ಕಲ್ಪ ಮೀಡಿಯಾ ಹೌಸ್ | ಸೊರಬ |
ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿನ ಪವಿತ್ರ ಗ್ರಂಥವಾಗಿದ್ದು, ಸಂವಿಧಾನ ರಚನೆಗೊಂಡು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ-ಸಡಗರದಿಂದ ಗಣರಾಜ್ಯೋತ್ಸವೆಂದು ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಹುಸೇನ್ ಸರಕವಸ್ ಹೇಳಿದರು.
ಶುಕ್ರವಾರ ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸೊರಬದಲ್ಲಿ ರಾಷ್ಟ್ರೀಯ ಹಬ್ಬಗಳಂದು ನೀಡುವ ಪ್ರಶಸ್ತಿಗಳು ಲಾಬಿ ವ್ಯವಹಾರಕ್ಕೆ ಸೀಮಿತವಾದಂತಿದೆ. ಇಲ್ಲಿಯವರೆಗು ಯೋಗ್ಯರನ್ನ ಆಯ್ಕೆ ಮಾಡಿಕೊಂಡು ಬರುತ್ತಿದ್ದ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಪ್ರಸ್ತುತ ಸೇವಾ ಸೋಗು ಹಾಕುವ, ಫೋಟೋ ಕ್ಕಷ್ಟೆ ಸೀಮಿತವಾಗುವವರಿಗೆ ಪ್ರಶಸ್ತಿ ನೀಡಿ ಪ್ರಶಸ್ತಿಗೆ ಅವಮಾನ ಮಾಡಿವೆ. ಎಲೆ ಮರೆಕಾಯಂತೆ ಸೇವಾಮನೋಭಾವವುಳ್ಳ ಪ್ರಾಜ್ಞರನ್ನು ನಿರ್ಲಕ್ಷಿಸಿವೆ ಎಂಬ ಬೇಸರಿಕೆಯ ಸ್ವರ ಸಾರ್ವಜನಿಕರಿಂದ ಕೇಳಿಬಂದಿದೆ. ಅರ್ಜಿಮೇಲೆ ನಿರ್ಧಾರವಾಗುವ ಪ್ರಶಸ್ತಿ ಕೈ ಬಿಡಿ, ನೀವಾಗೆ ಗುರುತಿಸಿ ಪ್ರಶಸ್ತಿ ನೀಡಿ, ಯೋಗ್ಯರ ಯೋಗ್ಯತೆಗೆ ಗೌರವಕೊಡಿ, ಇಲ್ಲೂ ಓಲೈಕೆ ಮೂಲಕ ಪ್ರಶಸ್ತಿಯ ಮೌಲ್ಯವನ್ನು ಹಾಳುಗೆಡವಬೇಡಿ ಎಂದು ಎಚ್ಚರಿಸಿದ್ದಾರೆ.
– ಜೆ ಎಸ್ ಚಿದಾನಂದ ಗೌಡ, ಅಧ್ಯಕ್ಷರು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ (ರಿ) ಸೊರಬ

ಹಳೇ ಸೊರಬ ಪ್ರೌಢಶಾಲಾ ಹೆಣ್ಣು ಮಕ್ಕಳ ನೇತೃತ್ವದ ತಂಡ ಕರಾಟೆ ಮೂಲಕ ಸಾಹಸ ಪ್ರದರ್ಶನ ಮಾಡಿತು. ಪಂಚ್, ಬ್ಲಾಕ್ (ಡಿಫೆನ್ಸ್), ಸೆಲ್ಫ್ ಡಿಫೆನ್ಸ್ ಟ್ರಿಕ್ಸ್, ಕಿಕ್, ಟೈಲ್ ಮತ್ತು ಬ್ರಿಕ್ ಬ್ರೇಕಿಂಗ್, ದೃಶ್ಯ ರೋಮಾಂಚನಕಾರಿಯಾಗಿತ್ತು. ಪಿರಮಿಡ್ ನಾನಾ ಬಗೆಯ ಕರಾಟೆ ಕಲೆಗಳಿಗೆ ನೆರದಿದ್ದ ಜನ ಸಮೂಹ ಎದ್ದು ನಿಂತು ಚಪ್ಪಾಳೆ ತಂಟುವಂತೆ ಮಾಡಿತ್ತು.
ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ರೂಪಕ ಕಾರ್ಯಕ್ರಮ ಪ್ರೇಕ್ಷಕರ ಮನಸೋರೆ ಗೊಳಿಸಿತು. ತಾಪಂ ಇಒ ಡಾ. ಪ್ರದೀಪ್ ಕುಮಾರ್, ಬಿಇಒ ಟಿ.ಎಂ. ಸತ್ಯನಾರಾಯಣ, ಪುರಸಭೆ ಮುಖ್ಯಧಿಕಾರಿ ಬಾಲಚಂದ್ರಪ್ಪ, ದೈಹಿಕ ಶಿಕ್ಷಣ ಸಂಯೋಜಕ ಲಿಂಗರಾಜ ಒಡೆಯರ್, ಕರಾಟೆ ಶಿಕ್ಷಕ ಸನ್ ಸೈ ಪಂಚಪ್ಪ, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಮಧು ರಾಯ್ ಜಿ. ಶೇಟ್, ಎಂ.ಡಿ. ಉಮೇಶ್, ನಟರಾಜ ಉಪ್ಪಿನ್ ಶ್ರೀರಂಜಿನಿ ಪ್ರವೀಣ್ ಕುಮಾರ್, ಅನ್ಸರ್ ಅಹ್ಮದ್, ಪ್ರೇಮಾ ಟೋಕಪ್ಪ, ಆಫ್ರೀನಾ ಮೆಹಬೂಬ್ ಬಾಷಾ, ಸುಲ್ತಾನಾ ಸೈಯದ್ ಸಿರಾಜುದ್ದೀನ್, ಕಂದಾಯ ಇಲಾಖೆಯ ಬಿ.ಜೆ. ವಿನೋದ್, ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯವರು ಉಪಸ್ಥಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post