ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗಣಿಗಾರಿಕೆ ಸ್ಥಳದಿಂದ ಸಿಡಿಯುತ್ತಿರುವ ಕಲ್ಲು ತ್ರಾಂತ್ರಿಕವಾಗಿ ಎಷ್ಟು ಪ್ರಮಾಣದಲ್ಲಿ ಕಂಪನ ಉಂಟು ಮಾಡುತ್ತದೆ ಎನ್ನುವ ಬಗ್ಗೆ ಸೋಮವಾರ ಮತ್ತು ಮಂಗಳವಾರ 9 ಹಂತಗಳಲ್ಲಿ ಪರಿಶೀಲನೆ ನಡೆಸಿದ್ದೇವೆ ಎಂದು ಸುರತ್ಕಲ್ ನ ಎನ್‌ಐಟಿಕೆ ಗಣಿಗಾರಿಕೆ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ವಿ.ಆರ್. ಶಾಸ್ತ್ರಿ ಹೇಳಿದರು.
ಚಂದ್ರಗುತ್ತಿ ಹೋಬಳಿಯ ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಿಯಮ ಮೀರಿ ಸ್ಪೋಟಕಗಳನ್ನು ಬಳಸುತ್ತಿರುವ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿ, ದೂಳು ಮಿಶ್ರಿತ ಕುಲ್ಲು ಬಸ್ತಿಕೊಪ್ಪ ಸುತ್ತಮುತ್ತ ವಾಸವಾಗಿರುವ ಜನರ ಆರೋಗ್ಯದ ಮೇಲೆ ಉಂಟು ಮಾಡುತ್ತಿರುವ ಪರಿಣಾಮದ ಬಗ್ಗೆ, ಗಣಿಗಾರಿಕೆ ಸ್ಥಳದ ಸ್ಪೋಟದಿಂದ 100 ಮೀಟರ್ ಹಾಗೂ ಗರಿಷ್ಠ 400 ಮೀಟರ್ ವ್ಯಾಪ್ತಿಯಲ್ಲಿ ಉಂಟಾಗುವ ಕಂಪನದ ತೀವ್ರತೆಯ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಬಸ್ತಿಕೊಪ್ಪ ಗಣಿಗಾರಿಕೆ ಪ್ರದೇಶದಲ್ಲಿ ಭಾರಿ ಸ್ಫೋಟಕಗಳನ್ನು ಬಳಸಿ ಕಲ್ಲುನ್ನು ಒಡೆಯಲಾಗುತ್ತಿದೆ. ಸ್ಫೋಟದ ಸಮಯದಲ್ಲಿ ಹೊರಹೊಮ್ಮುವ ಕರ್ಕಶ ಶಬ್ದಕ್ಕೆ ಜನರ ಬದುಕು. ನೆಮ್ಮದಿ ಹಾಳಾಗುತ್ತಿದೆ. ಭಾರಿ ಗ್ರಾತ್ರದ ಕಲ್ಲು ಹಾಗೂ ಧೂಳು ಮಿಶ್ರಿತ ಸಣ್ಣ ಕಲ್ಲುಗಳು ಗ್ರಾಮದಲ್ಲಿ ವ್ಯಾಪಿಸುತ್ತಿವೆ. ಮಹಿಳೆಯರು. ಮಕ್ಕಳು ಹಾಗೂ ವೃದ್ಥರಲ್ಲಿ ಕಾಯಿಲೆಗಳು ಉಲ್ಬಣಿಸಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ. ಶಾಶ್ವತವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಡಾ.ಸೆಲ್ವಮಣಿ, ಹಿರಿಯ ಭೂವಿಜ್ಞಾನಿ ಪಿ.ಎಸ್. ನವೀನ್ ಸ್ಥಳಕ್ಕೆ ಭೇಟಿ ನೀಡಿದ್ದರು. ಗಣಿಗಾರಿಕೆಯಲ್ಲಿ ಬಳಸುತ್ತಿರುವ ಸ್ಫೋಟಗಳಿಂದ ಜನಜೀವನದ ಮೇಲೆ ಆಗುತ್ತಿರುವ ಪರಿಣಾಮ, ಗಣಿಗಾರಿಕೆ ಸ್ಥಳದಿಂದ ಕುಲ್ಲುಗಳು ಎಷ್ಟು ದೂರ ವ್ಯಾಪ್ತಿಯಲ್ಲಿ ಬೀಳುತ್ತಿವೆ ಎನ್ನುವ ಕುರಿತು ತಜ್ಞರಿಂದ ವರದಿ ಪಡೆದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
Also read: ಗಾಜನೂರು ಜಲಾಶಯ ಬಹುತೇಕ ಭರ್ತಿ: ಯಾವುದೇ ಕ್ಷಣದಲ್ಲಿ ನೀರು ಹೊರಕ್ಕೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ
ಗ್ರಾಮಸ್ಥರ ಮನವಿ ಆಲಿಸಿದ ನಂತರ ಮಾತನಾಡಿದ ಹಿರಿಯ ಭೂ ವಿಜ್ಞಾನಿ ಪಿ.ಎಸ್. ನವೀನ್ ಮಾತನಾಡಿ, ಈಗಾಗಲೇ ತನಿಖೆ ನಡೆಯುತ್ತಿದ್ದು ತಜ್ಞರು ಏನು ಸೂಚಿಸುತ್ತಾರೆ ಆ ಪ್ರಮಾಣದಲ್ಲಿ ಸ್ಪೋಟಕಗಳನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದರು.
ಭೂ ವಿಜ್ಞಾನಿಗಳಾದ ಮಾನಸ, ವಿದ್ಯಾ, ಜೀವವೈವಿಧ್ಯ ಮಂಡಳಿಯ ಸಮಿತಿ ತಜ್ಞ ಶ್ರೀಪಾದ ಬಿಚ್ಚುಗತ್ತಿ, ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಶಾನುಭೋಗ ತೀರ್ಥರಾಜ್, ಪೊಲೀಸ್ ಸಿಬ್ಬಂದಿ ಮಂಜುನಾಥ್, ಗ್ರಾಪಂ ಸದಸ್ಯ ಸಲೀಂ, ಗ್ರಾಮಸ್ಥರಾದ, ನಾಗರಾಜ್, ಪ್ರವೀಣ್, ರಘು, ಶಶಿಧರ್, ಲಕ್ಷ್ಮಣ್ ಅಂಚೆ, ಗಣಪತಿ, ಮತ್ತಿತರರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post