ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಾಪಂಚಿಕ ಅರಿವಿಲ್ಲದೆ ಜನ್ಮತಳೆದ ಮನುಕುಲಕ್ಕೆ ಗುರು ಮತ್ತು ಶಿಕ್ಷಣವೂ ಕೂಡ ಮಾನವೀಕ ಗುಣಗಳನ್ನು ಉದ್ಧೀಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ, ನಮ್ಮ ಶಿಕ್ಷಣ ಕೇಂದ್ರವೂ ಸಹಾ ಪವಿತ್ರ ದೇಗುಲ ಎಂದು ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.
ಪಟ್ಟಣದ ಪಿ.ಡಬ್ಲ್ಯೂ.ಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಅಂದಗೊಳಿಸುವ ಕಾರ್ಯ ನಿರ್ವಹಿಸಿ ಮಾತನಾಡಿದರು.
ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಶಾಲಾ ಆವರಣ ಮತ್ತು ಪರಿಕರಗಳನ್ನು ಸ್ವಚ್ಛಗೊಳಿಸುವುದು ಕೇವಲ ಶಿಕ್ಷಕರ ಕಾರ್ಯವಲ್ಲ. ನಮಗೆ ಶಿಕ್ಷಣ ನೀಡಿ ಪ್ರಜ್ಞಾವಂತರಾಗಿಸಿರುವ ಶಾಲೆಗಳ ಒಂದಂಶದ ಋಣವನ್ನಾದರೂ ತೀರಿಸುತ್ತೇವೆ ಎಂಬ ಮನವಿದ್ದಲ್ಲಿ ನಾವೆಲ್ಲರೂ ಶಾಲಾ ಸ್ವಚ್ಛತೆಯ ಕಾಳಜಿಯ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಸಹಕರಿಸಬೇಕು ಎಂದರು.
ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕರ ಜೊತೆಗೆ ಅನಿಲ್ ಮಾಳವಾದೆ, ವಿನೋದ್ ವಾಲ್ಮೀಕಿ, ರಂಗನಾಥ ಮೊಗವೀರ, ಲೋಕೇಶ್, ಮಂಜು, ಕೃಷ್ಣ ಮೊಗವೀರ, ರಾಘವೇಂದ್ರ ಎಸ್, ಇಂಧೂದರ ಮೊದಲಾದವರು ಈ ಶ್ರಮಾದಾನದಲ್ಲಿ ಪಾಲ್ಗೊಂಡಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಎಸ್. ಕೃಷ್ಣಾನಂದ, ಶಿಕ್ಷಕಿ ಸುಕನ್ಯ, ಶಾಲಾ ಎಸ್ ಡಿ.ಎಮ್ ಸಿ ಅಧ್ಯಕ್ಷರಾದ ಏಕಾಂತ್ ಕನ್ನಡಿಗ, ಸದಸ್ಯರಾದ ಶೇಷಗಿರಿ, ರಾಜಭಕ್ಷ್, ಪೋಷಕರಾದ ಹರೀಶ್, ಬಿಸಿಯೂಟದ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post