ಕಲ್ಪ ಮೀಡಿಯಾ ಹೌಸ್ | ಸೊರಬ |
ಕವಿ ಮನಸ್ಸುಗಳಿಗೆ ಕಾವ್ಯ ರಚಿಸಲು, ಪ್ರಸ್ತುತ ಪಡಿಸಲು ದಸರಾ ಉತ್ಸವದ ವೇದಿಕೆ ಅವಕಾಶ ನೀಡಿರುವುದು ಸಂತಸದ ಸಂಗತಿ ಎಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ನಾಯಕ್ ಕುಂಬ್ರಿಗದ್ದೆ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಸರಾ ಉತ್ಸವ ಸಮಿತಿ ಇವರ ಸಹಯೋಗದಲ್ಲಿ ಸುರಭಿ ಸಾಂಸ್ಕೃತಿಕ ವೇದಿಕೆ, ಶ್ರೀ ರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದಸರಾ #Dasara ಧಾರ್ಮಿಕ ಆಚರಣೆಯನ್ನಷ್ಟೆ ಅಲ್ಲ ಇಲ್ಲಿ ಹಲವು ಮಜಲುಗಳ ಪ್ರತಿಭೆಯ ಅನಾವರಣಕ್ಕೆ ಅವಕಾಶವಿದೆ. ಸಾಮಾಜಿಕ, ಸಾಂಸ್ಕೃತಿಕ ಅಭಿವ್ಯಕ್ತತೆಯ ವೇದಿಕೆಯಿದು ಎಂದು ದಸರಾ ಉತ್ಸವಕ್ಕೆ ಶುಭಕೋರಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಎನ್ ಪ್ರಾಸ್ತಾವಿಕ ಮಾತನಾಡಿದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪರಶುರಾಮಪ್ಪ ಸಣ್ಣಬೈಲ್ ಬಹುಮಾನ ವಿತರಿಸಿದರು. ನಿವೃತ್ತ ಕನ್ನಡ ಭಾಷಾ ಶಿಕ್ಷಕ ವಿ.ಬಿ. ಜಾವೂರ್ ಹಾಗೂ ಸ.ಪ್ರೌ ಶಾಲೆ ಅಂಕರವಳ್ಳಿ ಕನ್ನಡ ಭಾಷಾ ಶಿಕ್ಷಕ ರಾಜಶೇಖರ್ ಪಿ. ಜಿ. ಸಂಘನ್ಮೂಲ ವ್ಯಕ್ತಿಗಳಾಗಿ ಕವನಗಳ ವಿಶ್ಲೇಷಣೆ ಮಾಡಿದರು.
ಕವಿಗೋಷ್ಠಿಯಲ್ಲಿ ಇಪ್ಪತ್ತೊಂದು ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಪ್ರಥಮ ಲಲಿತಾ ಎನ್, ದ್ವಿತೀಯ ಶಿಲ್ಪಾ ಹೆಗಡೆ ಹಾಗೂ ತೃತೀಯ ಬಹುಮಾನವನ್ನು ಮೋಟಪ್ಪ ಬಿದರಗೇರಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಎಂಬಿಬಿಎಸ್ ವೈದ್ಯಕೀಯ ಪ್ರವೇಶ ಪಡೆದ ಕಸಾಪ ಪದಾಧಿಕಾರಿ ರಾಜೇಂದ್ರ ಜೈನ್ ಪುತ್ರ ಉದ್ಯೋತ್ ರಾಜ್ ಇಂದ್ರ ಅವರನ್ನು ಅಭಿನಂದಿಸಲಾಯಿತು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ.ಎಂ ಕೆ ಭಟ್, ಮಹಿಳಾ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಸುಜಾತಾ ಜೋತಾಡಿ, ವೀಣಾ ಅಶೋಕ್ ಟೇಮ್ಕರ್, ತಾಲ್ಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಗಾಯಕ ಹೆಚ್ ಗುರುಮೂರ್ತಿ, ರಮೇಶ್ ಎನ್ ಮಂಚಿ, ರೇವಣಪ್ಪ ಬಿದರಗೇರಿ, ಲಿಂಗರಾಜ ಕೆ ಗೌಡ್ರು ಕೋಣನಮನೆ, ಮೋಹನ್ ಸುರಭಿ, ಉದ್ಯಮಿ ಎಂ ಎನ್ ಗುರುಮೂರ್ತಿ, ರಾಜೇಂದ್ರ ಜೈನ್, ಮಾಲತೇಶ ಕೆ ಇ ಶಿಕ್ಷಕರು, ಮಹೇಶ್ ಖಾರ್ವಿ, ಶ್ರೀಮತಿ ಶೈಲಾ ಹೆಬ್ಬಾರ್, ಕಸಾಪ ಸದಸ್ಯರು, ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post