ಕಲ್ಪ ಮೀಡಿಯಾ ಹೌಸ್ | ಸೊರಬ |
ನಿಸರಿ, ಮಿಸರಿ, ಸೊಳ್ಳೆ ಜೇನು ಎಂದೆಲ್ಲ ಕರೆವ ಮುಜಂಟಿ ಜೇನು ಅವಸಾನದ ಅಂಚಿನಲ್ಲಿದೆ. ಕಚ್ಚದೆ, ಕುಟುಕದೆ ತಮ್ಮ ಪಾಡಿಗೆ ತಾವು ಪ್ರಕೃತಿಯ ಸಮತೋಲನಕ್ಕೆ ನೆರವಾಗುವ ಮುಜಂಟೆ ಜೇನು ಸಂರಕ್ಷಣೆಯ ಬಗ್ಗೆ ಕೃಷಿಕರು ಆಸಕ್ತಿ ವಹಿಸಬೇಕು ಎಂದು ಜೇನು ಕೃಷಿಕ ಗೌತಮ್ ಬಿಚ್ಚುಗತ್ತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾನಗಲ್ ತಾಲ್ಲೂಕು ವಲಯ ಪ್ರಗತಿ ಬಂಧು ಸಂಘದ ಸದಸ್ಯರಿಗೆ ತಾಲ್ಲೂಕು ಯಲಸಿ ಗ್ರಾಮದ ಸುವರ್ಣ ವನ ನರ್ಸರಿಯಲ್ಲಿ ಮಾಹಿತಿ ನೀಡಿದರು.
ಚಿಕ್ಕ ಚಿಕ್ಕ ಹೂವಿನ ಮಕರಂದವನ್ನು ಆಯ್ದು ತುಪ್ಪ ಮಾಡುವ ಈ ಜೇನು ಔಷಧೀಯ ಸಸ್ಯಗಳ ವೃದ್ಧಿಗೆ ಸಹಕರಿಸುತ್ತವೆ. ಆಯುರ್ವೇದದಲ್ಲಿ ಇದರ ತುಪ್ಪಕ್ಕೆ ಮಾನ್ಯತೆ ಇದ್ದು, ಬೆಲೆಯೂ ಇದೆ. ಶೂನ್ಯ ಬಂಡವಾಳ ದ ಮೂಲಕ ಸಾಕಾಣಿಕೆಗೆ ಅವಕಾಶವಿದ್ದು. ಸರಳವಾಗಿ ಸಾಕಬಹುದು. ಇಲ್ಲವೆ ಮರದ ಪೊಟರೆಗಳಲ್ಲಿ ಅಥವಾ ಗೋಡೆಯ ಸಂದಿ, ಇನ್ನಿತರ ಕಡೆ ಕಂಡು ಬಂದರೆ ಅವುಗಳಿಗೆ ತೊಂದರೆ ಕೊಡದೆ ರಕ್ಷಿಸಿ ಎಂದರು.
Also read: ಹಸಿಕಸವನ್ನು ಗೊಬ್ಬರ ಮಾಡಿ ಗಿಡಗಳಿಗೆ ಹಾಕಿ: ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಶ್ರೀಧರ್ ಕರೆ
ನಿಸರೆ ಜೇನು ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಿಬಿರಾರ್ಥಿಗಳ ಜೊತೆ ಹಾನಗಲ್ ತಾಲ್ಲೂಕು ಕೃಷಿ ಮೇಲ್ವಿಚಾರಕ ಮಾಲತೇಶ್, ಗ್ರಾಮದ ಕೃಷಿಕರಾದಬಿ.ವಿ. ಹರೀಶ್, ಟಿ.ಜೆ.ಹೊಯ್ಸಳ, ಬಿಚ್ಚುಗತ್ತಿ ಪ್ರಭಾಕರ ಇನ್ನೂ ಅನೇಕರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















