ಸೊರಬ: ಮಾನವನ ವಿಕಾಸಕ್ಕೆ ಪೂರಕವಾಗುವ ಶಿಕ್ಷಣ ನೀಡುವ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಟಕರವಾದದು. ಹಾಗಾಗಿಯೇ ಭಾರತೀಯರಲ್ಲಿ ಗುರುವಿಗೆ ಅಗ್ರ ಸ್ಥಾನ ಕಲ್ಪಿಸಿದ್ದಾರೆ ಎಂದು ಸ್ಮಾರ್ ಟ್ಕಿಡ್ಜ್ ಶಿಕ್ಷಕಿ ಪ್ರಿಯಾ ಹೇಳಿದರು.
ಪಟ್ಟಣದ ಸಮರ್ಪಣ ಎಜುಕೇಶನಲ್ ಟ್ರಸ್ಟ್’ನ ಸ್ಮಾರ್ ಟ್ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಟ್ರಸ್ಟ್ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸೊರಬ ಘಟಕ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ತಲತಲಾಂತರದಿಂದಲೂ ವೇದಪುರಾಣಗಳ ಕಾಲದಿಂದಲೂ ಗುರುವಿಗೆ ವಿಶಿಷ್ಟ ಸ್ಥಾನ ನೀಡಿದ್ದು, ಗುರುವನ್ನು ದೇವರಿಗೆ ಹೋಲಿಸಿರುವುದು ಅರ್ಥಪೂರ್ಣವೆನಿಸುತ್ತದೆ. ಯಾವುದೇ ಕಾರ್ಯದ ಆರಂಭಕ್ಕೆ ಮೊದಲು ಗುರುವನ್ನು ಸ್ಮರಿಸುವ ಸತ್ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ವೇದವ್ಯಾಸರಿಗೆ ಮತ್ತು ಗುರುಗಳಿಗೆ ವಿಶೇಷ ಸ್ಥಾನ ನೀಡಲಾಗುತ್ತಿದೆ ಎಂದರು.
ಗುರುಪೂರ್ಣಿಮೆಯ ಕುರಿತಾಗಿ ಅಭಾಸಾಪ ತಾಲೂಕು ಘಟಕದ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು.
ಪೂಪ್ರಾ ಶಾಲೆಯ ಶಿಕ್ಷಕಿ ಪ್ರಿಯಾ, ಸವಿತಾ, ಅಕ್ಷತಾ, ಶೀಲಾ, ಚಿತ್ರ ಇವರುಗಳಿಗೆ ಮಕ್ಕಳು ಹೂಗುಚ್ಚ ನೀಡಿ, ಗುರುಬ್ರಹ್ಮಗುರುವಿಷ್ಣು ಶ್ಲೋಕದ ಮೂಲಕ ಗುರು ಪ್ರಣಾಮ ಸಲ್ಲಿಸಿದರು. ಮಕ್ಕಳ ಗುರು ಶಿಷ್ಯರ ಕಥೆಗಳ ವಾಚನವಿತ್ತು.
ಸಂಸ್ಥೆಯ ಮಮತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕೆ.ಪಿ. ರಾಜೇಶ್, ಪೋಷಕರು, ಶಾಲಾ ಸಿಬ್ಬಂದಿ ಗೀತಾ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)







Discussion about this post