ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರತಿಯೊಬ್ಬ ಮಗುವಿಗೂ ತನ್ನ ರಕ್ತದ ಗುಂಪು ತಿಳಿದಿರಬೇಕು. ಇಂದಿನ ಶೈಕ್ಷಣಿಕ ಅಂಕಿಅಂಶಗಳಿಗೆ ಪೂರಕವಾಗಿಯೂ ರಕ್ತದ ಗುಂಪು ತಿಳಿಯಬೇಕಾಗಿರುವುದು ಅವಶ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ತದ ಗುಂಪು ಪರೀಕ್ಷೆ ನಡೆಸಲಾಗಿದೆ ಎಂದು ಮುಖ್ಯ ಶಿಕ್ಷಕ ಮಂಜಪ್ಪ ಎಸ್. ತಿಳಿಸಿದರು.
ತಾಲ್ಲೂಕು ಮುಟಗುಪ್ಪೆ ಸಹಿಪ್ರಾ ಶಾಲೆ ಮಕ್ಕಳ ರಕ್ತ ಗುಂಪು ಪರೀಕ್ಷೆ ಪ್ರಾಯೋಜಕತ್ವ ವಹಿಸಿ ಅವರು ಮಾತನಾಡಿ, ಹೊಸಬಾಳೆ ಕ್ಲಸ್ಟರ್ ಸಿಆರ್ಪಿ ಗುರುರಾಜ್, ಇಂತಹ ಅಗತ್ಯ ಕಾರ್ಯಕ್ರಮ ಪ್ರತಿ ಶಾಲೆಯಲ್ಲೂ ನಡೆಯಬೇಕು. ಮಕ್ಕಳಿಗೆ ರಕ್ತದಗುಂಪು, ರಕ್ತ ದಾನದ ಮೌಲ್ಯವನ್ನು ತಿಳಿಸಬೇಕು ಎಂದರು.
ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ಮಂಜುನಾಥ ರಾವ್ ಆರೋಗ್ಯ ರಕ್ಷಣೆಯಲ್ಲಿ ಪ್ರತಿಯೊಬ್ಬ ಮಗು, ಪೋಷಕರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
Also read: ಕೊರಗಜ್ಜನ ಕೋಲಕ್ಕೆ ತೊಂದರೆ ಹಿನ್ನೆಲೆ: ರೋಡ್ ಶೋ ರದ್ದು ಮಾಡಿದ ಅಮಿತ್ ಶಾ
ಶಾಲಾ ಸಮಿತಿ ಅಧ್ಯಕ್ಷೆ ಜಯಂತಿ ಫಕೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಲ್ ಆರ್ ಕ್ಲಿನಿಕ್ ನ ಪುನೀತ್, ಶಿಕ್ಷಕ ಎನ್.ರಮೇಶ್, ಅರುಣಕುಮಾರ್, ಪೋಷಕರು, ಶಾಲಾ ಸಮಿತಿಯವರು, ಸಿಬ್ಬಂದಿ ಇದ್ದರು.
ಸೃಷ್ಟಿ, ಮೇಘಶ್ರಿ ತಂಡ ಪ್ರಾರ್ಥಿಸಿ, ಸ್ಪೂರ್ತಿ ನಿರೂಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post