ಸೊರಬ: ತಾಲೂಕಿನ ಯಲಸಿ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸ.ನಂ 141ರಲ್ಲಿ ಅಕ್ರಮವಾಗಿ ಕಾಡು ಜಾತಿಯ ಮರಗಳನ್ನು ಜೆಸಿಬಿ ಬಳಸಿ ಸುಮಾರು 507 ಅಡಿ ಅಳತೆಯ ಮರದ ದಿಮ್ಮಿಗಳ ಸಮೇತ ಮರ ಕೆಡುವಲು ಬಳಸಿದ್ದ ಜೆಸಿಬಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ಎಸಿಎಫ್ ಶಿವಶರಣಯ್ಯ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಜಗದೀಶ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮೌನೇಶ್, ಜಗದೀಶ್, ಯಶವಂತ್ ದಾಳಿ ನಡೆಸಿ ಅಕ್ರಮ ಮರ ಕಡಿತಲೆಗೆ ಬಳಸಿದ್ದ ಜೆಸಿಬಿ ಹಾಗೂ ಮರದ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಬುಕ್ಕೇಶ್ ಬಿನ್ ಬಸವಣ್ಯಪ್ಪ ತಲೆಮರೆಸಿಕೊಂಡಿದ್ದು ಪತ್ತೆಗಾಗಿ ಬಲೆಬೀಸಿದ್ದಾರೆ.
ವರದಿ: ಮಧುರಾಮ್, ಸೊರಬ
Discussion about this post