ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮಾಂತರ ಪ್ರದೇಶದಲ್ಲಿ ಸಂಘಟನೆ ಮತ್ತು ಸುಸ್ಥಿರ ಬದುಕಿಗೆ ಪೂರ್‍ವಿಜರು ಕಂಡುಕೊಂಡ ವಿಧಾನವೆ ಹಬ್ಬಾಚರಣೆಗಳು. ವಿವಿಧತೆಯಲ್ಲಿ ಏಕತೆಯನ್ನು ಇಂತಹ ಆಚರಣೆಗಳು ಕಟ್ಟಿಕೊಡುತ್ತವೆ ಎಂದು ವೇ.ವಿ. ನಾರಾಯಣಭಟ್ ಹೇಳಿದರು.
ತಾಲ್ಲೂಕು ಯಲಸಿ ಗ್ರಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಕಲ್ಪ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಬದ್ಧತೆ, ಕಾರ್ಯ ನಿಷ್ಠೆ, ಕರ್ತವ್ಯ ಪಾಲನೆ ಮೂಲಕ ಎಲ್ಲರೊಳಗೊಂದಾಗಿ ಹಸನಾದ ಬದುಕು ನಡೆಸಲು ಸಾಧ್ಯವಿದೆ. ಸ್ವಾರ್ಥ, ಈರ್ಷ್ಯೆ ಬದಿಗೊತ್ತಿ ಹತ್ತು ಕೈಗಳು ಜೊಡಿಸಿದರೆ ದೇಶದ ಅಭಿವೃದ್ಧಿಯಷ್ಟೆ ಅಲ್ಲ ವೈಯುಕ್ತಿಕ ಅಭಿವೃದ್ಧಿಯೂ ಸಾಧ್ಯ. ಈ ವೇಳೆ ಒಳಿತಿನ ಸಂಕಲ್ಪದ ಮೂಲಕ ಸಾಮರಸ್ಯ ಕಾಪಾಡಿಕೊಳ್ಳಲು ಗ್ರಾಮಸ್ಥರು ಮುಂದಾಗಬೇಕು ಎಂದು ಕರೆ ನೀಡಿದರು.
ಮಾರಿಜಾತ್ರೆಗೆ ಅತ್ಯಂತ ಅಗತ್ಯವಿರುವ ಅಸಾದಿ ಮೂಗೂರು ರಾಜು ಮತ್ತು ಕೆರೆಯಮ್ಮ ಈ ವೇಳೆ ಹರಕೆಯಿಟ್ಟು ಗ್ರಾಮದ ಮರ್ಯಾದೆ ಸ್ವೀಕರಿಸಿದರು.
ಜಾತ್ರಾ ಸಮಿತಿ ಅಧ್ಯಕ್ಷ ಪ್ರಭಾಕರರಾವ್ ಬಿಚ್ಚುಗತ್ತಿ, ಉಪಾಧ್ಯಕ್ಷ ಸೀತೆ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿ.ಜಾನಕಪ್ಪ, ಕರಬಸ್ನ ಕನ್ನಪ್ಪ, ಖಜಾಂಚಿ ಲೋಕೇಶ್ ಬಡಕನ, ಜಾತ್ರಾ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಗ್ರಾಮ ಸಮಿತಿ ಅಧ್ಯಕ್ಷ ವಿ.ಕೆ.ವೆಂಕಪ್ಪ, ಖಜಾಂಚಿ ಶಿವು ಬಡಕನ, ಮುಜರಾಯಿ ಸಮಿತಿ ಅಧ್ಯಕ್ಷ ಕೆ.ಎಲ್.ಕುಮಾರಸ್ವಾಮಿ, ಕಾರ್ಯದರ್ಶಿ ಪ್ರದೀಪ್ ಭಟ್, ಗ್ರಾಮದ ಹಿರಿಯ ವಿ.ಕೊಲ್ಲಪ್ಪ, ವಿ.ಕೆರೆಯಪ್ಪ, ಅರ್ಚಕ ಅನಂತಶೇಟ್, ಮಡಿವಾಳ, ಮುಸ್ಲಿಂ ಸಮಾಜದ ಪ್ರಮುಖರು ಹಾಗೂ ಸಮಸ್ತ ಯಲಸಿ ಗ್ರಾಮಸ್ಥರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post