳಿಗೆ ನಾಲ್ವರು ಮಹಿಳೆಯರು ಬಲಿ

ಹುಲಿ ದಾಳಿಗೆ ನಾಲ್ವರು ಮಹಿಳೆಯರು ಬಲಿ

May 23, 2026
ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

May 22, 2026
ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

May 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL