ಹೊಸನಗರ ತಾ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಕಂದಾಯ ಅರಣ್ಯ ಪ್ರದೇಶ ವಿನಾಶದ ಅಂಚಿನಲ್ಲಿದೆ. ಖಾಸಗಿಯವರ ಹಿಡಿತದಲ್ಲಿ ಇರುವ ಅರಣ್ಯಗಳನ್ನು ಕಟಾವು ಮಾಡಲು ಮಾರಾಟ ಮಾಡಲು ಭೂ ದಾಖಲೆ ತಿದ್ದುಪಡಿ ಭೂಕಬಳಿಕೆ ಮಾಡಲು ತೀವ್ರಗತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯ ಕುರಿತು ಸಮಗ್ರ ಸ್ಥಳ ಪರಿಶೀಲನೆ ನಡೆಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಒತ್ತಾಯಿಸಿದರು.
ಸಾಗರ ತಾಲೂಕು ಸೈದೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭೇಟಿ ನೀಡಿದ ವೃಕ್ಷ ಲಕ್ಷ ಆಂದೋಲನದ ನಿಯೋಗ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿತು.
ಈ ಸ್ಥಳವನ್ನು ಅರಣ್ಯ, ಕಂದಾಯ ಇಲಾಖೆ ಜಂಟಿ ಕ್ರಮ ಕೈಗೊಂಡು ಪ್ರಸ್ತುತ ನಡೆಯುತ್ತಿರುವ ಎಲ್ಲ ಕಾಮಗಾರಿ, ಮರ ಕಟಾವು ನಿಲ್ಲಿಸಬೇಕು. ಭೂ ದಾಖಲೆ ಬದಲಾವಣೆಗೆ ಅವಕಾಶ ನೀಡಬಾರದು. ಭೂಮಿ ಮಾರಾಟಕ್ಕೆ ತಡೆ ಹಾಕಬೇಕು. ಭೂ ಕಬಳಿಕೆ ತಡೆಯಬೇಕು. ಅರಣ್ಯ –ಜೀವ ವೈವಿಧ್ಯ ರಕ್ಷಣೆ, ಸರ್ಕಾರಿ ಭೂಮಿ ಸಂರಕ್ಷಣೆ ಮಾಡಬೇಕು. ಇದೊಂದು ಭಾರೀ ಭೂ ಕಬಳಿಕೆ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಗಳ ರೈತರು, ಪರಿಸರ ಸಂಘ ಸಂಸ್ಥೆಗಳ ಪರವಾಗಿ ಈ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಆಗುಂಬೆ ಸಮೀಪದ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಕಂದಾಯ ಅರಣ್ಯಗಳ ಪ್ರಚಲಿತ ಪರಿಸ್ಥಿತಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಗಮನ ಸೆಳೆಯಿತು. ತುರ್ತು ಕ್ರಮಕ್ಕೆ ಸ್ಥಳದಲ್ಲೇ ಇದ್ದ ಎಸಿಯವರಿಗೆ ಸೂಚಿಸಿದರು.
ಜೀವವೈವಿಧ್ಯ ಮಂಡಳಿಯ ಸದಸ್ಯ ಕೆ. ವೆಂಕಟೇಶ, ಡಾ. ಪ್ರಕಾಶ್ ಮೇಸ್ತ, ಶ್ರೀಪಾದ ಬಿಚ್ಚುಗತ್ತಿ, ಆನೆಗುಳಿ ಸುಬ್ಬರಾವ್, ಡಾ. ಕೇಶವ ಕೊರ್ಸೆ, ಬಾಲು ಸಾಯಿಮನೆ ಮುಂತಾದವರಿದ್ದರು.
Discussion about this post