ಸೊರಬ: ಮಾಜಿ ಪ್ರಧಾನಿ ಅಟಿಲ್‌ಜಿ ನಿಧನಕ್ಕೆ ತಾಲೂಕಿನಾದ್ಯಂತ ಭಾವಪೂರ್ಣಶೋಕಾಚರಣೆ ನಡೆಸಲಾಯಿತು.
ರಂಗಮಂದಿರದಲ್ಲಿ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಕುಮಾರಬಂಗಾರಪ್ಪ ಸೇರಿದಂತೆ ತಾಲ್ಲೂಕಿನ ಅನೇಕ ರಾಜಕೀಯ ಮುಖಂಡರು, ಅಟಿಲ್‌ಜಿ ಅಭಿಮಾನಿಗಳು, ಅಧಿಕಾರಿಗಳು ಸೇರಿದ್ದರು.
ಚಂದ್ರಗುತ್ತಿ, ಜಡೆ, ಆನವಟ್ಟಿ, ಉಳವಿ ಇನ್ನೂ ಅನೇಕ ಕಡೆ ಶ್ರದ್ಧಾಂಜಲಿ ಸಲ್ಲಿಸಿದರು. ಚಂದ್ರಗುತ್ತಿಯಲ್ಲಿ ಗ್ರಾಮಸ್ಥರಾದ ರಘು ಸ್ವಾಧಿ, ವಸಂತ ಶೇಟ್, ಪ್ರಕಾಶ ಮಿರ್ಜಿ, ಎಂ. ಪಿ. ರತ್ನಾಕರ್, ರೇಣುಕಾ ಪ್ರಸಾದ್, ದಿನೇಶ್ ಅಂಚೆ, ಪ್ರಜ್ವಲ್, ನಾಗರಾಜ, ಎಂ. ಜಿ. ವೆಂಕಟೇಶ, ಎಲ್. ಪ್ರವೀಣ ಮಿರ್ಜಿ, ನಾಡಿಗ್ ರಾಮರಾವ್, ಶಿವಶಂಕರ ಗೌಡ, ಶರದ್ ನಾಯಕ್, ಜೆ. ಎಸ್. ನಾಯ್‌ಕ್, ಮಂಜಪ್ಪ ಮಂಚೇರ್, ಕೃಷ್ಣಮೂರ್ತಿ, ಸದಾಶಿವ, ಸಣ್ಣಪ್ಪ, ಮುಂತಾದವರು ಹಾಜರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post