ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮಗ್ರ ಹಾಗೂ ಸುಸ್ಥಿರ ಕೃಷಿಯಲ್ಲಿ ಜೇನಿನ ಪಾತ್ರ ಹಿರಿದು, ಉತ್ತಮ ಇಳುವರಿಯ ಬೆಳೆಯೊಂದಿಗೆ ಅತ್ಯುತ್ತಮ ಆದಾಯ ನೀಡುವ ಜೇನು ಕೃಷಿಯಿಂದ ಜೀವವೈವಿಧ್ಯತೆಯ ಸಮತೋಲನ, ನಮ್ಮ ಆರೋಗ್ಯದ ಸದೃಢತೆಗೂ ಇವು ನೆರವಾಗುತ್ತವೆ ಎಂದು ಗೌತಮ್ ಬಿಚ್ಚುಗತ್ತಿ ಹೇಳಿದರು.
ಶಿಕಾರಿಪುರ ಹಳೇಮುಗಳಗೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಇವರು ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
Also read: Karnataka Posts Strong Revenue Growth: CM Reviews Progress
ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಕೆಲವು ತಳಿಗಳ ಜೇನುಗಳಿದ್ದು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಆದ್ದರಿಂದ ಜೇನುಗಳ ಸಂತತಿಯನ್ನು ಉಳಿಸುವ ಮೂಲಕ ಪ್ರಕೃತಿಯ ಅಸಮತೋಲನ ತಪ್ಪಿಸ ಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತೋಟಗಳಲ್ಲಿ ವಿಪರೀತ ಕೀಟ ನಾಶಕ ಮತ್ತು ಕಳೆನಾಶಕ ಬಳಕೆ ಹೆಚ್ಚಾಗಿರುವುದರಿಂದ ಜೇನು ಸಂತತಿ ಕ್ಷೀಣಿಸುತ್ತಿದೆ. ಆದ್ದರಿಂದ ರೈತರು ಎಚ್ಚರಿಕೆ ವಹಿಸಬೇಕಿದೆ. ಸುಸ್ಥಿರ ಕೃಷಿಯತ್ತ ಕೃಷಿಕ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಅತಂತ್ರತೆ ಎದುರಿಸಬೇಕಾದ ಅನಿವಾರ್ಯತೆ ಬರಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಹಾಗೂ ಡಾ. ಕೃಷ್ಣ ಕುಮಾರ್, ಶಿಬಿರಾರ್ಥಿಗಳು, ಗ್ರಾಮದ ಅನೇಕ ಕೃಷಿಕರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post