No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Sunday, August 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಮಲೆನಾಡ ಸುಸ್ಥಿರ ಕೃಷಿ ಅಭಿವೃದ್ಧಿಗೆ ಸರ್ಕಾರ ಬದ್ಧ: ವಿಶ್ವೇಶ್ವರ ಹೆಗಡೆ ಕಾಗೇರಿ

kalpa News by kalpa News
January 10, 2023
in ಸೊರಬ
0
ಮಲೆನಾಡ ಸುಸ್ಥಿರ ಕೃಷಿ ಅಭಿವೃದ್ಧಿಗೆ ಸರ್ಕಾರ ಬದ್ಧ: ವಿಶ್ವೇಶ್ವರ ಹೆಗಡೆ ಕಾಗೇರಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಸೊರಬ  |

ಮಲೆನಾಡ ಸುಸ್ಥಿರ ಕೃಷಿ ಅಭಿವೃದ್ಧಿಗೆ ಸರ್ಕಾರ ಬದ್ಧವಿದ್ದು ಈಗಾಗಲೇ ಹಲವಾರು ಕೃಷಿ ಪೂರಕ ಸವಲತ್ತುಗಳನ್ನು ಒದಗಿಸುತ್ತ ಬರಲಾಗಿದೆ. ಈ ನಿಟ್ಟಿನಲ್ಲಿ ಕೃಷಿಕರೆ ಒಂದಾಗಿ ಕೃಷಿ ಸಮಸ್ಯೆಗಳನ್ನು ಹೀಗೆ ಸಮಗ್ರವಾಗಿ ಚಿಂತಿಸಿ ಸರ್ಕಾರದ ಗಮನ ಸೆಳೆಯುಲು ಮುಂದಾಗಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ Vishweshwara Hegade Kageri ಹರ್ಷ ವ್ಯಕ್ತಪಡಿಸಿದರು.

ಶಿರಸಿಯ ಕದಂಬ ಮಾರ್ಕೇಟ್ ಸಭಾಂಗಣದಲ್ಲಿ ಮಲೆನಾಡು ಶಿರಸಿ, ಸಾಗರ, ಸೊರಬ ಭಾಗದ ಕೃಷಿಕರು ಹಮ್ಮಿಕೊಂಡಿದ್ದ ಮಲೆನಾಡು ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಅವಕಾಶವಿದೆ. ಮಲೆನಾಡು ಕೃಷಿಕರು ಆಪೇಕ್ಷಿಸಿದ ಬೇಡಿಕೆಗಳನ್ನು ಕೂಲಂಕುಷವಾಗಿ ವಿಧಾನ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಹೀಗೆ ಮೇಲಿಂದ ಮೇಲೆ ಕೃಷಿಕರು ತಮ್ಮ ಸ್ಥಳೀಯ ಕೃಷಿ ವೈರುಧ್ಯಗಳನ್ನು ಬೆಳಕಿಗೆ ತರುವತ್ತ ಕ್ರಿಯಾಶೀಲರಾದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಕರ್ನಾಟಕ ಸರಕಾರದ 2023-24ನೇ ಸಾಲಿನ ಮುಂಗಡಪತ್ರದಲ್ಲಿ ನಮ್ಮ ಮಲೆನಾಡು ಪ್ರಾಂತ್ಯದ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಚಟುವಟಿಕೆಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕೋರಲು ಸಮಾಲೋಚನೆಗಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತಜ್ಞರು, ಪ್ರಾಧ್ಯಾಪಕರು, ಸಹಕಾರಿ ನೇತಾರರು, ಮುಂತಾದವರು ಮಲೆನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಕ್ರಮಗಳ ಬಗ್ಗೆ, ವಿಶೇಷವಾಗಿ ಬಜೆಟ್‌ನಲ್ಲಿ ಸೇರ್ಪಡೆ ಆಗಬೇಕಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಾರ್ವಜನಿಕರಿಂದಲೂ ಈ ವಿಷಯಗಳ ಬಗ್ಗೆ ಹಲವು ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಂತರ ಸಭಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರಿಷ್ಕೃತ ವರದಿಯನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ವಿವಿಧ ಕೃಷಿ ವಲಯದ ಅಧಿಕಾರಿಗಳು, ತಜ್ಞರು, ಪ್ರಗತಿ ಪರ ಕೃಷಿಕರು ಪಾಲ್ಗೊಂಡು ತಮ್ಮ ವಿದ್ವತ್‌ಪೂರ್ಣ ಅಭಿಪ್ರಾಯಗಳನ್ನು ಹಂಚಿಕೊಂಡರು.
ರೈತ ಕುಟುಂಬಗಳಿಗೆ ಶೇ.50ರಷ್ಟು ಸಬ್ಸಿಡಿ ನೀಡಿ ಡ್ರೈಯರ್ ಯಂತ್ರ ನೀಡಬೇಕು. ತೋಟಗಾರಿಕಾ ಇಲಾಖೆ ಮೆಣಸಿನ ಬಳ್ಳಿ ಸತ್ತಿದ್ದಕ್ಕೆ, ಅಡಿಕೆ ಮರ ಸತ್ತಿದ್ದಕ್ಕೆ ಸರಿಯಾದ ಗರಿಷ್ಠ ಮೌಲ್ಯ ನಿರ್ಧರಿಸಿ ರೈತರಿಗೆ ಪರಿಹಾರ ನೀಡಬೇಕು. ಏಲಕ್ಕಿ, ಮೆಣಸು, ದಾಲ್ಚಿನಿ, ಜಾಯಿಕಾಯಿ ಸೇರಿದಂತೆ ಹಲವು ಸಾಂಬಾರು ಗಿಡಗಳನ್ನು ಬೆಳೆಸುವ ವಿಶೇಷ ಯೋಜನೆಗೆ ಕೇಂದ್ರ ಸಾಂಬಾರು ಮಂಡಳಿ ನೆರವು ನೀಡಬೇಕು ಎಂದು ಹೇಳಿದರು.

ರೈತರು ಜೇನು ಕುಟುಂಬ ಸಾಕುವಂತೆ ಜೇನು ಅಭಿವೃದ್ಧಿ ಯೋಜನೆ ಜಾರಿ ಮಾಡಲು ತೋಟಗಾರಿಕಾ ಇಲಾಖೆ ವಿಶೇಷ ತರಬೇತಿ, ನಿರ್ವಹಣೆ, ಶುದ್ಧೀಕರಣ ಘಟಕ, ಮಾರುಕಟ್ಟೆ, ಇತ್ಯಾದಿ ಸಮಗ್ರ ಯೋಜನೆ ರೂಪಿಸಿ ಜಾರಿ ಮಾಡಬೇಕು. ಬಿದಿರು ಬೆಳೆಸಲು ರಾಷ್ಟ್ರೀಯ ಯೋಜನೆ ಜಾರಿ ಆಗುತ್ತಿದೆ. ಈ ಯೋಜನೆ ಅಡಿಯಲ್ಲಿ ರೈತರು ಬಿದಿರು ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಬೇಕು ಎಂದರು.
ಕಾನು ಬೆಟ್ಟ ಸಂರಕ್ಷಣೆ-ಅಭಿವೃದ್ಧಿ ಯೋಜನೆಯನ್ನು ಹಳ್ಳಿಗಳಲ್ಲಿ ಅರಣ್ಯ ಇಲಾಖೆ ಜಾರಿ ಮಾಡಬೇಕು. ಗ್ರಾಮ ಅರಣ್ಯ ಸಮಿತಿಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಬೇಕು. ಹಳ್ಳಿಗಳಲ್ಲಿ ಎಲ್ಲ ರೈತರಿಗೆ ಶೇ.75ರಷ್ಟುಸಬ್ಸಿಡಿ ನೀಡಿ ಸೋಲಾರ್ ನೀರು ಕಾಯಿಸುವ ಯೋಜನೆ ಹಾಗೂ ಸೋಲಾರ್ ಮನೆದೀಪ ಯೋಜನೆ ಜಾರಿ ಮಾಡಬೇಕು. ತೋಟಗಳಿಗೆ ಸೊಲಾರ್ ಬೇಲಿ ನಿರ್ಮಿಸಲು ಶೇ.100ರಷ್ಟುಸಬ್ಸಿಡಿ ನೀಡುವ ಯೋಜನೆಯನ್ನು ಅರಣ್ಯ ಇಲಾಖೆ ಜಾರಿ ಮಾಡಬೇಕು. ಮಂಗಗಳ ಹಾವಳಿ ಮಿತಿಮೀರಿ ಬೆಳೆ ಹಾನಿ ವಿಪರೀತವಾಗಿದೆ. ಅರಣ್ಯ ಇಲಾಖೆ ಈ ಎಲ್ಲಾ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು. ಎಕರೆಗೆ ರೂ. 5000ದಂತೆ ಪರಿಹಾರ ನೀಡಬೇಕು. ನರೆಗಾ ಯೋಜನೆಯಲ್ಲಿ ಮಂಗಗಳ ಹಾವಳಿ ತಡೆಗಟ್ಟಲು ಮಂಗನ ಕಾವಲು ಯೋಜನೆ ಜಾರಿ ಮಾಡಬೇಕು. ರೈತರು ಅಪ್ಪೆಮಿಡಿ ಮಾವು ಗಿಡಗಳನ್ನು (ತಲಾ 100 ಗಿಡ) ಬೆಳೆಸಬೇಕು. ಮಿಡಿ ಮಾವು ಬೆಳೆಗಾರರ ಸಂಘ ಬಲಪಡಿಸುವ ಮೂಲಕ ತೋಟಗಾರಿಕಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದರು.

ರೈತರಿಗೆ ಹಾಲು ಉತ್ಪಾದಕ ಸಂಘಗಳ ಸಹಕಾರದಲ್ಲಿ ಸ್ಥಳೀಯ ಜಾನುವಾರು ತಳಿ ಅಭಿವೃದ್ಧಿ ಯೋಜನೆ ರೂಪಿಸಿ ಹೈನೋದ್ಯಮ ವಿಕಾಸ ಯೋಜನೆ ರೂಪಿಸಬೇಕು. ಶೇ.50ರಷ್ಟು ಸಬ್ಸಿಡಿ ನೀಡಿ ಸ್ಥಳೀಯ ಜಾನುವಾರು ಅಭಿವೃದ್ಧಿ ಪಡಿಸಿರುವ ತಳಿ ಆಕಳು ನೀಡುವ ಯೋಜನೆ ರೂಪಿಸಬೇಕು. ರೈತರು ಹನಿ ನೀರಾವರಿ ಯೋಜನೆ ಅಳವಡಿಸಲು ಶೇ.90ರಷ್ಟು ಸಬ್ಸಿಡಿ ನೀಡುವ ವಿಶೇಷ ಯೋಜನೆಯನ್ನು ಕೃಷಿ ಇಲಾಖೆ ಜಾರಿ ಮಾಡಬೇಕು. ರೈತರು ಕೃಷಿ ಹೊಂಡ ನಿರ್ಮಿಸಲು ಶೇ.90ರಷ್ಟು ಸಬ್ಸಿಡಿ ನೀಡಬೇಕು. ಕೃಷಿ ವಿಶ್ವವಿದ್ಯಾಲಯ ಗ್ರಾಮಗಳಲ್ಲಿ ಈ ಮೇಲಿನ ಮಾದರಿ ಯೋಜನೆ ಪ್ರಾತ್ಯಕ್ಷಿಕೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯ ಮಲೆನಾಡು ಮಾದರಿ ಸಮಗ್ರ ಯೋಜನೆಗೆ ತಾಂತ್ರಿಕ ಬೆಂಬಲ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿನ ಬಜೆಟ್ ಸಮಯದಲ್ಲಿ ಅಂಗೀಕರಿಸುವಂತೆ ಸಭಾಧ್ಯಕ್ಷರಿಗೆ ಮನವಿ ಪತ್ರ ನೀಡಲಾಯಿತು.
ಕದಂಬ ಸಾವಯವ ಟ್ರಸ್ಟ್ ಶಿರಸಿ, ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ, ವೃಕ್ಷಲಕ್ಷ ಆಂದೋಲನ, ಕರ್ನಾಟಕ, ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಮಠದೇವಳ, ಪರಿಸರ ಜಾಗೃತಿ ಟ್ರಸ್ಟ್, ಗೋಸಂರಕ್ಷಣಾ ಸಮಿತಿ ಸೊರಬ ಇನ್ನೂ ಮುಂತಾದ ಸಂಘಟನೆಗಳವರು ಸಮಾಲೋಚನೆಯಲ್ಲಿ ಪಾಲ್ಗೊಂಡರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsSorabaVishweshwara Hegade Kageriಮಲೆನಾಡು_ಸುದ್ಧಿವಿಶ್ವೇಶ್ವರ ಹೆಗಡೆ ಕಾಗೇರಿಶಿವಮೊಗ್ಗ_ನ್ಯೂಸ್ಸೊರಬ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭಜರಂಗದಳದ ಕಾರ್ಯಕರ್ತನ ಮೇಲೆ ದಾಳಿ ಹಿನ್ನೆಲೆ ಆರೋಪಿಗಳ ಬಂಧನಕ್ಕೆ ಶಾಸಕ ಹಾಲಪ್ಪ ಸೂಚನೆ

Next Post

ಕನ್ನಡದ ಮತ್ತೊಂದು ದಾಖಲೆ: ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದ `ಕಾಂತಾರ’: ಯಾವ ವಿಭಾಗ?

kalpa News

kalpa News

Next Post
ಕಾಂತಾರ ಅಬ್ಬರಕ್ಕೆ ಬೇರೆ ಸಿನಿಮಾಗಳು ಧೂಳಿಪಟ: ನೂರು ಕೋಟಿ ಕ್ಲಬ್ ಸೇರಿದ ರಿಷಬ್ ಶೆಟ್ಟಿ ಚಿತ್ರ

ಕನ್ನಡದ ಮತ್ತೊಂದು ದಾಖಲೆ: ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದ `ಕಾಂತಾರ': ಯಾವ ವಿಭಾಗ?

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL