ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರ ಮಹತ್ವ ಅರಿತು ಮುಂಪೀಳಿಗೆಗೆ ಕೊಡುಗೆ ನೀಡುವ ಚರ್ಚೆ, ಭಾಷಣ ಕೇವಲ ಭಾಷಣಕ್ಕೆ ಸೀಮಿತವಾಗದೆ ನಿಮ್ಮೆಲ್ಲರ ನಿತ್ಯ ಕಾಯಕದ ಭಾಗವಾಗಬೇಕು. ಆಗ ಮಾತ್ರ ನಾವಾಡುವ ಮಾತು ಮತ್ತು ಕೃತಿಗೆ ಮೌಲ್ಯವಿರುತ್ತದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರತಿಭಾ ಇಸ್ಲೂರು ಕಿವಿ ಮಾತನ್ನಾಡಿದರು.
ಶಿರಾಳಕೊಪ್ಪದ ಕದಂಬ ಕಾಲೇಜಿನಲ್ಲಿ ಸೊರಬ ಕೆರೆಕೊಪ್ಪದ ಕಾಂತಾರಯಜ್ಞ, ಸಿದ್ದಾಪುರ ವಡ್ಡಿನಗದ್ದೆ ಭಾರತಿಸಂಪದ, ಸೊರಬ ಪರಿಸರ ಜಾಗೃತಿ ಟ್ರಸ್ಟ್, ದೊಡ್ಡನೆ ರಾಮಪ್ಪ ಶ್ರೀಧರ ಸೇವಾ ಟ್ರಸ್ಟ್, ಕೋಟೇಶ್ವರ ಶ್ರೀ ವಿನಾಯಕ ಮೊಟಾರ್ಸ್, ಸೊರಬ ತಲಕಾಲಕೊಪ್ಪ ಕಲಾದ್ವಯ ಬೀ ನರ್ಸರಿ, ಶಿರಾಳಕೊಪ್ಪದ ಲಯನ್ಸ್ ಕ್ಲಬ್, ಕದಂಬ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ ಜಿಲ್ಲಾಮಟ್ಟದ ಭಾಷಣ ಮತ್ತು ಚರ್ಚಾಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಯುವರಾಜ ಬಿ.ಹೆಚ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಧರಭಟ್ಟ್ ಕಾಂತಾರ ಯಜ್ಞ, ಎಂ.ಆರ್. ಪಾಟೀಲ್ ವಕೀಲರು, ವಿಘ್ನೇಶ್ ಟಿ.ಕೆ. ತಲಕಾಲಕೊಪ್ಪ, ವಸುಮತಿ ಎಂ.ಎಸ್. ಕದಂಬ ಕಾಲೇಜು ಉಪನ್ಯಾಸಕಿ, ಪ್ರಿಯದರ್ಶಿನಿ ಸರ್ಕಾರಿ ಕಿರಿಯ ಕಾಲೇಜು ಉಪನ್ಯಾಸಕಿ, ದೀಕ್ಷಿತ್ ತುರುವೇಕೆರೆ, ಮಂಜುನಾಥ ಹೆಗಡೆ ಕೆರೆಕೊಪ್ಪ ಪಾಲ್ಗೊಂಡರು.
Also read: ಹಿರಿಯ ನಟ ಸರಿಗಮ ವಿಜಯ್ ವಿಧಿವಶ | ಅಂತಿಮ ದರ್ಶನ ಎಲ್ಲಿ?
ಪರಿಸರ ಸಂರಕ್ಷಣೆಗೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳು ಸಮರ್ಥವಾಗಿವೆ, ಸಮರ್ಥವಾಗಿಲ್ಲ ಪರ ವಿರೋಧದ ಚರ್ಚಾಸ್ಪರ್ಧೆ, ಜಾಗತಿಕ ತಾಪಮಾನ ಜಾಗತಿಕ ಸಮಗ್ರ ವಿಕಾಸಕ್ಕೆ ಅನಾನುಕೂಲ ಎಂಬ ವಿಷಯದ ಭಾಷಣ ಸ್ಪರ್ಧೆ ನಡೆಯಿತು. ಜಿಲ್ಲೆಯ ಅನೇಕ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ವಿಷಯ ಮಂಡಿಸಿದರು.
ತೀರ್ಪುಗಾರರಾಗಿ ಶ್ರೀಪಾದ ಬಿಚ್ಚುಗತ್ತಿ ಸಂಶೋಧಕರು, ಎಂ. ನಾಗಪ್ಪ ಹಿರಿಯ ವಕೀಲರು, ಅಶೋಕ ವಿ. ನಿವೃತ್ತ ಶಿಕ್ಷಕರು ಪಾಲ್ಗೊಂಡರು.
ಚರ್ಚಾಸ್ಪರ್ಧೆಯಲ್ಲಿ ಶಿವಮೊಗ್ಗ ಕ್ರಷಿ ಮಹಾವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂ.ಡಿ.ವೈಷ್ಣವಿ, ಶಿರಾಳಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೆಜ್ ಬೇಬಿ, ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಜಿ. ಅಮೃತ ಕ್ರಮವಾಗಿ ವಿಜೇತರಾದರು.
ಭಾಷಣ ಸ್ಪರ್ಧೆಯಲ್ಲಿ ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿ ಜೆ. ಹೊಯ್ಸಳ, ವಿದ್ಯಾರ್ಥಿನಿ ಆರ್. ಸಹನ, ಸಾಗರ ಗಂಗೋತ್ರಿ ಕಾನೂನು ಕಾಲೇಜಿನ ಅಕ್ಷತಾ ವಾಳದ್ ಎನ್ ಕ್ರಮವಾಗಿ ವಿಜೇತರಾದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post