ಕಲ್ಪ ಮೀಡಿಯಾ ಹೌಸ್ | ಸೊರಬ |
ಮಗುವಿಗೆ ತಾಯಿಯು ಒಂಬತ್ತು ತಿಂಗಳು ಹಾಲುಣಿಸಿದರೆ, ಮನುಷ್ಯನಿಗೆ ಗೋ ತಾಯಿ ಬದುಕಿನ ಜೀವನಮಾನ ಪೂರ್ತಿ ಹಾಲುಣಿಸುತ್ತಾಳೆ. ಈ ನಿಟ್ಟಿನಲ್ಲಿ ಗೋ ಮಾತೆ ಮಹಾತಾಯಿ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 19ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Also read: ರಾಮಚಂದ್ರಾಪುರ ಮಠ-ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು: ರಾಘವೇಶ್ವರ ಶ್ರೀ
ಸನ್ಮಾನ ಸ್ವೀಕರಿಸಿದ ಕರಸೇವಕ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಹೋರಾಟದ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವುದು ಕೋಟ್ಯಂತರ ಭಾರತೀಯರ ಕನಸು ನನಸಾದಂತಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕರ ತ್ಯಾಗ ಮತ್ತು ಬಲಿದಾನವಿದೆ. ಗಣೇಶೋತ್ಸವದ ಸಂದರ್ಭದಲ್ಲಿ ತಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಗಣೇಶ ಮೂರ್ತಿಯನ್ನು ವಿಶೇಷವಾಗಿ ಪಲ್ಲಕ್ಕಿ ಉತ್ಸವದ ಮೂಲಕ ಪುರ ಮೆರವಣಿಗೆ ನಡೆಸಿ, ಪವಿತ್ರ ದಂಡಾವತಿ ನದಿಯಲ್ಲಿ ನಿಮಜ್ಜನ ನಡೆಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಾವೆ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ, ಖಜಾಂಚಿ ರಾಜೇಂದ್ರ ಜೈನ್, ಸಹ ಕಾರ್ಯದರ್ಶಿ ಅಭಿ ಹೊಯ್ಸಳ, ಬಜರಂಗದಳ ಮಾಜಿ ತಾಲೂಕು ಸಂಚಾಲಕ ಚಿನ್ನಿ ಪ್ರಕಾಶ್, ಪ್ರಮುಖರಾದ ದೇವರಾಜ ಹಳೇಸೊರಬ, ರಾಜಣ್ಣ ನಡಹಳ್ಳಿ, ಅನಿಲ್ ಮಾಳವಾದೆ, ಮಂಜುನಾಥ ಗುತ್ತಿ, ಅಭಿಷೇಕ್ ಗೌಡ, ಚವನ್ ರಾಜ್ ಗೌಡ, ನಮಾಮಿರಾಜ್ ಇಂದ್ರ ಜೈನ್, ನಾಗಪ್ಪ ಎಲೆಕ್ಟ್ರಿಕ್, ನಿತಿನ್ ಸ್ವಾಮಿ, ಕೌಶಿಕ್ ಗೌಡ, ಸೇರಿದಂತೆ ಇತರರಿದ್ದರು. ದತ್ತಾತ್ರೇಯ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post