ಕಲ್ಪ ಮೀಡಿಯಾ ಹೌಸ್ | ಸೊರಬ |
ಚಂದ್ರಗುತ್ತಿ ಪುರದೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಸೋಮವಾರ ಶ್ರೀ ನಾಗಚೌಡೇಶ್ವರಿ ದೇವಿ ನೂತನ ಶಿಲಾಮೂರ್ತಿಯ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಸುಕ್ಷೇತ್ರ ಸಾತೇನಹಳ್ಳಿಯ ಶ್ರೀ ವೃಷಭರೂಪಿ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಗಳಿಗೆ ಗ್ರಾಮಸ್ಥರು ಭಕ್ತಿ ಪೂರ್ವಕವಾಗಿ ಕಾಲುಪೂಜೆ ಸಲ್ಲಿಸಿದರು. ಸ್ವಾಮಿಗಳು ಗ್ರಾಮದ ಸರ್ವರ ಮನೆಗೆ ತೆರಳಿ ಕಾಲುಪೂಜೆ-ಪುನಸ್ಕಾರ ಸ್ವೀಕರಿಸಿದರು.
ಶ್ರೀ ನಾಗಚೌಡೇಶ್ವರಿ ದೇವಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಆಲಯ ಪ್ರವೇಶ, ಪೀಠ ಶುದ್ಧಿ, ಸರ್ವ ಕಲಶಾರಾಧನೆ, ವಾಸ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ನಡೆದವು.
ಸೋಮವಾರ ಬೆಳಗ್ಗೆ ಮಂತ್ರೋಪದೇಶ, ನೇತ್ರೋನ್ಮಿಲನ, ಪ್ರತಿಷ್ಠಾಂಗ ಹೋಮ, ಪೂರ್ಣಾಹುತಿ, ಕಳಸಾರೋಹಣ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆಡಸಲಾಯಿತು.
ಬಸವೇಶ್ವರ ಗ್ರಾಮ ಸಮಿತಿ ಅಧ್ಯಕ್ಷ ಡಿ.ಪಿ ನಾರಾಯಣಪ್ಪ, ಉಪಾಧ್ಯಕ್ಷ ಈರಪ್ಪಯ್ಯ, ಪ್ರಮುಖರಾದ ಸುಧಾಕರ ಗೌಡ, ಓ.ಬಿ. ಸುರೇಶ್, ಜಿ. ಯಾಧವ, ಸುರೇಶ್, ಮುರುಳೀಧರ, ನಜೀರ್ ಆಹ್ಮದ್, ಪರಶುರಾಮ್ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ಮುರಳೀಧರ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post