ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರ ಸಮತೋಲನ ಕಳೆದುಕೊಂಡರೆ ಮನುಷ್ಯನ ದೈನಂದಿನ ಬದುಕು ತೀರಾ ಸಂಕಷ್ಟಕ್ಕೆ ಒಳಗಾಗುತ್ತದೆ. ಇರುವ ಪರಿಸರಕ್ಕೆ ಹೊಂದಿಕೊಂಡು ಬದುಕುವ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಕಲಿಸುವುದು ತೀರಾ ಅಗತ್ಯವಿದೆ ಎಂದು ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಸುರೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕು ತಲ್ಲೂರು ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶ್ರೀಧಕ್ಷೇಗ್ರಾ ಬಿ ಸಿ ಟ್ರಸ್ಟ್ ಏರ್ಪಡಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಮಕ್ಕಳಿಗೆ ಪರಿಸರ ಚಟುವಟಿಕೆಗಳಾದ ಪ್ರಬಂಧ, ಚಿತ್ರ, ಗಿಡದ ಎಲೆಗಳಿಂದ ಮರ ಗಿಡಗಳನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹವಾಮಾನ ವೈಪರೀತ್ಯ, ವಾಯು ಮಾಲಿನ್ಯಗಳಿಗೆ ಕಾರಣ ಮತ್ತು ಪರಿಹಾರದ ಕುರಿತಾಗಿ ಮಕ್ಕಳಿಗೆ ತಿಳಿಸಲಾಯಿತು. ಬಿ ಸಿ ಟ್ರಸ್ಟ್ ವತಿಯಿಂದ ಬಡವರಿಗೆ, ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ಟ್ರಸ್ಟ್ ಅವರು ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಜಟ್ಟಪ್ಪ, ಮುಶಿ ಎಸ್.ಪ್ರೇಮ, ಸಶಿ ಮೀರಾ, ಮಂಗಳಗೌರಿ, ಅಂಬಿಕಾ, ಶೀಲಾ, ಸೌಜನ್ಯ, ಶಾಲಾ ಸಮಿತಿಯವರು, ಮಕ್ಕಳು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post